ಬೆಳಗಾವಿ: ಅರ್ಜಿ ಸಲ್ಲಿಸಿ ವರ್ಷ ಕಳೆದರೂ ಪೆನ್ಷನ್ ಮಾಡಿಕೊಡದ ಅಧಿಕಾರಿಗಳಿಗೆ ಶಾಸಕಿ ಅಂಜಲಿ ನಿಂಬಾಳ್ಕರ್ ಮೈಚಳಿ ಬಿಡಿಸಿದ್ದಾರೆ.
ಜಿಲ್ಲೆಯ ಖಾನಾಪುರ ಪಟ್ಟಣದ ತಹಶೀಲ್ದಾರ್ ಕಚೇರಿಗೆ ದಿಢೀರ್ ಭೇಟಿ ನೀಡಿದ ಶಾಸಕಿ, ಅರ್ಜಿ ಸಲ್ಲಿಸಿ ಒಂದು ವರ್ಷವಾದರೂ ಪೆನ್ಷನ್ ಮಾಡಿಕೊಡ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಂಜಲಿ ನಿಂಬಾಳ್ಕರ್ ಕಳೆದ ವರ್ಷ 160 ಪೆನ್ಷನ್ ಅರ್ಜಿ ನೀಡಿದ್ದರು. ಒಂದು ವರ್ಷವಾದರೂ ಅಧಿಕಾರಿಗಳು ಪೆನ್ಷನ್ ಮಾಡಿಕೊಟ್ಟಿರಲಿಲ್ಲ, ಈ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡಿದ್ದಾರೆ.
Advertisement
Advertisement
ಒಂದು ವರ್ಷವಾದರೂ ಅರ್ಜಿಯನ್ನು ವಿಲೇವಾರಿ ಮಾಡದ್ದಕ್ಕೆ ಪೆನ್ಷನ್ ಸೂಪರ್ ವೈಸರ್ ಮತ್ತು ಕೇಸ್ ವರ್ಕರ್‌ಗೆ ಶಾಸಕಿ ಮೈಚಳಿ ಬಿಡಿಸಿದ್ದು, ದಾಖಲೆ ಸಮೇತ ಕಚೇರಿಗೆ ಆಗಮಿಸಿ ಅಧಿಕಾರಿಗಳಿಗೆ ಬೆವರಿಳಿಸಿದ್ದಾರೆ. ಜನರ ಪರವಾಗಿ ಕೆಲಸ ಮಾಡದಿದ್ದರೆ ಖಾನಾಪುರ ಬಿಡುವಂತೆ ಎಚ್ಚರಿಕೆ ನೀಡಿದ್ದಾರೆ.
Advertisement
ಯಾವ ರೀತಿ ಅರ್ಜಿಗಳ ವಿಲೇವಾರಿ ಮಾಡುತ್ತೀರಿ ಹೇಳಿ, ಅಧಿಕಾರಿಗಳು ಶಾಸಕಿ ಮುಂದೆಯೇ ನನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದು ಒಬ್ಬರ ಮೇಲೆ ಒಬ್ಬರು ಹಾಕಿ ಜಾರಿಕೊಳ್ಳಲು ಯತ್ನಿಸಿದರು. ಮಧ್ಯಾಹ್ನ ಆದರೂ ಎರಡನೇ ದರ್ಜೆ ಅಧಿಕಾರಿಗಳು ಕಚೇರಿಗೆ ಬಂದಿರಲಿಲ್ಲ. ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
Advertisement
ಅಧಿಕಾರಿಗಳ ಮಾತಿನಿಂದ ಬೇಸರಗೊಂಡ ಶಾಸಕಿ ಅಂಜಲಿ ನಿಂಬಾಳ್ಕರ್, ನಿಮ್ಮ ವೇತನ ಆಗದಿದ್ದರೆ ಸರ್ಕಾರ ಮತ್ತು ತಹಶಿಲ್ದಾರ ತಲೆ ತಿನ್ನುತ್ತೀರಿ. ನಮ್ಮ ಕೆಲಸವನ್ನು ಸರಿಯಾಗಿ ಮಾಡಿಕೊಡಿ ಎಂದು ಕೇಸ್ ವರ್ಕರ್‌ಗೆ ಕೈ ಮುಗಿದು ಬೇಡಿಕೊಂಡಿದ್ದಾರೆ. ನಿಮ್ಮ ಕಾಲಿಗೆ ಬೇಕಾದರೂ ಬೀಳುತ್ತೇನೆ ಕೆಲಸ ಮಾಡಿ. ಜನರ ಬಗ್ಗೆ ಸ್ವಲ್ಪ ಕಳಕಳಿ ಇಟ್ಟುಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.