ವಿಜಯಪುರ: ನೀತಿ ಸಂಹಿತೆ ಜಾರಿಯಾಗಿದ್ದರೂ ಮತದಾರರಿಗೆ ದೇವರಹಿಪ್ಪರಗಿ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ಸೀರೆ ಹಂಚಿರುವ ಘಟನೆ ಮುದ್ದೆಬಿಹಾಳ ಪಟ್ಟಣದ ದಾಸೋಹ ಭವನದಲ್ಲಿ ನಡೆದಿದೆ.
ಚುನಾವಣೆ ಆಯೋಗವು ಇಂದು 11 ಗಂಟೆಗೆ ಮತದಾನ ನಡೆಯುವ ದಿನ ಮತ್ತು ಮತದಾನ ಎಣಿಸುವ ದಿನವನ್ನು ಇಂದು ಘೋಷಣೆ ಮಾಡಿ ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ತಿಳಿಸಿತ್ತು. ಎ.ಎಸ್ ಪಾಟೀಲ್ ಮಹಿಳೆಯರಿಗೆ ಸೀರೆಯನ್ನ ಹಂಚಿದ್ದಾರೆ.
ತಮ್ಮ ದಾಸೋಹ ನಿಲಯದಲ್ಲಿ ನಡೆಸುತ್ತಿರುವ ಐದು ದಿನಗಳ ಮಹಾಲಕ್ಷ್ಮಿ ಕುಂಕುಮಾರ್ಚನೆ ಹೋಮ ಹವನ ಧಾರ್ಮಿಕ ಕಾರ್ಯಕ್ರಮ ಮೂರನೇ ದಿನ ನಡಹಳ್ಳಿ ಸೀರೆಯನ್ನು ವಿತರಿಸಿದ್ದಾರೆ.
ಈ ಹಿಂದೆ ಕಾಂಗ್ರೆಸ್ ನಿಂದ ಉಚ್ಚಾಟಿತರಾಗಿದ್ದ ಪಾಟೀಲ್ ಅವರು ಬಳಿಕ ಜೆಡಿಎಸ್ ನಲ್ಲಿ ಗುರುತಿಸಿಕೊಂಡಿದ್ದರು. ಜೆಡಿಎಸ್‍ಗೆ ಸೇರಲಿದ್ದಾರೆ ಎನ್ನುವ ಮಾತುಗಳು ಬಂದಿದ್ದರೂ ಕಳೆದ ವಾರ ಬೆಂಗಳೂರಿನಲ್ಲಿ ಬಿಜೆಪಿ ಕಚೇರಿಯಲ್ಲಿ ಕಮಕ್ಕೆ ಸೇರ್ಪಡೆಯಾಗಿದ್ದರು.