ಎಂ.ಬಿ ಪಾಟೀಲ್ ಪರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬ್ಯಾಟಿಂಗ್

Public TV
2 Min Read
BIJ YATNAL

ವಿಜಯಪುರ/ಮಂಗಳೂರು : ಮಾಜಿ ಸಚಿವ ಎಂ.ಬಿ.ಪಾಟೀಲ್ ಪರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬ್ಯಾಟಿಂಗ್ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಎಂ.ಬಿ.ಪಾಟೀಲ್‍ಗೆ ಅಪಮಾನ ಮಾಡಿದೆ ಅಂತ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಂ.ಬಿ ಪಾಟೀಲ್ ಸಾಕಷ್ಟು ನೀರಾವರಿ ಕುರಿತು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡಬೇಕಿತ್ತು. ಅವರಿಗೆ ಗಾಳ ಹಾಕಿ ಬಿಜೆಪಿಗೆ ಕರೆಯಲು ನಾನ್ಯಾರು? ಅವರೇನು ಚಿಕ್ಕವರಲ್ಲ. ಇದನ್ನೂ ಓದಿ:

ದೇಶ ಭಕ್ತ ಅಬ್ದುಲ್ ಕಲಾಂಗೆ ಹೊಗಳಲೇ ಬೇಕು. ಒವೈಸಿ ಅಂತವರಿಗೆ ಲೋಫರ್ ಎಂದು ಕರೆಯಲೇ ಬೇಕು. ಎಂ.ಬಿ ಪಾಟೀಲ್ ಪಕ್ಷಕ್ಕೆ ಬರೋದಾದ್ರೆ ರಾಜ್ಯ ಮುಖಂಡರೊಂದಿಗೆ ಚರ್ಚಿಸಿ ನಿರ್ಣಯ ಮಾಡೋದಾಗಿ ಹೇಳಿದ ಅವರು, ಇದೇ ವೇಳೆ ಮೂರು ತಿಂಗಳಲ್ಲಿ ಈ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಬಿದ್ದು ಹೋಗುದೆಂದು ಭವಿಷ್ಯ ನುಡಿದ್ರು.

ಯತ್ನಾಳ್ ವಾದಕ್ಕೆ ರಹೀಂ ಉಚ್ಛಿಲ್ ಕಿಡಿ:
ಶಾಸಕ ಬಸವನ ಗೌಡ ಪಾಟೇಲ್ ಯತ್ನಾಳ್ ಈ ಹಿಂದೆ ಜೆಡಿಎಸ್ ಸಹಕಾರದೊಂದಿಗೆ ಸ್ಪರ್ಧಿಸುವಾಗ ದರ್ಗಕ್ಕೂ ಹೋಗಿದ್ದರು. ಇದೀಗ `ನಾನು ಮುಸ್ಲಿಮರ ಮತಗಳಿಂದ ಗೆದ್ದಿಲ್ಲ. ಸಾಬ್ರ ಕೆಲಸ ಮಾಡಬೇಡಿ’ ಎಂದು ಕಾರ್ಪೋರೇಟರ್ ಗೆ ತಿಳಿಸಿದ್ದೇನೆ ಎಂಬ ಹೇಳಿಕೆ ನೀಡಿದ್ದಾರೆ. ಅವರ ಮಾತಲ್ಲಿ ನಿಜವಿರಬಹುದು. ಮುಸ್ಲಿಮರು ಯತ್ನಾಳ್ ಗೆ ಮತ ನೀಡಿಲ್ಲವಾಗಿರಬಹುದು. ಆದರೆ ಜನಪ್ರತಿನಿಧಿ ಆದ ಬಳಿಕ ಅವರು ಇಂತಹ ಸಂವಿಧಾನ ವಿರೋಧಿ ಹೇಳಿಕೆ ನೀಡುವುದು ಸರಿಯಲ್ಲ. ಇದನ್ನು ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚದ ಉಪಾಧ್ಯಕ್ಷನಾಗಿ ಪಕ್ಷದ ವತಿಯಿಂದ ಖಂಡಿಸುವುದಾಗಿ ರಹೀಂ ಉಚ್ಚಿಲ್ ಹೇಳಿದ್ದಾರೆ.

RAHIM

ಈ ಹೇಳಿಕೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸಿ ಯತ್ನಾಳ್ ವಿರುದ್ಧ ಸೂಕ್ತಕ್ರಮ ಜರಗಿಸಬೇಕೆಂದು ಪಕ್ಷದ ರಾಜ್ಯ ಅಧ್ಯಕ್ಷರನ್ನು ಆಗ್ರಹಿಸುತ್ತೇನೆ. ಪ್ರಧಾನಿಯವರು ಸಬ್ಕಾ ಸಾತ್ ಸಬ್ಕೇ ವಿಕಾಸ್ ಮಂತ್ರದ ಮೂಲಕ, ಯಡಿಯೂರಪ್ಪನವರು ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಮಂತ್ರದಂತೆ ದೇಶವನ್ನು ರಾಜ್ಯವನ್ನು ಮುನ್ನಡೆಸುವಾಗ ಯತ್ನಾಳ್ ರಂತಹ ವ್ಯಕ್ತಿಗಳ ಹೇಳಿಕೆಗೆ ಮಹತ್ವ ನೀಡಬೇಕಾಗಿಲ್ಲ. ಹನ್ನೊಂದು ಕೋಟಿ ಕಾರ್ಯಕರ್ತರಿರುವ ವಿಶ್ವದ ಬಲಿಷ್ಠ ಪಾರ್ಟಿಯಾಗಿದೆ ಬಿಜೆಪಿ. ಅಭಿವೃದ್ಧಿ ಮಾತ್ರ ನಮ್ಮ ಉದ್ದೇಶ. ಇಂತಹ ಕೆಲವರ ಹೇಳಿಕೆಯಿಂದ ಮುಸ್ಲಿಂ ಸಮಾಜಕ್ಕೆ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ. ಹಾಗೂ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಲಾಗುವುದು ಅಂದ್ರು.

ದಯವಿಟ್ಟು ಇದನ್ನು ಯಾರು ವಿವಾದ ಮಾಡಬೇಡಿ. ಕೆಲವು ಕ್ಷೇತ್ರದಲ್ಲಿ ಮುಸ್ಲಿಮರು ಬಿಜೆಪಿಗೆ ತೀರಾ ಮತ ನೀಡಿಲ್ಲ. ಇದರಿಂದ ಆಕ್ರೋಶಗೊಂಡು ಅಥವಾ ಈ ಬೇಸರದಿಂದ ಇಂತಹ ಹೇಳಿಕೆ ನೀಡಿರಬಹುದು. ಆದರೂ ಈ ಹೇಳಿಕೆ ಖಂಡಿತವಾಗಿ ಸರಿಯಲ್ಲ. ಇದನ್ನು ಖಂಡಿಸುತ್ತೇನೆ. ಮುಂದಿನ ದಿನಗಳಲ್ಲಿ ದೇಶದ ರಾಜ್ಯದ ಹಿತದೃಷ್ಟಿಯಿಂದ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಯನ್ನು ಬೆಂಬಲಿಸಿ ಇಂತಹಾ ಆರೋಪವನ್ನು ಸುಳ್ಳಾಗಿಸೋಣ ಅಂತ ತಿಳಿಸಿದ್ರು.

Share This Article
Leave a Comment

Leave a Reply

Your email address will not be published. Required fields are marked *