ಬೆಂಗಳೂರು: ಬಡವರ ಮನೆಗಳಲ್ಲಿ ಒಂದು ಇದ್ದರೆ ಇನ್ನೊಂದು ಇರಲ್ಲ. ಅಂಥದ್ದರಲ್ಲಿ ಸ್ಮಾರ್ಟ್ ಟಿವಿ (Smart TV) ಗಳ ಮೂಲಕ ಮಕ್ಕಳು ಹೇಗೆ ಆನ್‍ಲೈನ್ ಕ್ಲಾಸ್ (Online Class) ಕೇಳ್ತಾರೆ ಹೇಳಿ. ಅಂತಹ ಬಡವರ ಮನೆಗಳಿಗೆ ಅದರಲ್ಲೂ ವಿದ್ಯಾರ್ಥಿಗಳಿರೋ ಕಡು ಬಡವರ ಮನೆಗಳಿಗೆ ಸ್ಮಾರ್ಟ್ ಎಲ್ ಇ ಡಿ ಟಿವಿ (LED TV) ಗಳನ್ನ ವಿತರಣೆ ಮಾಡೋ ಕೆಲಸಕ್ಕೆ ಶಾಸಕ ಬೈರತಿ ಸುರೇಶ್ (Byrathi Suresh) ಮುಂದಾಗಿದ್ದಾರೆ.
Advertisement
ಹೌದು. ಕಳದ ವರ್ಷ ತಮ್ಮ ಕ್ಷೇತ್ರದ ಬಡವರಿಗೆ ಅದರಲ್ಲೂ ವಿದ್ಯಾರ್ಥಿಗಳು ಇರೋ ಮನೆಗಳನ್ನ ಗುರುತಿಸಿ ಅಂತಹ ಮನೆಗಳಿಗೆ 32 ಇಂಚಿನ ಎಲ್ ಇಡಿ ಸ್ಮಾರ್ಟ್ ಟಿವಿಗಳನ್ನ ವಿತರಣೆ ಮಾಡಲಾಗುತ್ತಿದೆ. ಬಡವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮತ್ತು ಮನೆಯವರ ಅನುಕೂಲಕ್ಕಾಗಿ ಹೀಗೆ ಎಲ್‍ಇಡಿ ಸ್ಮಾರ್ಟ್ ಟಿವಿ ನೀಡುತ್ತಿರೋದಾಗಿ ಹೇಳಿದ ಸುರೇಶ್ ಅವರು, ಇದರಿಂದ ಮಕ್ಕಳು ಪೆನ್ ಡ್ರೈವ್ (Pendrive) ಬಳಸಿಕೊಂಡು ವಿದ್ಯಾಭ್ಯಾಸ ಮಾಡಬಹುದು. ಆನ್ ಲೈನ್ ಕ್ಲಾಸ್ ಆಟೆಂಡ್ ಮಾಡಬಹುದು ಅಂತಾ ತಿಳಿಸಿದರು. ಇದನ್ನೂ ಓದಿ: ಡಿಕೆಶಿ ಬಾವ ಎಎಪಿಗೆ ಸೇರ್ಪಡೆ
Advertisement
Advertisement
ನಮ್ಮ ಮನೆಯಲ್ಲಿ ಸ್ಮಾರ್ಟ್ ಟಿವಿ ಇರಲಿಲ್ಲ, ನಮ್ಮ ಶಾಸಕರು ನಮ್ಮ ಮನೆಗಳನ್ನ ಗುರುತಿಸಿ ಎಲ್ ಇಡಿ ಟಿವಿ ನೀಡಿದ್ದಾರೆ. ಮಕ್ಕಳು ಹಿಂದಿನಿಂದಲೂ ಸ್ಮಾರ್ಟ್ ಟಿವಿ ತಂದರೆ ಎಜುಕೇಶನ್ ಗೆ ಹೆಲ್ಪ್ ಆಗುತ್ತೆ ಅಂತಾ ಕೇಳ್ತಾನೆ ಇದ್ದರು. ತರೋದಕ್ಕೆ ನಮಗೆ ಆಗಿರಲಿಲ್ಲ ಈಗ ಶಾಸಕರು ನೀಡಿರೋದ್ರಿಂದ ಮಕ್ಕಳು ಬೇಕಾದ ಪಾಠ ಕೇಳೋದಕ್ಕೆ ಅನುಕೂಲವಾಗಿದೆ. ಅಂದರೆ ವಿದ್ಯಾರ್ಥಿಗಳು ಸಹ ಶಾಸಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಇದು ತುಂಬಾ ಯುಸ್ ಫುಲ್ ಆದ ಕೆಲಸ, ನಾವೂ ಲ್ಯಾಪ್ ಟಾಪ್ (Laptop) ರೀತಿಯಲ್ಲಿ ಟಿವಿಯನ್ನ ಬಳಸಿಕೊಂಡು ಆನ್‍ಲೈನ್ ಕ್ಲಾಸ್ ಆಟೆಂಡ್ ಆಗಬಹುದು ಅಂತಾರೆ.
Advertisement
ಬಡವರ ಮನೆಗಳಿಗೆ ದೀಪವಾಗಿರೋ ಶಾಸಕ ಬೈರತಿ ಸುರೇಶ್, ಕ್ಷೇತ್ರದಲ್ಲಿರೋ ಎಲ್ಲ ಬಡವರ ಮನೆಗಳನ್ನ ಗುರುತಿಸಿ ಎಲ್‍ಇಡಿ ಟಿವಿ ನೀಡೋ ಕಾರ್ಯ ಮಾಡುತ್ತಿದ್ದಾರೆ. ಕ್ಷೇತ್ರದ ಜನ ಅದರಲ್ಲೂ ಬಡವರ ಮನೆಯ ವಿದ್ಯಾರ್ಥಿಗಳು ಶಾಸಕರ ಕಾರ್ಯ ಹೀಗೆ ಬಡವರ ಪರವಾಗಿ ಮುಂದುವರಿಯಲಿ ಅಂತಾ ಹೇಳುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k