ನಾನು ಬಿಜೆಪಿಗೆ ಹೋಗೋದಿಲ್ಲ -ಶಾಸಕ ಅಶ್ವಿನ್ ಕುಮಾರ್ ಸ್ಪಷ್ಟನೆ

Public TV
1 Min Read
mys a

ಮೈಸೂರು: ನನಗೆ ಬಿಜೆಪಿಯಿಂದ ಯಾವ ಆಫರ್ ಬಂದಿಲ್ಲ. ನನ್ನ ರಾಜಕೀಯ ಜೀವನವನ್ನು ಸಿಎಂ ನೆರಳಲ್ಲೇ ಮುಗಿಸುತ್ತೇನೆ. ಯಾರೂ ನನ್ನನ್ನು ಸಂಪರ್ಕ ಮಾಡಿಲ್ಲ ಎಂದು ಶಾಸಕ ಅಶ್ವಿನ್ ಕುಮಾರ್ ತಿಳಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅಶ್ವಿನ್ ಕುಮಾರ್, ನಾನು ಬಿಜೆಪಿಗೆ ಹೋಗುತ್ತೇನೆ. ಬಿಜೆಪಿಯಿಂದ 10 ಕೋಟಿ ಆಫರ್ ಬಂದಿದೆ ಎಂದು ಮಾಧ್ಯಮಗಳಲ್ಲಿ ಬಂದಿದೆ ಎಂದು ಕೇಳಿದ್ದೆ. ಆದರೆ ನನ್ನ ರಾಜಕೀಯ ಜೀವನ ಶುರುವಾಗಿದ್ದು ಸಿಎಂ ನೆರಳಲ್ಲಿ. ಅವರ ನೆರಳಲ್ಲಿಯೇ ನನ್ನ ರಾಜಕೀಯ ಜೀವನವನ್ನು ಮುಗಿಸುತ್ತೇನೆ. ಇದರಲ್ಲಿ ಯಾವುದೇ ಸಂದೇಹ, ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದ್ದಾರೆ.

vlcsnap 2019 06 20 14h16m37s794

ನನಗೆ ಬಿಜೆಪಿಯಿಂದ ಆ ರೀತಿ ಯಾವ ಆಫರೂ ಬಂದಿಲ್ಲ. ಯಾರು ನನ್ನನ್ನು ಸಂಪರ್ಕ ಮಾಡಿಲ್ಲ. ಇದು ಕೇವಲ ಊಹಾಪೋಹಗಳು ಅಷ್ಟೆ. ನನ್ನನ್ನು ಯಾರು ಕೂಡ ಮಾತನಾಡಿಸುವುದಿಲ್ಲ. ನನಗೂ ಬಿಜೆಪಿಯಲ್ಲಿ ಹಲವರು ಸ್ನೇಹಿತರಿದ್ದಾರೆ. ಆದರೆ ನನ್ನನ್ನು ಯಾರು ಕೂಡ ಸಂಪರ್ಕ ಮಾಡಿಲ್ಲ. ನಾನು ಕೊನೆಯವರೆಗೂ ಜೆಡಿಎಸ್‍ನಲ್ಲಿಯೇ ಇರುತ್ತೇನೆ ಎಂದು ಅಶ್ವಿನ್ ಹೇಳಿದ್ದಾರೆ.

ಟಿ.ನರಸೀಪುರ ಕ್ಷೇತ್ರದ ಶಾಸಕ ಅಶ್ವಿನ್ ಕುಮಾರ್‌ಗೆ ಬಿಜೆಪಿಯಿಂದ 10 ಕೋಟಿ ಆಫರ್ ಬಂದಿದೆ. ಅವರು ಬಿಜೆಪಿಗೆ ಸೇರುತ್ತಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬಂದಿತ್ತು. ಇದೀಗ ಸ್ವತಃ ಅಶ್ವಿನ್ ಅವರೇ ಈ ಬಗ್ಗೆ ಸ್ಪಷ್ಟನೆ ಕೊಡುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

Share This Article
Leave a Comment

Leave a Reply

Your email address will not be published. Required fields are marked *