ರಾಮನಗರ: ಶಾಸಕಿಯಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ರಾಮನಗರಕ್ಕೆ ಇಂದು ಅನಿತಾ ಕುಮಾರಸ್ವಾಮಿಯವರು ಭೇಟಿ ನೀಡಿ ನಗರದ ಕೆಂಗಲ್ ಹನುಮಂತಯ್ಯ ಭವನದಲ್ಲಿನ ಸಿಎಂ ವಿಶೇಷ ಕರ್ತವ್ಯಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕರ ಸಮಸ್ಯೆ ಆಲಿಸಿದ್ದಾರೆ.
ಜೆಡಿಎಸ್ ಮುಖಂಡರು ಹಾಗೂ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ. ಇದೇ ವೇಳೆ ಮಾಧ್ಯಮದವರು ಪ್ರತಿಕ್ರಿಯೆ ಕೇಳಲು ಮುಂದಾದಾಗ ಪತಿ ಸಿಎಂ ಕುಮಾರಸ್ವಾಮಿಯವರಂತೆ ಮಾಧ್ಯಮದವರನ್ನ ದೂರವಿಡುವ ಯತ್ನ ನಡೆಸಿದ್ದು, ಮಾಧ್ಯಮದವರಿಗೆ ಕೈ ಮುಗಿದು ಚುನಾವಣೆ ಮುಗಿದಿದೆ, ಈಗ ಏಕೆ ಬಂದಿದ್ದೀರಿ. ದಯವಿಟ್ಟು ನನಗೆ ಡಿಸ್ಟರ್ಬ್ ಮಾಡಬೇಡಿ. ಜನರ ಕೆಲಸ ಮಾಡುತ್ತೇವೆ ಎಂದು ಸಾಗಹಾಕಲು ಯತ್ನಿಸಿದ್ದಾರೆ.
Advertisement
Advertisement
ರೈತರ ವಿಧಾನಸೌಧ ಚಲೋ ಬಗ್ಗೆ ಮಾತನಾಡಿದ ಅವರು, ಅದೆಲ್ಲ ನನಗೆ ಗೊತ್ತಿಲ್ಲ. ರಾಜ್ಯದ ವಿಷಯ, ಅದನ್ನೇನಿದ್ದರೂ ಸಿಎಂ ಕುಮಾರಸ್ವಾಮಿಯವರ ಹತ್ತಿರ ಮಾತನಾಡಿ. ರೈತರ ಬಗ್ಗೆ ಕುಮಾರಸ್ವಾಮಿಯವರಿಗೆ ಇರುವಷ್ಟು ಕಾಳಜಿ ಬೇರೆ ಯಾವ ರಾಜಕಾರಣಿಗೂ ಸಹ ಇಲ್ಲ. ರೈತರನ್ನ ಕರೆದು ಸಿಎಂ ಚರ್ಚೆ ಮಾಡುತ್ತಾರೆ. ಎಲ್ಲ ಸಮಸ್ಯೆಯನ್ನ ಬಗೆಹರಿಸುತ್ತಾರೆ ಅದರಲ್ಲಿ ರಾಜಕೀಯ ಬೆರೆಸುವುದು ಬೇಡ. ಕಬ್ಬು ಬೆಳೆಗಾರರೇ ಇರಬಹುದು, ಮಾವು, ರೇಷ್ಮೆ ಬೆಳೆಗಾರರ ಸಮಸ್ಯೆಗಳನ್ನ ಬಗೆಹರಿಸುತ್ತಾರೆ ಎಂದು ತಿಳಿಸಿದರು.
Advertisement
Advertisement
ಇನ್ನೂ ರಾಮನಗರ ಕ್ಷೇತ್ರದಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ಮೊದಲ ಆದ್ಯತೆ ನೀಡಲಾಗುವುದು. ಈಗಾಗಲೇ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದು, ಆದಷ್ಟು ಬೇಗ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews