ಬೆಂಗಳೂರು: ಮೈಸೂರು ಅತ್ಯಾಚಾರ ಪ್ರಕರಣದ ಕುರಿತು ಸದನದಲ್ಲಿ ಇಂದು ಭಾರೀ ಚರ್ಚೆ ನಡೆದಿದ್ದು, ಕಾಂಗ್ರೆಸ್‍ನ ಮಹಿಳಾ ಶಾಸಕಿಯರು ಭಾವುಕರಾಗಿ ಮಾತನಾಡಿದ್ದಾರೆ. ಅಲ್ಲದೆ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಕಣ್ಣೀರು ಹಾಕಿದ್ದಾರೆ.
Advertisement
ಅತ್ಯಾಚಾರ ಪ್ರಕರಣದ ಬಗ್ಗೆ ಮಾತಾಡಲು ಅವಕಾಶ ಕೊಡುತ್ತಿಲ್ಲ ಎಂದು ಆರಂಭದಲ್ಲಿ ಸದನದ ಬಾವಿಗಳಿದು ಕಾಂಗ್ರೆಸ್‍ನ ಮಹಿಳಾ ಶಾಸಕಿಯರು ಪ್ರತಿಭಟನೆ ನಡೆಸಿದರು. ಅಂಜಲಿ ನಿಂಬಾಳ್ಕರ್ ಹಾಗೂ ಸೌಮ್ಯ ರೆಡ್ಡಿ ಬಾವಿಗಿಳಿದು ಧರಣಿ ಕುಳಿತರು. ಬಳಿಕ ಸ್ಪೀಕರ್ ವಿಶ್ವೇಶರ ಹೆಗಡೆ ಕಾಗೇರಿ ಅವರನ್ನು ಸಮಧಾನ ಪಡಿಸಿ ಕಳುಹಿಸಿದರು. ಸ್ಪೀಕರ್ ಮಾತಿನ ನಂತರ ಮಹಿಳಾ ಶಾಸಕಿಯರು ಧರಣಿ ವಾಪಸ್ ಪಡೆದರು. ಇದನ್ನೂ ಓದಿ: 116.16 ಎಕರೆಯನ್ನು ಕೇವಲ 50 ಕೋಟಿಗೆ ಕೊಟ್ಟರೆ ಹೇಗೆ – ಸರ್ಕಾರಕ್ಕೆ ಡಿಕೆಶಿ ಪ್ರಶ್ನೆ
Advertisement
ಅತ್ಯಾಚಾರ ಸಂಬಂಧ ಸದನದಲ್ಲಿ ನಡೆಯುತ್ತಿರುವ ಚರ್ಚೆ ಕೇಳಿ, ನೊಂದು ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಅತ್ತಿದ್ದಾರೆ. ಶಾಸಕ ರಾಜೂ ಗೌಡ ಅವರು ಶಾಸಕಿ ಬಳಿ ಹೋಗಿ ಸಮಾಧಾನ ಮಾಡಲು ಯತ್ನಿಸಿದರು. ಬಳಿಕ ಹೊರಗೆ ಬಂದು ಮೊಗಸಾಲೆಯಲ್ಲಿ ಕೂತು ಅಂಜಲಿ ನಿಂಬಾಳ್ಕರ್ ಅತ್ತಿದ್ದಾರೆ.
Advertisement
Advertisement
ಕಾಂಗ್ರೆಸ್ ಆಡಳಿತಾವಧಿಯಲ್ಲಿ ಎಷ್ಟು ರೇಪ್ ಆಗಿದೆ ಎಂದು ಆಡಳಿತ ಪಕ್ಷದವರು ತಿರುಗೇಟು ನೀಡಿದ್ದರು. ಈ ಕುರಿತು ಮಾತನಾಡಿದ ಅಂಜಲಿ ನಿಂಬಾಳ್ಕರ್, ರೇಪ್‍ಗೆ ಆ ಕಾಲ, ಈ ಕಾಲ ಅಂತ ಇಲ್ಲ ಎಂದು ಕಾಂಗ್ರೆಸ್ ಮಹಿಳಾ ಸದಸ್ಯರು ಸಿಡಿದೆದ್ದರು. ಈ ರೀತಿ ರೇಪ್ ರೇಪ್ ಎಂದು ಹೇಳ್ಬೇಡಿ, ನಮ್ಮ ಮನಸ್ಸಿಗೆ ನೋವಾಗುತ್ತೆ ಎಂದು ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಪಂಚೆ ಕಳಚಿದೆ ಅಂತ ಸಿದ್ದರಾಮಯ್ಯನವರ ಕಿವಿಯಲ್ಲಿ ಹೇಳಿದ್ರು ಡಿಕೆಶಿ!
