ನವದೆಹಲಿ: ಬಿಜೆಪಿ (BJP) ಶಾಸಕ ಯತ್ನಾಳ್ (Basangouda Patil Yatnal) ಅವರಿಗೆ ಪಕ್ಷದ ಶಿಸ್ತು ಸಮಿತಿ ನೋಟಿಸ್ ಕೊಟ್ಟ ಬೆನ್ನಲ್ಲೇ ಯತ್ನಾಳ್ ಟೀಂ ದೆಹಲಿಗೆ ತೆರಳಿದೆ. ಹೈಕಮಾಂಡ್ ಭೇಟಿಗೂ ಮುನ್ನ ಬಣದ ನಾಯಕರು ಸಭೆ ನಡೆಸಿದ್ದಾರೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬಿ.ಪಿ ಹರೀಶ್ (B.P Harish), ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಗುಂಪುಗಾರಿಕೆ ಮಾಡುತ್ತಿದ್ದಾರೆ. ಅವರ ನಿವಾಸದಲ್ಲಿ ಸಭೆ ನಡೆಸುತ್ತಿದ್ದಾರೆ. ಯತ್ನಾಳ್ ಅವರಿಗೆ ನೋಟಿಸ್ ಕೊಡ್ತಾರೆ ಅಂದ್ರೆ ಇವರಿಗೂ ನೋಟಿಸ್ ಕೊಡಬೇಕು. ಕೆಜೆಪಿಯಿಂದ ಹೋದವರಿಗೂ ಯಡಿಯೂರಪ್ಪ ಏನು ಮಾಡಿಲ್ಲ. ವಿಜಯೇಂದ್ರ ಚೇಲಾಗಳು ಬಿಜೆಪಿ ನಡೆಸುತ್ತಿದ್ದಾರೆ. ಭ್ರಷ್ಟ ವಿಜಯೇಂದ್ರ ಅವರನ್ನು ಬದಲಿಸಬೇಕು ಎಂದು ಅವರು ಕಿಡಿಕಾರಿದ್ದಾರೆ.
Advertisement
ಇನ್ನೂ ಯತ್ನಾಳ್ ಅವರಿಗೆ ನೋಟಿಸ್ ಕೊಟ್ಟ ವಿಚಾರಚಾಗಿ ಮಾತನಾಡಿದ ರಮೇಶ್ ಜಾರಕಿಹೊಳಿ, ಎರಡು ದಿನದ ಹಿಂದೆ ನೋಟಿಸ್ ಕೊಟ್ಟ ವಿಚಾರ ಗೊತ್ತಾಗಿದೆ. ಅದಕ್ಕೆ ಯತ್ನಾಳ್ ಉತ್ತರ ಕೊಡ್ತಾರೆ. ನಾವೆಲ್ಲರೂ ಉತ್ತರ ಕೊಡಲಿದ್ದೇವೆ. ಬುಧವಾರ ಹೈಕಮಾಂಡ್ ಭೇಟಿಯಾಗಲಿದ್ದೇವೆ ಎಂದು ತಿಳಿಸಿದ್ದಾರೆ.
Advertisement
Advertisement
ಪಕ್ಷ ವಿರೋಧಿ ಚಟುವುಟಿಕೆ ಮಾಡಿದ ವಿಜಯೇಂದ್ರಗೆ ಯಾವಾಗ ನೋಟಿಸ್ ಕೋಡ್ತೀರಿ? ಈ ಬಗ್ಗೆ ಮಾಧ್ಯಮಗಳ ಮುಖಾಂತರ ನಾವು ಆಗ್ರಹಿಸುತ್ತೇವೆ. ಯತ್ನಾಳ್ ಉಚ್ಛಾಟನೆ ವಿರುದ್ಧ ಸುಳ್ಳು ಪ್ರಚಾರ ಮಾಡ್ತಿದ್ದಾರೆ. ವಿಜಯೇಂದ್ರ ಪರವಾಗಿ ಮಾತಾನಾಡುವವರೆಲ್ಲ ಕೆಜೆಪಿ ಪಕ್ಷದಿಂದ ಬಂದವರು. ಅವರ ಕಡೆ ಮಾತಾಡುವವರೆಲ್ಲ 80% ಅವರೇ ಇದ್ದಾರೆ. ಅವರೆಲ್ಲ ವಿಜಯೇಂದ್ರ ಪರವಾಗಿ ಮಾತನಾಡದೆ ಇನ್ಯಾರ ಪರ ಮಾತಾಡ್ತಾರೆ? ಎಂದು ಕಿಡಿಕಾರಿದ್ದಾರೆ.
Advertisement
ಸಭೆಯಲ್ಲಿ ಯತ್ನಾಳ್ ಬೆಂಬಲಿಗರಾದ ಕುಮಾರ್ ಬಂಗಾರಪ್ಪ, ಅರವಿಂದ ಲಿಂಬಾವಳಿ, ಸಿದ್ದೇಶ್ವರ್, ಬಿ.ವಿ ನಾಯಕ್, ಎನ್.ಆರ್ ಸಂತೋಷ್ ಭಾಗಿಯಾಗಿದ್ದರು.
ಬಿಜೆಪಿಯಲ್ಲಿ (BJP) ಬಣ ಫೈಟ್ ತಾರಕಕ್ಕೇರಿರುವ ಹೊತ್ತಲ್ಲೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ (Tarun Chugh) ರಾಜ್ಯಕ್ಕೆ ಭೇಟಿ ನೀಡಿದ್ದಾರೆ.