ಕಲಬುರಗಿ: ಜನಪ್ರತಿನಿಧಿಗಳಾಗಿದ್ದವರು ನಾವೇನ್ ಮಾಡ್ತಿದ್ದೇವೆ ಅನ್ನೋದನ್ನೇ ಮರೆತು ಬಿಡ್ತಾರೆ. ಅಧಿಕಾರದ ಮದ ಅವರ ಬಾಯಿಂದ ಏನ್ ಬೇಕಾದ್ರೂ ಮಾತಾಡಿಸಿ ಬಿಡುತ್ತೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ.
ತಮ್ಮ ಮಾಜಿ ಆಪ್ತ ಸಹಾಯಕ ದೇವೇಂದ್ರ ಬಿರಾದಾರ್ ಕಾಮದಾಟದ ವರದಿ ಪ್ರಸಾರ ಮಾಡಿದ್ದಕ್ಕೆ ಆಳಂದ ಕೆಜೆಪಿ ಶಾಸಕ ಬಿ.ಆರ್.ಪಾಟೀಲ್ ಬಾಯಿಗೆ ಬಂದಂತೆ ಮಾತಾಡಿದ್ದಾರೆ. ಕೆಂಡದಂತಾ ಕೋಪ ಮಾಡಿಕೊಂಡು ಪಬ್ಲಿಕ್ ಟಿವಿ ವರದಿಗಾರ ಪ್ರವೀಣ್ ರೆಡ್ಡಿಗೆ ಕರೆ ಮಾಡಿ ಸಿಕ್ಕಾಪಟ್ಟೆ ರೇಗಾಡಿದ್ದಾರೆ.
Advertisement
ವೈಯಕ್ತಿಕ ವಿಚಾರಗಳನ್ನು ತೆಗೆದುಕೊಂಡು ನಿಂದಿಸಿದ್ರು. ನಿಮ್ಮ ಟಿವಿಯಲ್ಲಿ ಏನ್ ಸುದ್ದಿ ಹಾಕಿದ್ದೀರಾ. ನಿಮ್ಮ ಆಫೀಸಿಗೆ ಬರ್ತೀನಿ ಇರಿ ಅಂತಾ ಬೆದರಿಸಿದ್ರು. ಶಾಸಕರ ಈ ಧಮ್ಕಿ ಬಗ್ಗೆ ಪಬ್ಲಿಕ್ ಟಿವಿ ಬೆಳಗ್ಗೆಯಿಂದ ಸುದ್ದಿ ಪ್ರಸಾರ ಮಾಡಿತ್ತು. ನಂತರ ಫೋನ್‍ಗೆ ಬಂದ ಸನ್ಮಾನ್ಯ ಪಾಟೀಲ್ರು ಸಂಜೆ 6 ಗಂಟೆಗೆ ನಾನೇ ಕಲಬುರಗಿಯ ನಿಮ್ಮ ಕಚೇರಿಗೆ ಬರ್ತೇನೆ ಅಂದ್ರು.
Advertisement
ಕೊನೆಗೆ 1 ಗಂಟೆ ತಡವಾಗಿ ಕಚೇರಿಗೆ ಬಂದ ಶಾಸಕರು ಯಥಾ ಪ್ರಕಾರ ತಮ್ಮ ನಿಂದನಾತ್ಮಕ ಹೇಳಿಕೆಯನ್ನ ಸಮರ್ಥಿಸಿಕೊಂಡ್ರು. ನಾನು ಮನುಷ್ಯ ನಾನು ಉಪ್ಪು ತಿನ್ತೇನೆ. ನನ್ನ ಮಾನನಷ್ಟ ಮಾಡಿ ಟಿಆರ್‍ಪಿಗಾಗಿ ಹೀಗೆಲ್ಲಾ ಮಾಡ್ತೀರಾ ಅಂತ ಹೇಳಿ 10 ನಿಮಿಷವೂ ನಿಲ್ಲದೆ ಅಲ್ಲಿಂದ ನಡೆದೇ ಬಿಟ್ಟರು.
