– ಆರೋಗ್ಯ ವಿಚಾರಿಸಲು ಮನೆಗೆ ತೆರಳಿದ್ದ ಶಾಸಕರು
ಬೆಂಗಳೂರು: ಚಿಕ್ಕಮಗಳೂರು ಶಾಸಕ ಸಿ.ಟಿ ರವಿ ಅವರು ಸಿಗರೇಟ್ ಸೇದಲ್ಲ, ಡ್ರಿಂಕ್ಸ್ ಮಾಡಲ್ಲ. ಅಲ್ಲದೆ ಅವರಿಗೆ ಡ್ರೈವಿಂಗ್ ಕೂಡ ಬರಲ್ಲ ಎಂದು ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಹೇಳಿದ್ದಾರೆ.
ಸಿ.ಟಿ ರವಿ ಕಾರು ಅಪಘಾತವಾಗಿದ್ದ ಸುದ್ದಿ ತಿಳಿದ ಕೂಡಲೇ ಆನಂದ್ ಸಿಂಗ್ ಅವರು ಸಿ.ಟಿ ರವಿ ಅವರನ್ನು ಭೇಟಿ ಮಾಡಲು ಅವರ ಮನೆಗೆ ಬಂದಿದ್ದರು. ಆದರೆ ಅವರು ಮನೆಯಲ್ಲಿ ಇರಲಿಲ್ಲ. ಹೀಗಾಗಿ ಗೇಟ್ ಬಳಿ ನಿಂತು ವಾಪಸ್ ಹೋಗಿದ್ದಾರೆ. ಈ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಆನಂದ್ ಸಿಂಗ್, ಸದ್ಯಕ್ಕೆ ನನ್ನ ಆರೋಗ್ಯ ಸುಧಾರಿಸಿದೆ. ಮಾಧ್ಯಮದಲ್ಲಿ ಈ ಸುದ್ದಿ ನೋಡಿ ಅವರನ್ನು ನೋಡಲು ಬಂದೆ. ಆದರೆ ಅವರು ಆಸ್ಪತ್ರೆಯಲ್ಲಿ ಇದ್ದಾರೆ ಎಂದು ಹೇಳಿದ್ದಾರೆ. ಹೀಗಾಗಿ ರವಿ ಅವರನ್ನು ನೋಡಲು ಆಸ್ಪತ್ರೆಗೆ ಹೋಗುತ್ತಿದ್ದೇನೆ ಎಂದು ಹೇಳಿದ್ರು.
ಅಪಘಾತದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನಾನು ಟಿವಿ ನೋಡಿ ಬಂದಿದ್ದೇನೆ. ರವಿ ಸಿಗರೇಟ್ ಸೇದಲ್ಲ, ಕುಡಿಯುವುದಿಲ್ಲ ಹಾಗೂ ಅವರು ಗಾಡಿ ಓಡಿಸುವುದಿಲ್ಲ. ರವಿ ಅವರು ಬೆಳಗ್ಗೆ ಎದ್ದು ಯೋಗ ಮಾಡುವವರು. ಈ ರೀತಿ ಅವರು ಏನೂ ಮಾಡಲ್ಲ. ಅವರು ನನ್ನನ್ನು ನೋಡಲು ಬಂದಿದ್ದರು. ಆದ್ದರಿಂದ ಅವರನ್ನು ನೋಡಲು ನಾನು ಹೋಗುತ್ತಿದ್ದೇನೆ ಎಂದು ಸಿ.ಟಿ ರವಿ ಪರ ಆನಂದ್ ಸಿಂಗ್ ಬ್ಯಾಟಿಂಗ್ ಮಾಡಿದ್ದಾರೆ.
ಬಿಜೆಪಿ ಸ್ಪಷ್ಟನೆ:
ಮಾಧ್ಯಮಗಳಲ್ಲಿ ಬಂದ ಹಾಗೆ ಸಿ.ಟಿ. ರವಿ ಅವರಿಗೆ ಕುಡಿಯೋ ಅಭ್ಯಾಸವಿಲ್ಲ. ಅಪಘಾತದಲ್ಲಿ ಸಿ.ಟಿ ರವಿ ಎದೆಗೂ ಗಾಯವಾಗಿದೆ. ಅವರು ಕಾರನ್ನ ಚಲಾಯಿಸುತ್ತಿರಲಿಲ್ಲ. ಘಟನೆ ನಡೆದ ಕೂಡಲೇ ಅವರು ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆಯನ್ನ ಮೆರೆದಿದ್ದಾರೆ. ಅವರು ಕೂಡ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಈ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇವೆ. ಪೊಲೀಸರು ಅವಕಾಶ ಕೊಟ್ಟ ನಂತರವೇ ಅವರು ಅಪಘಾತ ಸ್ಥಳದಿಂದ ಹೋಗಿದ್ದಾರೆ ಎಂದು ರಾಜ್ಯ ಬಿಜೆಪಿ ಸ್ಪಷ್ಟನೆ ನೀಡಿದೆ.
ಇತ್ತ ಸಿಟಿ ರವಿ ಕಾರು ಡಿಕ್ಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಸಿಟಿ ರವಿ ಕಾರು ಚಾಲಕನ ವಿರುದ್ಧ ದೂರು ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv