ಬೆಂಗಳೂರು: ಬೇಲೇಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರಾದ ನಾಗೇಂದ್ರ ಮತ್ತು ಆನಂದ್ ಸಿಂಗ್‍ಗೆ ಸಂಕಷ್ಟ ಎದುರಾಗಿದೆ.
ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನ ನ್ಯಾಯಾಧೀಶರಾದ ಬಿ.ವಿ.ಪಾಟೀಲ್ ಜಾಮೀನು ರಹಿತ ವಾರಂಟ್ ನೀಡಿ ಆದೇಶ ಹೊರಡಿಸಿದ್ದಾರೆ. ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಿಂದ ಆರೋಪಿ ಸ್ಥಾನದಿಂದ ಕೈಬಿಡುವಂತೆ ಆನಂದ್ ಸಿಂಗ್ ಅರ್ಜಿ ಸಲ್ಲಿಸಿದ್ದರು. ಇವರು ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾ ಮಾಡಿತ್ತು. ಆದ್ದರಿಂದ ಈಗ ಆನಂದ್ ಸಿಂಗ್ ಸಂಬಂಧಿ ಶ್ಯಾಮರಾಜ್ ಸಿಂಗ್‍ಗೂ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ.
Advertisement
Advertisement
ಬೇಲೇಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗಬೇಕಿತ್ತು. ಕಳೆದ ಮೂರು ಬಾರಿಯಿಂದಲೂ ವಿಚಾರಣೆಗೆ ಹಾಜರಾಗಿ ಎಂದು ಕೋರ್ಟ್ ಸಮನ್ಸ್ ಜಾರಿ ಮಾಡಿತ್ತು. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಆರೋಪಿಗಳಲ್ಲಿ ಒಂಭತ್ತು ಆರೋಪಿಗಳು ಕೋರ್ಟ್ ಗೆ ಹಾಜರಾಗಿದ್ದರು. ಅದರಲ್ಲಿ ಮೂವರು ಆರೋಪಿಗಳಾದ ಶಾಸಕರಾದಂತಹ ನಾಗೇಂದ್ರ, ಆನಂದ್ ಸಿಂಗ್ ಮತ್ತು ಶ್ಯಾಮರಾಜ್ ಸಿಂಗ್ ಕೋರ್ಟ್ ಗೆ ಹಾಜರಾಗಿಲ್ಲ.
Advertisement
ಈ ಹಿನ್ನೆಲೆಯಲ್ಲಿ ಜಾಮೀನು ರಹಿತ ವಾರಂಟ್ ಅನ್ನು ವಿಶೇಷ ನ್ಯಾಯಾಲಯ ಹೊರಡಿಸಿದೆ. ವಾರಂಟ್ ಹೊರಡಿಸಿರುವುದರಿಂದ ಮೂವರಿಗೂ ಬಂಧನದ ಭೀತಿ ಎದುರಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv