Connect with us

Dharwad

ಲಿಂಗಾಯತ ಭವನದಲ್ಲಿದ್ದ ಶಾಸಕ ಬೆಲ್ಲದ್ ತಂದೆ-ತಾಯಿ, ಕುಟುಂಬಸ್ಥರ ಹೆಸರು ಔಟ್!

Published

on

ಧಾರವಾಡ: ನಗರದ ಸಪ್ತಾಪೂರ ಬಳಿಯ ಲಿಂಗಾಯತ ಭವನಕ್ಕೆ ಶಾಸಕ ಅರವಿಂದ ಬೆಲ್ಲದ್ ಅವರ ತಂದೆ ತಾಯಿ ಹಾಗೂ ಚಿಕ್ಕಪ್ಪ ಚಿಕ್ಕಮ್ಮರ ಹೆಸರನ್ನ ಇಡಲಾಗಿತ್ತು. ಭವನದ ಹೊರಗೆ ಲೀಲಾವತಿ ಚಂದ್ರಕಾಂತ ಬೆಲ್ಲದ್ ಹಾಗೂ ಭವನದ ಒಳಗೆ ಶಿವಪುತ್ರ ಅವರ ಹೆಸರನ್ನ ಹಾಕಲಾಗಿತ್ತು. ಇದು ವಿವಾದಕ್ಕೆ ಎಡೆ ಮಾಡಿದ್ದರಿಂದ ಸದ್ಯ ಹೆಸರುಗಳನ್ನ ತೆಗೆಯಲಾಗಿದೆ.

ಶಾಸಕ ಬೆಲ್ಲದ ಅವರ ಚಿಕ್ಕಪ್ಪ ಶಿವಪ್ಪ ಎಂಬವರು ಲಿಂಗಾಯತ ಭವನದ ಅಧ್ಯಕ್ಷರಾಗಿದ್ದರು. ಇದೀಗ ಲಿಂಗಾಯತ ಭವನದ ಕಾರ್ಯಕಾರಿಣಿ ಸದಸ್ಯರು ನಿರ್ಣಯದಂತೆ ಶಿವಣ್ಣ ಬೆಲ್ಲದ ಅವರನ್ನ ಅಧ್ಯಕ್ಷ ಸ್ಥಾನದಿಂದ ತೆಗೆಯಲಾಗಿದೆ. ಇಂದು ನಾನು ಒಬ್ಬನೇ ಇರುವುದರಿಂದ ನನ್ನನ್ನ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿದೆ, ಆದರೆ ನಾವು ಇದರ ವಿರುದ್ಧ ಕೋರ್ಟ್ ಮೇಟ್ಟಲೆರುತ್ತೆನೆ ಎಂದು ಶಿವಣ್ಣ ಬೆಲ್ಲದ ಹೇಳಿದ್ದಾರೆ.

ಇದನ್ನೂ ಓದಿ: ಲಿಂಗಾಯತ ಭವನದಲ್ಲಿ ಶಾಸಕ ಬೆಲ್ಲದ್ ಕಾರುಬಾರು: ಒಳಗೂ-ಹೊರಗೂ ಕುಟುಂಬಸ್ಥರದ್ದೇ ಹೆಸರು

ಅಧ್ಯಕ್ಷ ಸ್ಥಾನಕ್ಕೆ ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ ಅವರನ್ನ ಪ್ರಭಾರಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ವೀರಶೈವ ಲಿಂಗಾಯತ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಶಾಮನೂರ ಶಿವಶಂಕರಪ್ಪ ಬೆಲ್ಲದ ಅವರ ಕುಟುಂಬದ 30 ಸದಸ್ಯರ ಸದಸ್ಯತ್ವವನ್ನ ರದ್ದು ಮಾಡಿದ್ದಾರೆ. ಅದರಲ್ಲಿ ಅಧ್ಯಕ್ಷರಾಗಿದ್ದ ಶಿವಣ್ಣ ಬೆಲ್ಲದ ಅವರ ಸದಸ್ಯತ್ವ ಕೂಡಾ ರದ್ದು ಮಾಡಿದ್ದಾರೆ. ಸದ್ಯ ಶಾಸಕ ಬೆಲ್ಲದ ಅವರ ತಂದೆ ತಾಯಿಯ ಹೆಸರನ್ನ ಭವನದಿಂದ ತೆಗೆದು ಹಾಕಲಾಗಿದ್ದು, ಮುಂದೆ ಈ ಭವನಕ್ಕೆ ವೀರಶೈವ ಲಿಂಗಾಯತ ಭವನ ಎಂದು ಹೆಸರು ಇಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಒಟ್ಟಿನಲ್ಲಿ ತೆರೆಮೆರೆಯಲ್ಲಿ ಬೆಲ್ಲದ ಅವರ ಹೆಸರನ್ನ ಭವನದಿಂದ ತೆಗೆದು ಹಾಕಲಾಗಿದೆ. ಆದರೆ ಮುಂದೆ ಈ ಭವನದ ವಿವಾದ ಇಷ್ಟಕ್ಕೆ ಮುಗಿದಿಲ್ಲ ಎಂಬ ಸುಳಿವು ಕುರ್ಚಿಯಿಂದ ಇಳಿದ ಅಧ್ಯಕ್ಷರು ಕೊಟ್ಟಿದ್ದಾರೆ. ಸದ್ಯ ಶಾಸಕ ಬೆಲ್ಲದ್ ಕೂಡಾ ವಿದೇಶ ಪ್ರವಾಸದಲ್ಲಿದ್ದು, ಅವರು ಬಂದ ಮೇಲೆ ಏನು ಬದಲಾವಣೆ ಆಗುತ್ತೋ ನೋಡಬೇಕಿದೆ.

ಇದನ್ನೂ ಓದಿ: ಲಂಡನ್‍ಗೆ ಕಾರಲ್ಲೇ ಟೂರ್ ಹೊರಟ ಧಾರವಾಡ ಶಾಸಕ!

 

 

Click to comment

Leave a Reply

Your email address will not be published. Required fields are marked *