DistrictsKarnatakaLatestMain PostMandya

ನಾನು ಸೋತರೆ ಆರ್ಕೆಸ್ಟ್ರಾದಲ್ಲಿ ಹಾಡಿ ಜೀವನ ಮಾಡ್ತೀನಿ: ಅನ್ನದಾನಿ

ಮಂಡ್ಯ: ಮುಂದಿನ ಚುನಾವಣೆಯಲ್ಲಿ (Election) ನಾನು ಸೋತರೆ ಆರ್ಕೆಸ್ಟ್ರಾದಲ್ಲಿ ಹಾಡು ಹೇಳ್ಕೊಂಡು ಜೀವನ ಮಾಡುತ್ತೇನೆ ಎಂದು ಮಳವಳ್ಳಿಯ ಜೆಡಿಎಸ್ (JDS) ಶಾಸಕ ಕೆ‌.ಅನ್ನದಾನಿ (K Annadani) ಹೇಳಿದರು.

ಮಂಡ್ಯ (Mandya) ಜಿಲ್ಲೆಯ ಮಳವಳ್ಳಿ (Malavalli) ಪಟ್ಟಣದಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೀವು ನನ್ನ ಕೈ ಬಿಟ್ರೆ ನಾನು ಹಾಡು ಹೇಳಿಕೊಂಡು, ನಾಟಕವಾಡಿ ಜೀವನ ಮಾಡುತ್ತೇನೆ. ನಾನೊಬ್ಬ ಸಾಂಸ್ಕೃತಿಕ ವ್ಯಕ್ತಿ, ಬರೀ ರಾಜಕೀಯನೇ ನೆಚ್ಚಿಕೊಂಡಿಲ್ಲ, ರಾಜಕೀಯನೇ ಅಂಟಿಕೊಂಡು ಅದರಿಂದಲೇ ಆಸ್ತಿ ಮಾಡಿಕೊಂಡು ರಾಜಕೀಯದಲ್ಲೇ ಶ್ರೀಮಂತನಾಗಬೇಕೆಂಬುದು ನನಗಿಲ್ಲ ಎಂದರು.

ನಾನು ಹಾಡು ಹೇಳುತ್ತೇನೆ, ನಾಟಕ ಕಲಿತಿದ್ದೀನಿ, ನೀವೇನಾದ್ರು ನನ್ನ ತೆಗೆದು ಆಚೆಗೆ ಹಾಕಿದರೆ, ಆರ್ಕೆಸ್ಟ್ರಾದಲ್ಲಿ ಹಾಡು ಹೇಳ್ಕೊಂಡು ಜೀವನ ಮಾಡ್ತೀನಿ. ಜೀವನ ಮಾಡಲು ನನಗೆ ತೊಂದರೆ ಇಲ್ಲ. ಹಲವು ಕಲಾವಿದರು ನನಗೆ ಸ್ನೇಹಿತರಿದ್ದಾರೆ. ನಾಲ್ಕು ಒಳ್ಳೆ ಹಾಡು ಹೇಳಿದ್ರೆ ಬದುಕು ನಡೆಸಿಕೊಂಡು ಹೋಗಬಹುದು. ದೇವೇಗೌಡ್ರು, ಕುಮಾರಸ್ವಾಮಿ ಅವರು ಸಣ್ಣ ಲೋಪ ಇಲ್ಲದೆ ಆಡಳಿತ ನಡೆಸಿದ್ದಾರೆ. ಅವರ ಶಿಷ್ಯನಾಗಿ ನಾನು ಇಲ್ಲಿ ಏನ್ ಮಾಡ್ಬೇಕು ಎಂಬ ಚಿಂತನೆ ನಡೆಸುತ್ತಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಚುನಾವಣಾ ಪ್ರಚಾರಕ್ಕಾಗಿ ಸಿದ್ದರಾಮಯ್ಯಗೆ ಸಿದ್ಧವಾಯ್ತು ಹೈಫೈ ಪ್ರಚಾರದ ಬಸ್

ಕಮಿಷನ್‌ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನಿಮಗ್ಯಾರಾದ್ರು ಕಮಿಷನ್ ಇಸ್ಕೊತ್ತಾರೆ ಅಂತ ಹೇಳಿದ್ರೆ, ಅದು ಬರೀ ರಾಜಕೀಯ ಟೀಕೆಯಾಗಿದೆ. ಕನಕದಾಸರನ್ನೇ ಬಿಡಲಿಲ್ಲ ಸಮಾಜ, ಇನ್ನ ನನ್ನ ಬಿಡ್ತಾರಾ ಎಂದು ತಮ್ಮ ಮೇಲೆ ಬಂದಿರುವ ಆರೋಪಗಳನ್ನು ತಳ್ಳಿ ಹಾಕಿದರು. ಇದನ್ನೂ ಓದಿ: ದೇಗುಲ ಮಠದ ಮೂವರು ವಿದ್ಯಾರ್ಥಿಗಳು ನಾಪತ್ತೆ‌- ದೂರು ನೀಡಿದ ವಾರ್ಡನ್

Live Tv

Leave a Reply

Your email address will not be published. Required fields are marked *

Back to top button