ಬೆಂಗಳೂರು: ನಾನು ಎಲ್ಲೂ ಹೋಗಿಲ್ಲ, ಈಗ ಬೆಂಗಳೂರಿನಲ್ಲೇ ಇದ್ದೇನೆ ಎಂದು ಶಾಸಕ ಭೀಮಾನಾಯ್ಕ್ ಸ್ಪಷ್ಟನೆ ಕೊಟ್ಟಿದ್ದಾರೆ.
ಕಳೆದ ಮೂರ್ನಾಲ್ಕು ದಿನಗಳಿಂದ ಯಾರ ಸಂಪರ್ಕಕ್ಕೂ ಸಿಗದ ಶಾಸಕ ಭೀಮಾನಾಯ್ಕ್ ಬುಧವಾರ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನಾನು ಎಲ್ಲೂ ಹೋಗಿಲ್ಲ. ಬೆಂಗಳೂರಿನ ಮನೆಯಲ್ಲಿಯೇ ಇದ್ದೇನೆ. ಇದೆಲ್ಲಾ ಸುಳ್ಳು, ಬರಿ ಊಹಾಪೋಹವಷ್ಟೇ. ನಾನು ಮಂಗಳವಾರ ಗೋವಾದಿಂದ ಬಂದಿದ್ದೀನೆ. ನಾನು ಯಾವುದೇ ಕಾರಣಕ್ಕೂ ಪಕ್ಷ ಬಿಡುವ ಯೋಚನೆ, ಪ್ರಯತ್ನ ಮಾಡಿಲ್ಲ ಎಂದು ಹೇಳಿದ್ದಾರೆ.
Advertisement
Advertisement
ಇಂದು ಬೆಳಗ್ಗೆ ಕೂಡ ನಾನು ಕಾಂಗ್ರೆಸ್ಸಿನಲ್ಲಿಯೇ ಇರುತ್ತೇವೆ ಎಂದು ನಮ್ಮ ನಾಯಕ ಸಿದ್ದರಾಮಯ್ಯ ಅವರ ಜೊತೆ ಮಾತನಾಡಿದ್ದೇನೆ. ನಾನು ಫೋನ್ ಮೂಲಕ ಕಾಂಗ್ರೆಸ್ ನಾಯಕರ ಜೊತೆ ಮಾತನಾಡುತ್ತಿದ್ದೆ. ನಾನು ಗೋವಾಗೆ ಹೋಗಿದ್ದು, ಧಾರವಾಡದಲ್ಲಿ ಇರುವುದನ್ನು ಕೂಡ ಸಿದ್ದರಾಮಯ್ಯ ಅವರಿಗೆ ಮೊದಲೇ ಹೇಳಿದ್ದೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
Advertisement
ಆಪರೇಷನ್ ಕಮಲದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಎಲ್ಲಿ ಇದ್ದಾರೆ ಗೊತ್ತಿಲ್ಲ. ಯಾರು ನನ್ನನ್ನು ಸಂಪರ್ಕ ಮಾಡಿಲ್ಲ. ಬಿಜೆಪಿ ಜೊತೆ ಸೇರುವ ಪ್ರಶ್ನೆಯೇ ಇಲ್ಲ. ನಾನು ಕಳೆದ ದಿನದಿಂದ ನಮ್ಮ ಕಾಂಗ್ರೆಸ್ ನಾಯಕರ ಜೊತೆ ಗೋವಾದಲ್ಲಿ ಇದ್ದೇನೆ ಎಂದು ಹೇಳಿದ್ದೇನೆ. ನಮಗೆ ಸಣ್ಣಪುಟ್ಟ ಅಸಮಾಧಾನ ಇದೆ ಅಷ್ಟೇ. ಅದೆಲ್ಲವನ್ನು ಸಾರ್ವಜನಿಕವಾಗಿ ಮಾತನಾಡಲು ಸಾಧ್ಯವಿಲ್ಲ. ಆದರೆ ಬಿಜೆಪಿಗೆ ಹೋಗುವ ಮಾತಿಲ್ಲ ಎಂದು ಹೇಳಿದರು.
Advertisement
ಶಾಸಕ ಗಣೇಶ್ ಕೂಡ ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗಲ್ಲ. ಬಿಜೆಪಿ ಆಪರೇಷನ್ ಬಗ್ಗೆ ನನಗೆ ಏನು ಗೊತ್ತಿಲ್ಲ. ನನ್ನ ಫೋನ್ ನಿನ್ನೆ ಮಧ್ಯಾಹ್ನದವರೆಗೂ ಸ್ವಿಚ್ ಆಫ್ ಆಗಿತ್ತು. ಆನಂತರ ಆನ್ ಮಾಡಿದ್ದೆ. 3-4 ತಿಂಗಳ ಹಿಂದೆ ಬಿಜೆಪಿಯವರು ಸಂಪರ್ಕ ಮಾಡಿದ್ದರು. ಆಗಲೇ ನಾನು ಕಾಂಗ್ರೆಸ್ ಬಿಟ್ಟು ಬರುವುದಿಲ್ಲ ಎಂದು ಹೇಳಿದ್ದೆ. ಈಗಲೂ ಕೂಡ ನಾನು ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ ಎಂದು ಭೀಮಾ ನಾಯ್ಕ್ ಸ್ಪಷ್ಟಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv