ಧಾರವಾಡ: ನಗರದಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರೋ ವೀರಶೈವ ಲಿಂಗಾಯತ ಭವನ ಈಗ ವಿವಾದದ ಕೇಂದ್ರಬಿಂದುವಾಗಿದೆ. ಸಮುದಾಯ ಭವನದ ಮೇಲೆ ಶಾಸಕ ಅರವಿಂದ ಬೆಲ್ಲದ್ ಹಾಗು ಅವರ ಕುಟುಂಬಸ್ಥರ ಹೆಸರುಗಳು ವಿಜೃಂಭಿಸುತ್ತಿದ್ದು, ಇದು ಲಿಂಗಾಯತ ಸಮಾಜದ ಕೆಂಗಣ್ಣಿಗೆ ಗುರಿಯಾಗಿದೆ.
Advertisement
ಈ ಬಗ್ಗೆ ಮಾತನಾಡಿದ ಸಚಿವ ವಿನಯ್ ಕುಲಕರ್ಣಿ, ಇದು ಸಮಾಜದ ಎಲ್ಲರೂ ಸೇರಿ ನಿರ್ಮಾಣ ಮಾಡಿರೋ ಭವನ. ಭವನಕ್ಕೆ ಸರ್ಕಾರ 2 ಕೋಟಿ ರೂಪಾಯಿ ಅನುದಾನ ನೀಡಿದೆ. ಹೀಗಿರುವಾಗ ಯಾವುದೋ ಒಂದು ಕುಟುಂಬದ ಸದಸ್ಯರ ಹೆಸರು ಇಡೋದು ಸರಿಯಲ್ಲ. ಅಲ್ಲದೇ ಕಟ್ಟಡದ ಸಮಿತಿ ಅಧ್ಯಕ್ಷ ಸ್ಥಾನದಿಂದ ನನ್ನನ್ನ ತೆಗೆದು ಹಾಕಿದ್ದಾರೆ. ಇದು ನನ್ನ ಗಮನಕ್ಕೆ ಬಂದಿಲ್ಲ. ಇದು ಸಮಾಜದ ಕಟ್ಟಡ. ಸಮಾಜದ ಹೆಸರಿನಲ್ಲೇ ಇರಲಿ ಎಂದು ಹೇಳಿದ್ದಾರೆ.
Advertisement
Advertisement
ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಅರವಿಂದ್ ಬೆಲ್ಲದ್, ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಭವನ ಕಟ್ಟುವಾಗ ನಮ್ಮ ತಂದೆಯವರು 25 ಲಕ್ಷ ರೂ. ದಾನವಾಗಿ ನೀಡಿದ್ರು. ಅಂದು ಭವನಕ್ಕೆ ನಮ್ಮ ಮನೆತನದ ಹೆಸರು ಇಡಲಾಗುತ್ತದೆ ಎಂದು ಹೇಳಲಾಗಿತ್ತು. ಹಾಗೆಯೇ ನಮ್ಮ ಸಹೋದರಿಯರು ಸಹ ಕಟ್ಟಡ ನಿರ್ಮಾಣಕ್ಕೆ ಧನಸಹಾಯ ಮಾಡಿದ್ದಾರೆ ಎಂದು ಹೇಳಿದರು.
Advertisement
ಇನ್ನು ಈ ಕಟ್ಟಡದ ಮೇಲೆ ಬೆಲ್ಲದ್ ಕುಟುಂಬದವರ ಹೆಸರು ಹಾಕಿದ್ದಕ್ಕೆ ಅಖಿಲ ಭಾರತ ವೀರಶೈವ ರಾಷ್ಟ್ರೀಯ ಅಧ್ಯಕ್ಷ ಶಾಮನೂರ ಶಿವಶಂಕರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