– ಬಣ ಬಡಿದಾಟದ ನಡುವೆ ಯತ್ನಾಳ್‌ಗೆ ಸಿಎಂ ಕನಸು
– ನಾನೇಕೆ ಸಿಎಂ ಆಗಬಾರದು? ನನ್ನಲೇನು ಕೊರತೆಯಿದೆ? ಎಂದ ಶಾಸಕರು
ಬಾಗಲಕೋಟೆ: ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟದ ನಡುವೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಮುಖ್ಯಮಂತ್ರಿ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆಯಲ್ಲಿ (Bagalkote) ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು, ನಾನು ಮುಖ್ಯಮಂತ್ರಿ (Chief Minister) ಯಾಕೆ ಆಗಬಾರದು? ನನ್ನಲ್ಲಿ ಏನು ಕೊರತೆ ಇದೆ? ಪ್ರಾಮಾಣಿಕರನ್ನ ಸಿಎಂ ಮಾಡಬೇಕು ಅಂದ್ರೆ ಮೊದಲು ನನ್ನ ಹೆಸರೇ ಬರುತ್ತೆ. ಒಳ್ಳೆಯ ಮನುಷ್ಯ ಸಿಎಂ ಆಗಬೇಕು ಅಂತ ದೇವರು ಆದೇಶ ಕೊಟ್ಟರೆ ನಾನೇ ಸಿಎಂ ಆಗ್ತೀನಿ. ಇಲ್ಲದಿದ್ದರೆ ನನ್ನ ಪಾಡಿಗೆ ಇರ್ತೀನಿ ಅಂತ ಯತ್ನಾಳ್ ಹೇಳಿದ್ದಾರೆ. ಇದನ್ನೂ ಓದಿ: ಮಣಿಪಾಲ ಬಾಣಸಿಗನ ಸಾವಿಗೆ ಬಿಗ್ ಟ್ವಿಸ್ಟ್ – ಬಾಟಲಿಯಿಂದ ಕತ್ತು ಇರಿದುಕೊಂಡು ಆತ್ಮಹತ್ಯೆ?
ಭ್ರಷ್ಟಾಚಾರ ಅಥವಾ ಏನಾದರೂ ಹಗರಣ ಇದ್ದಿದ್ದರೆ ನನ್ನನ್ನ ಬಿಡ್ತಿದ್ರಾ? ಈ ಹಿಂದೆ ನನ್ನ ಮೇಲೂ ದಾಳಿ ಮಾಡಿಸಿದ್ದಾರೆ, ಗುಪ್ತಚರ ಇಲಾಖೆಯನ್ನೂ ಬಿಟ್ಟಿದ್ದರು. ಎಲ್ಲವನ್ನೂ ನೋಡಿದ್ರೂ ಏನೂ ಆಗಲಿಲ್ಲ. ಅದಕ್ಕೆ ಸುಮ್ಮನೆ ಕೂತಿದ್ದಾರೆ ಅಷ್ಟೇ. ನನ್ನ ಮೇಲೆ ಆ ಭಗವಂತನ ಕೃಪೆ ಇದೆ, ಜನರ ಶಕ್ತಿ ಇದೆ ಎಂದರು.
ಬೆಂಗಳೂರಲ್ಲಿಂದು (Bengaluru) ಕೋರ್ ಕಮೀಟಿ ಸಭೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೋರ್ ಕಮೀಟಿ ಮಾಡಲಿ, ನನ್ನ ಯಾಕೆ ಕೋರ್ ಕಮೀಟಿ ಸಭೆಗೆ ಕರೆಯಬೇಕು ನಾನು ಕೋರ್ ಕಮೀಟಿ ಮೆಂಬರ್ ಅಲ್ಲ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ ಸಾಮಾನ್ಯ ಎಂಎಲ್‌ಎ ಅಷ್ಟೇ ಎಂದರು. ಇದನ್ನೂ ಓದಿ: ನಾನು ರಾಜಕೀಯ ಕೊನೆಗಾಲದಲ್ಲಿದ್ದೇನೆ: ಸಿಎಂ ಸಿದ್ದರಾಮಯ್ಯ ಅಚ್ಚರಿ ಹೇಳಿಕೆ
