ಶಿವಮೊಗ್ಗ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದೆ ಶೋಭಾ ಕರಂದ್ಲಾಜೆ ಏಕೆ ಮಾತನಾಡುತ್ತಿಲ್ಲ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಸಂಸದೆ ವಿರುದ್ಧ ಗುಡುಗಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪ್ರಕರಣ ಸಂಬಂಧ ಶೋಭಾ ಕರಂದ್ಲಾಜೆ ಏಕೆ ಪ್ರಶ್ನೆ ಮಾಡುತ್ತಿಲ್ಲ ಅಂತ ಏಕವಚನದಲ್ಲಿ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಶೋಭಾ ಮೇಡಂ ಬಾಯಿ ಹರಿದುಕೊಳ್ಳುತ್ತಿದ್ದಳು. ಆದರೆ ಈಗ ಆಯಮ್ಮ ಸುಮ್ಮನಿದ್ದಾಳೆ.
ದೇಶದ್ರೋಹಿಗಳು ಹಿಂದೂಗಳು ಇದ್ದಾರೆ, ಮುಸ್ಲಿಮರು ಇದ್ದಾರೆ. ಬಾಂಬ್ ಇಟ್ಟವನು ಹಿಂದೂ ಅಂತ ಸುಮ್ಮನಾದ್ರಾ ಶೋಭಮ್ಮ ಎಂದು ಲೇವಡಿ ಮಾಡಿದ್ದಾರೆ. ಈಗೇನು ಬಾಯಿಗೆ ಕಡುಬು ಹಾಕಿಕೊಂಡಿದ್ದೀಯಾ ನೀನು. ನಿಮ್ಮದೇ ಸರ್ಕಾರ ಇದೆ ಕ್ರಮ ಕೈಗೊಳ್ಳಬೇಕು ಅಲ್ಲವಾ ಅಂತ ಶೋಭಾ ಕರಂದ್ಲಾಜೆ ವಿರುದ್ಧ ಬೇಳೂರು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಸೂಲಿಬೆಲೆ, ತೇಜಸ್ವಿ ವಿರುದ್ಧ ಕೆಟ್ಟ ಪದ ಬಳಸಿ ಬೇಳೂರು ವಾಗ್ದಾಳಿ