ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು ಎಂಬ ಸಚಿವ ಅಶ್ವಥ್ ನಾರಾಯಣ್ ಹೇಳಿಕೆಯನ್ನು ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಖಂಡಿಸಿದ್ದಾರೆ.
ರಾಜಕೀಯದಲ್ಲಿ ಟೀಕೆಗಳು ಸಹಜ. ಆದರೆ ಇಂತಹ ಹೇಳಿಕೆಯನ್ನು ನಾವು ಒಪ್ಪಲಾಗುವುದಿಲ್ಲ. ಈ ರೀತಿ ಯಾವ ರಾಜಕಾರಣಿಯೂ ಮಾತಾಡಬಾರದು. ಈ ರೀತಿಯ ನಡವಳಿಕೆಗಳು ರಾಜಕಾರಣಕ್ಕೆ ಶೋಭೆ ತರುವುದಿಲ್ಲ ಎಂದಿದ್ದಾರೆ. ಸೈದ್ಧಾಂತಿಕವಾಗಿ ವ್ಯಕ್ತಿಯನ್ನು ಎದುರಿಸಬೇಕು. ಸಿದ್ಧಾಂತಗಳನ್ನು ಟೀಕಿಸುವ ಮೂಲಕ ವಿರೋಧ ವ್ಯಕ್ತಪಡಿಸಬೇಕು. ಅದರಾಚೆ ವೈಯಕ್ತಿಕವಾಗಿ ಇಂತಹ ಮಾತುಗಳನ್ನು ಆಡಬಾರದು ಎಂದಿದ್ದಾರೆ. ಇದನ್ನೂ ಓದಿ: ನಿಮ್ಮಂಥವರು MLA ಆಗಿರೋದೇ ಸದನಕ್ಕೆ ಅಗೌರವ- ಕಾಂಗ್ರೆಸ್ ಸದಸ್ಯರ ವಿರುದ್ಧ ಸಿಡಿದ ಕಾಗೇರಿ
Advertisement
Advertisement
ಸಿದ್ದರಾಮಯ್ಯ ರಾಜಕೀಯ ಅಂತ್ಯಕ್ಕೆ ಟಿಪ್ಪು ಸುಲ್ತಾನನ ಮೇಲಿನ ಒಲವು ಕಾರಣವಾಗುತ್ತದೆ. ಟಿಪ್ಪುವನ್ನು ಆದರ್ಶ ಮಾಡಿಕೊಂಡವರ ಕತೆಗಳನ್ನು ನಾವು ನೋಡಿದ್ದೇವೆ. ಟಿಪ್ಪು ಖಡ್ಗ ತಂದ, ಮಲ್ಯ ವಿದೇಶಕ್ಕೆ ಓಡಿಹೋದ. ಟಿಪ್ಪು ಸಿನಿಮಾ ತೆಗೆದವರು ನಾಶವಾದರು. ಹಿಂದೂಗಳ ಕಗ್ಗೊಲೆ ನಡೆಸಿದ ಟಿಪ್ಪುವನ್ನು ಕಾಂಗ್ರೆಸ್ ಮೆಚ್ಚಿಕೊಂಡಿದೆ. ಅದು ಸಹ ಅಂತ್ಯ ಕಾಣಲಿದೆ ಎಂದು ವ್ಯಂಗ್ಯವಾಡಿದ್ದಾರೆ.
Advertisement
Advertisement
ಅಶ್ವಥ್ ನಾರಾಯಣ್ ಹೇಳಿಕೆ: ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜ್ಯರಾಜಕೀಯದಲ್ಲಿ ನಾಯಕರ ವಾಗ್ದಾಳಿಗಳು ನಡೆಯುತ್ತವೆ. ಅಂತೆಯೇ ಮಂಡ್ಯದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದ್ದ ಸಚಿವ ಅಶ್ವಥ್ ನಾರಾಯಣ್, ಮಂಡ್ಯ ಜನರಿಗೆ ರಾಜಕೀಯ ಬದಲಾವಣೆ ಮಾಡುವ ಶಕ್ತಿ ಇದೆ. ಮಂಡ್ಯದವರು ಮನಸ್ಸು ಮಾಡಿದ್ರೆ ಏನು ಬೇಕಾದರೂ ಸಾಧಿಸುತ್ತಾರೆ. ರಾಜಕೀಯ ದಿಕ್ಸೂಚಿ ಮಂಡ್ಯದಿಂದ ಕಾಣಬೇಕು. ಹೀಗೆ ಮಾಡಲಿಲ್ಲ ಅಂದ್ರೆ ಟಿಪ್ಪು ಸುಲ್ತಾನ್ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬರುತ್ತಾರೆ. ನಿಮಗೆ ಟಿಪ್ಪು ಬೇಕಾ ಸಾವರ್ಕರ್ ಬೇಕಾ, ಟಿಪ್ಪು ಬೇಡಾ ಅಂದ್ರೆ ಸಿದ್ದರಾಮಯ್ಯ ಅವರನ್ನು ಟಿಪ್ಪು ಕಳುಹಿಸಿದ ಹಾಗೆ ಕಳಿಸಬೇಕು. ಹುರಿಗೌಡ, ನಂಜೇಗೌಡ ಟಿಪ್ಪುವನ್ನು ಹೊಡೆದು ಹಾಕಿದರು. ಅದೇ ರೀತಿ ಸಿದ್ದರಾಮಯ್ಯರನ್ನು ಹೊಡೆದು ಹಾಕಬೇಕು ಎಂದಿದ್ದರು.
ಸಚಿವರು ವಿಷಾದ: ಸಚಿವರ ಹೇಳಿಕೆ ಭಾರೀ ವಿವಾದ ಹುಟ್ಟಿಸಿತ್ತು. ಈ ಬೆನ್ನಲ್ಲೇ ಅಶ್ವಥ್ ನಾರಾಯಣ್ ಅವರು ವಿಷಾದ ವ್ಯಕ್ತಪಡಿಸಿದರು. ಮಂಡ್ಯದಲ್ಲಿ ಟಿಪ್ಪು-ಸಿದ್ದರಾಮಯ್ಯ ಹೋಲಿಸಿ ತಾನು ಮಾತಾಡಿದ್ದು, ಸಾಂದರ್ಭಿಕ ಪ್ರಸ್ತಾಪವೇ ವಿನಃ ಯಾವುದೇ ದುರುದ್ದೇಶದ ಮಾತುಗಳಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಅಶ್ವಥ್ ನಾರಾಯಣ್ ವಿವಾದಾತ್ಮಕ ಹೇಳಿಕೆ- ಸಾಕು ಬಿಟ್ಬಿಡಿ ಅಂತ ಮಾಧುಸ್ವಾಮಿ ಮನವಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k