ರಾಮನಗರ: ಮಾಗಡಿಯಲ್ಲಿ ಹಾಲಿ-ಮಾಜಿ ಶಾಸಕರ ಜಟಾಪಟಿ ಮುಂದುವರಿದಿದ್ದು, ಕಾಂಗ್ರೆಸ್ ಗಿಫ್ಟ್ ಕಾರ್ಡ್ ಪಾಲಿಟಿಕ್ಸ್‍ಗೆ ಕೌಂಟರ್ ಕೊಟ್ಟಿದ್ದ ಬಿಜೆಪಿ-ಜೆಡಿಎಸ್ (JDS, BJP) ನಾಯಕರಿಗೆ ಮಾಗಡಿ ಶಾಸಕ ಹೆಚ್.ಸಿ ಬಾಲಕೃಷ್ಣ (H.C Balakrishna) ತಿರುಗೇಟು ಕೊಟ್ಟಿದ್ದಾರೆ.
ಮಾಗಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕಾರ್ಡ್‍ಗಳನ್ನು ಕೊಟ್ಟಿರೋದು ಮತ ಹಾಕಲು ಕ್ರಮ ಸಂಖ್ಯೆ ನೋಡಿಕೊಳ್ಳುವುದಕ್ಕೆ. ಮತ ಹಾಕುವ ವೇಳೆ ಪಾಂಪ್ಲೆಟ್ ಇಟ್ಟುಕೊಂಡು ಹೋಗಲು ಆಗುವುದಿಲ್ಲ. ಹೀಗಾಗಿ ನಮ್ಮ ಕ್ರಮ ಸಂಖ್ಯೆಗೆ ಮತ ಹಾಕಲು ಕಾರ್ಡ್ ನೀಡಿದ್ದೆವು ಎಂದಿದ್ದಾರೆ. ಅಲ್ಲದೇ ಈ ವೇಳೆ ಮಾಜಿ ಶಾಸಕ ಎ.ಮಂಜುನಾಥ್‍ರನ್ನು (A.Manjunath) ಮಾಮ ಎಂದು ವ್ಯಂಗ್ಯ ಮಾಡಿದ್ದಾರೆ. ಇದನ್ನೂ ಓದಿ: ಎಸ್ಸಿ, ಎಸ್ಟಿಗಳಿಗೆ ಅವಕಾಶ ಸೃಷ್ಟಿಸದ ಕಾಂಗ್ರೆಸ್ ದಲಿತ ದ್ರೋಹಿ ಪಕ್ಷ: ಜೋಶಿ ವಾಗ್ದಾಳಿ
Advertisement
Advertisement
ನಾನು ಪಕ್ಷ ಬದಲಾವಣೆ ಮಾಡಿದಾಗ ಜನರಿಗೆ ಚಿಹ್ನೆಯ ಗೊಂದಲ ಆಗುತ್ತದೆ, ಅದಕ್ಕಾಗಿ ನಾವು ನಮ್ಮ ಪಕ್ಷದ ಚಿಹ್ನೆಯ ಕಾರ್ಡ್ ಕೊಟ್ಟಿದ್ದೇವೆ. ನಾವು ಗಿಫ್ಟ್ ಕೊಡ್ತೀವಿ ಎಂದು ಎಲ್ಲೂ ಹೇಳಿಲ್ಲ. ಮಾಜಿ ಶಾಸಕ ಮಂಜುನಾಥ್ ಮೊದಲು ಜನರ ಬಳಿ ಪಡೆದಿರೋ ಹಣ ವಾಪಸ್ ಕೊಡಲಿ. ಆ ಮೇಲೆ ಗಿಫ್ಟ್ ಕೊಡಲು ಹೇಳಿ. ಒಬ್ಬ ಹೆಣ್ಣು ಮಗಳು ದಿನ ಮಂಜು ಮನೆ ಮುಂದೆ ಹೋಗಿ ಕಣ್ಣೀರು ಹಾಕುತ್ತಾಳೆ. ಮಂಜು ಮೊದಲು ಅವರ ನಡವಳಿಕೆ ಸರಿ ಮಾಡಿಕೊಳ್ಳಲಿ. ಜನರನ್ನ ಮುಂಡಾಯಿಸುವುದನ್ನ ಬಿಡಲಿ ಎಂದು ತಿರುಗೇಟು ಕೊಟ್ಟಿದ್ದಾರೆ.
Advertisement
Advertisement
ಮತ್ತೊಬ್ಬ ಬಿಜೆಪಿ ಮುಖಂಡ ಜನರಿಗೆ ಸೈಟ್ ಕೊಡ್ತೀನಿ ಎಂದು ಯಾಮಾರಿಸಿದ್ದಾನೆ. ಸೈಟ್ ಕೊಡ್ತೀವಿ ಅಂತ ಬೋಗಸ್ ಮಾಡಿದ್ದಾನೆ. ಆತ ನಮ್ಮ ಬಗ್ಗೆ ಮಾತನಾಡ್ತಿದ್ದಾನೆ ಎಂದು ಬಿಜೆಪಿ-ಜೆಡಿಎಸ್ ನಾಯಕರಿಗೆ ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಪಶ್ವಿಮ ಬಂಗಾಳದಲ್ಲಿ ಬಿಜೆಪಿ V/S ಪೊಲೀಸ್ ಸಂಘರ್ಷ- ರಾಜ್ಯಾಧ್ಯಕ್ಷ ಸುಕಾಂತ್ ಅಸ್ವಸ್ಥ