ಇದೇ ವೇಳೆ ಚಿತ್ರದುರ್ಗದಲ್ಲಿ 13 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣವನ್ನು ಪ್ರಸ್ತಾಪಿಸಿ ಶಾಸಕಿ ರೂಪಾ ಶಶಿಧರ್ ಭಾವುಕ ಭಾಷಣ ಮಾಡಿದ್ದಾರೆ. ತಾಯಿ ತನ್ನ ಮಗಳನ್ನು ಮನೆಯಲ್ಲಿ ಬಿಟ್ಟು ಆಚೆ ಹೋಗಿದ್ದರು, ವಾಪಸ್ ಬಂದಾಗ ಘಟನೆ ಬಗ್ಗೆ ಗೊತ್ತಾಗಿದೆ. ಆ ತಾಯಿ ಹೃದಯಕ್ಕೆ ಎಂಥ ನೋವಾಗಿರಬಹುದು? ಒಬ್ಬ ತಾಯಿಯಾಗಿ ಆ ತಾಯಿಯ ನೋವು ನನಗೆ ಅರ್ಥ ಆಗುತ್ತೆ ಎಂದು ಹೇಳಿದರು.
ಈ ಸದನದಲ್ಲಿ ರೇಪ್ ಅನ್ನೋ ಪದ ಬಳಕೆ ಮಾಡಬೇಡಿ ಎಂದು ಇದೇ ವೇಳೆ ಸದನಕ್ಕೆ ಶಾಸಕಿ ರೂಪಾ ಶಶಿಧರ್ ಮನವಿ ಮಾಡಿದರು. ಬೆಂಗಳೂರಿಗೆ ಅತ್ಯಾಚಾರ ಪ್ರಕರಣಗಳ ಸಂಖ್ಯೆಯಲ್ಲಿ ನಾಲ್ಕನೇ ಸ್ಥಾನ ಬಂದಿದೆ. ಬೆಂಗಳೂರಿನಲ್ಲಿ ವಾರ್ಷಿಕ 12 ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. 5 ಸಾವಿರ ಕೇಸ್ ಗಳಲ್ಲಿ ಇನ್ನೂ ಆರೋಪಿಗಳು ಪತ್ತೆಯಾಗಿಲ್ಲ ಎಂದು ಕಿಡಿಕಾರಿದರು.
ನಮ್ಮ ದೇಶದಲ್ಲಿ ದೇವಿ ಪೂಜೆ ನಡೆಯುತ್ತೆ, ನಮಗೆ ಪೂಜೆ ಅಗತ್ಯ ಇಲ್ಲ. ನಮಗೆ ಗೌರವ ಬೇಕು, ಸುರಕ್ಷತೆ ಬೇಕು ಎಂದು ಶಾಸಕಿ ಸೌಮ್ಯ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಕೇಸ್ ಮುಚ್ಚಿ ಹಾಕ್ತೀವಿ ಅನ್ನೋದನ್ನು ನಾವು ಖಂಡಿಸುತ್ತೇವೆ ಎಂದರು. ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಬಸರಾಜ್ ಬೊಮ್ಮಾಯಿ, ಮೈಸೂರು ಪ್ರಕರಣದಲ್ಲಿ ಅಗತ್ಯ ಕ್ರಮ ಕೈಗೊಂಡಿದ್ದೇವೆ. ಯಾವುದೇ ಲೋಪ ದೋಷ ಆಗಿಲ್ಲ ಹೇಳಿದರು. ಇದನ್ನೂ ಓದಿ: ಕೋರ್ಟ್ ಆದೇಶ ನೀಡಿದ್ರೂ ಕೆಲಸಕ್ಕೆ ನೇಮಿಸಿಲ್ಲ – ವಾಟರ್ ಮ್ಯಾನ್ ಆತ್ಮಹತ್ಯೆಗೆ ಯತ್ನ