Advertisement
ಆದ್ರೆ, ನಮ್ಮ ಪ್ರಶ್ನೆಗೆ ಉತ್ತರ ಸಿಗಲಿಲ್ಲ. ಹಾಗಾಗಿ, ನಮ್ಮ ಪ್ರತಿನಿಧಿ ಅವರ ಬೆನ್ನತ್ತಿ ಹೋದರೂ ಸಹ ಪಾಟೀಲರು ಕ್ಷಮೆಯನ್ನೂ ಕೇಳಲಿಲ್ಲ. ಬದಲಿಗೆ ತಮ್ಮ ನಿಲುವಿಗೆ ಅಂಟಿಕೊಂಡ್ರು.
Advertisement
ನಮ್ಮ ಪಬ್ಲಿಕ್ ಟಿವಿ ವರದಿಗಾರ ಪ್ರವೀಣ್ ಜೊತೆ ಫೋನಿನಲ್ಲಿ ಮಾತನಾಡುವಾಗ,”ನಾನೇನು ನಿಮ್ಮ ಹೆಂಡ್ತಿ ಹಾಗೂ ಅವರ ಹೆಂಡ್ತಿಯನ್ನು ಗುತ್ತಿಗೆ ತೊಗೊಂಡಿದ್ದೀನಾ? ಬೆಳಗ್ಗೆ ಏನು ನ್ಯೂಸ್ ಮಾಡಿದಿಯಾ? ಒಂದು ಗಂಟೆಯಲ್ಲಿ ನಾನು ಆಫೀಸಿಗೆ ಬರ್ತಿನಿ. ನೀನಿರಬೇಕು ಬಂದು ನೋಡ್ತಿನಿ” ಎಂದು ಅವಾಜ್ ಹಾಕಿದ್ದರು.
ಈ ವೇಳೆ ನಮ್ಮ ಪ್ರತಿನಿಧಿ ನನ್ನ ಹತ್ತಿರ ನೀವು ಶಿಫಾರಸ್ಸು ಮಾಡಿರುವ ಲೆಟರ್ ಇದೆ. ಬೇಕಾದರೆ ನಾನು ನಿಮಗೆ ಬೇಕಾದ್ರೆ ವಾಟ್ಸಪ್ ಮಾಡುತ್ತೇನೆ ಎಂದು ಹೇಳಿದ್ದಕೆ ಅವಾಚ್ಯ ಶಬ್ಧಗಳಿಂದ ಮಾತನಾಡುವ ಮೂಲಕ ತಮ್ಮ ನೈತಿಕ ಮಟ್ಟವನ್ನು ರಾಜ್ಯದ ಜನತೆಗೆ ತೋರಿಸಿದ್ದಾರೆ.
ನಮ್ಮ ಕಚೇರಿಗೆ ಬಂದ ಶಾಸಕ ಬಿ.ಆರ್.ಪಾಟೀಲ್ ಏನು ಸಮರ್ಥನೆ ನೀಡಿದ್ರು? ಅದಕ್ಕೂ ಮೊದಲು ವರದಿಗಾರನಿಗೆ ಹೇಗೆ ಬೆದರಿಕೆ ಹಾಕಿದ್ರು ಎನ್ನುವುದಕ್ಕೆ ಇಲ್ಲಿ ವಿಡಿಯೋವನ್ನು ನೀಡಲಾಗಿದ್ದು, ನೀವು ವೀಕ್ಷಿಸಬಹುದು.
ಇದನ್ನೂ ಓದಿ: ಕಲಬುರಗಿ: ಕಾಮದಾಟಕ್ಕೆ ಪ್ರಿಯಕರನನ್ನ ಶಾಲೆಗೆ ಕರೆಸಿದ ಶಿಕ್ಷಕಿ!