ಇನ್ನೂ ಜಲಸಂಪನ್ಮೂಲ ಅಬೀವೃದ್ಧಿ ವಿಚಾರ ಕುರಿತು ಮಾತನಾಡಿ, ನೀರಾವರಿ ಇಲಾಖೆ, ಜಲ ಸಂಪನ್ಮೂಲ ಸಚಿವರು ಉತ್ತರ ಕರ್ನಾಟಕ ಭಾಗದವರಾಗಬೇಕು. ಉತ್ತರ ಕರ್ನಾಟಕದವರು ಯಾವಾಗ್ಯಾವಾಗ ಜಲ ಸಂಪನ್ಮೂಲ ಸಚಿವರಾಗಿದ್ದಾರೆ ಒಳ್ಳೆಯ ಕೆಲಸಗಳಾಗಿವೆ. ಬಸರಾಜ ಬೊಮ್ಮಾಯಿ ಆದಾಗ ನ್ಯಾಯ ಸಿಕ್ಕಿದೆ, ಗೋವಿಂದ ಕಾರಜೋಳ ಆದಾಗ ನ್ಯಾಯ ಸಿಕ್ಕಿದೆ. ಎಂ.ಬಿ ಪಾಟೀಲ್, ಹೆಚ್.ಕೆ ಪಾಟೀಲ್ ಆದಾಗಲೂ ನ್ಯಾಯ ಸಿಕ್ಕಿದೆ. ಅದನ್ನು ಬಿಟ್ಟು ಆ ಕಡೆಯವರಿಗೆ ಇದರ ಬಗ್ಗೆ ಕಳಕಳಿ ಇಲ್ಲ. ಅವರು ಲೂಟಿ ಮಾಡೋದಕ್ಕೆ ಮಾತ್ರ ಸಚಿವರಾಗುತ್ತಾರೆ. ಈ ಹಿಂದಿನ ಅವಧಿಯಲ್ಲಿ ನಮ್ಮ ಸರ್ಕಾರ ಮಾಡಿದ್ದ ಬಿಲ್‌ಗಳಿಗೆ 10% ತೆಗೆದುಕೊಳ್ಳುತ್ತಿದ್ದಾರೆ. ಆವಾಗಿನ ಕಾರ್ಯಕ್ಕೂ ರೊಕ್ಕ ತೆಗೆದುಕೊಳ್ಳುತ್ತಿದ್ದಾನೆ ಪುಣ್ಯಾತ್ಮ. ಇಂತಹವರಿಂದ ಅಭಿವೃದ್ದಿಯಾಗುತ್ತಾ? ಎಂದು ಡಿಕೆಶಿ ಹೆಸರು ಹೇಳದೆಯೇ ಟಾಂಗ್ ಕೊಟ್ಟರು.
ನಾನು ಯಾರ ಏಜೆಂಟ್ ಅಲ್ಲ, ಕಾಂಗ್ರೆಸ್ ಏಜೆಂಟ್ ಕೂಡ ಅಲ್ಲ. ಯಾವ ರಾಜಕಾರಣಿ ಮನೆಗೆ ಹೋಗಿ ಭಿಕ್ಷೆ ಬೇಡಿಲ್ಲ. ಯಾರ‍್ಯಾರು ನಮ್ಮ ಉತ್ತರ ಕರ್ನಾಟಕದವರಾಗಿದ್ದಾರೆ ಒಳ್ಳೆಯ ಕೆಲಸ ಮಾಡಿದ್ದಾರೆ. ಈಗ ಏನು ಸಚಿವ ಸಂಪುಟ ಪುನಾರಚನೆ ಅಂತಾರೆ, ಆವಾಗ ಉತ್ತರ ಕರ್ನಾಟಕದವರಿಗೆ ಜಲಸಂಪನ್ಮೂಲ ಮಂತ್ರಿ ಮಾಡಿ ಅಂತಾ ನಾನು ನೇರವಾಗಿ ಸಿದ್ದರಾಮಯ್ಯನವರಿಗೆ ವಿನಂತಿ ಮಾಡಿಕೊಳ್ಳುತ್ತೇನೆ ಎಂದು ನುಡಿದರು. ಇದನ್ನೂ ಓದಿ: ಚಾಮರಾಜನಗರ ಆಕ್ಸಿಜನ್ ದುರಂತ ಕೇಸ್ ರೀ ಓಪನ್‌ಗೆ ಉಪಸಮಿತಿ ನಿರ್ಧಾರ
ಇದೇ ವೇಳೆ ದೆಹಲಿಯಲ್ಲಿ ಹೈಕಮಾಂಡ್ ಭೇಟಿ ಬಳಿಕ ಯತ್ನಾಳ್ ಸಪ್ಪೆಯಾಗಿದ್ದಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ನನ್ನ ಮುಖ ಸಪ್ಪೆ ಅಂತ ಅನಿಸಿದೆಯಾ ನಿಮಗೆ? ನೋಡ್ರಿ ನಾ ಯಾವುದಕ್ಕೂ ಆಸೆನೆ ಮಾಡೋದಿಲ್ಲ. ಅಂದಮೇಲೆ ಯಾವುದಕ್ಕೆ ಅಂಜಬೇಕು ಯಾಕೆ? ಮನುಷ್ಯನಿಗೆ ಏನೋ ಮುಖ್ಯಮಂತ್ರಿ ಆಗಬೇಕು, ಅಧ್ಯಕ್ಷರಾಗಬೇಕು ಸಿಕ್ಕ ಸಿಕ್ಕ ಹಾಗೆ ರೊಕ್ಕ ಮಾಡಿಕೊಳ್ಳಬೇಕೆಂಬ ಆಸೆ ಇದ್ರೆ ಸಪ್ಪೆ ಮುಖ ಮಾಡಿಕೊಳ್ಳಬೇಕು. ನಮ್ದು ಏನಿಲ್ಲ ಸ್ಥಿತಪ್ರಜ್ಞೆ ಇದ್ದೀವಿ ನಾವು ಎಂದು ಹೇಳಿದರು.