ನವದೆಹಲಿ: ಕೇಂದ್ರ ಸರ್ಕಾರದ (Union Government) ಉದ್ದೇಶ ಸರಿಯಿಲ್ಲ ರಾಜ್ಯ ಸರ್ಕಾರಗಳ ವಿರುದ್ಧ ಕುತಂತ್ರ ಮಾಡಲಾಗುತ್ತಿದೆ. ಕೇಂದ್ರೀಯ ತನಿಖಾ ಸಂಸ್ಥೆಗಳನ್ನು (CBI) ಬಳಸಿಕೊಂಡು ಪ್ರಹಾರ ಮಾಡಲಾಗುತ್ತಿದೆ. ಈ ದೃಷ್ಠಿಯಿಂದ ರಾಜ್ಯ ಸರ್ಕಾರ ಸಿಬಿಐ ತನಿಖಾ ಸಮ್ಮತಿ ವಾಪಸ್ ಪಡೆದಿರುವುದು ಸರಿಯಾಗಿದೆ ಎಂದು ಶಾಸಕ ಬಿ.ಆರ್ ಪಾಟೀಲ್ (BR Patil) ಹೇಳಿದ್ದಾರೆ. ಇದನ್ನೂ ಓದಿ: ನನ್ನ ಜೀವನದ ರಾಜಕೀಯ ಸಂಬಂಧದ ಮೊದಲ ಕೇಸ್ ಇದು: ಸಿಎಂ ಸಿದ್ದರಾಮಯ್ಯ ಬೇಸರ
ದೆಹಲಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಯೋಗ್ಯವಾದ ನಿರ್ಣಯ ಕೈಗೊಂಡಿದೆ. ಮುಡಾ ಹಗರಣದಲ್ಲಿ (MUDA Scam) ಮೈಸೂರಿನ ನಾಯಕರು ಯಾಕೆ ಮಾತನಾಡುತ್ತಿಲ್ಲ? ಮುಡಾದಲ್ಲಿ ಸದಸ್ಯರಾಗಿದ್ದವರು ಯಾರೂ ಮಾತನಾಡುತ್ತಿಲ್ಲ. ಮುಡಾ ಹಗರಣವನ್ನು ಸೃಷ್ಟಿ ಮಾಡಿ ಸಿಎಂ ಅನ್ನು ಕೆಳಗಿಳಿಸುವ ಪ್ರಯತ್ನ ಆಗುತ್ತಿದೆ. ಸಿದ್ದರಾಮಯ್ಯ ಗಟ್ಟಿ ನಾಯಕ, ಅವರನ್ನು ಏನೂ ಮಾಡೋಕೆ ಆಗುವುದಿಲ್ಲ, 136 ಶಾಸಕರು ಸಿದ್ದರಾಮಯ್ಯ (Siddaramaiah) ಜೊತೆಗಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ವಿಜಯೇಂದ್ರರನ್ನ ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಸಲು ಸಾಧ್ಯವಿಲ್ಲ – ರೆಬಲ್ ಟೀಂಗೆ ರೇಣುಕಾಚಾರ್ಯ ಸವಾಲ್
ಸಿಎಂ ರಾಜೀನಾಮೆ ನೀಡಬೇಕು ಎಂದಿರುವ ಕೆ.ಬಿ ಕೋಳಿವಾಡ ಅವರ ಹೇಳಿಕೆ ಸರಿಯಲ್ಲ, ಎಲ್ಲಾ ಶಾಸಕರು ಒಟ್ಟಾಗಿದ್ದೇವೆ. ಸಿಎಂ ರಾಜೀನಾಮೆ ಕೊಡುವ ಅಗತ್ಯವಿಲ್ಲ. ಬಿಜೆಪಿಯವರ ಮನೆಯೇ ಸರಿಯಿಲ್ಲ, ಅವರ ಮನೆ ಮೊದಲು ಸರಿಮಾಡಿಕೊಳ್ಳಲಿ, ಒಬ್ಬ ಹೊಸಪೇಟಿಯಿಂದ ಮತ್ತೊಬ್ಬರು ಕೂಡಲಸಂಗಮದಿಂದ ಯಾತ್ರೆ ಮಾಡುತ್ತೇವೆ ಎನ್ನುತ್ತಾರೆ. ಮೊದಲು ಅವರ ಮನೆ ಮೊದಲು ಸರಿ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಬೆಂಗಳೂರು ಜನ್ರ ದುಡ್ಡು ಚೀನಾ ಕಂಪನಿಗಳಿಗೆ ಜಮೆ – ಉತ್ತರ ಸೈಬರ್ ಠಾಣೆಯಲ್ಲಿ 122 ಕೇಸ್ ಪತ್ತೆ