ಬೆಂಗಳೂರು: ರಾಜ್ಯಸಭೆ ಚುನಾವಣೆ ಇಂದು ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಸಿಬ್ಬಂದಿಯೊಬ್ಬರು ಮತ ಹಾಕುಲು ಬರುವಂತೆ ಶಾಸಕ ಅಂಬರಿಶ್ ಗೆ ಕರೆ ಮಾಡಿದ್ದಾರೆ.
ಮೂರ್ನಾಲ್ಕು ಬಾರಿ ಫೋನ್ ಮಾಡಿದ್ರೂ ಅಂಬರೀಶ್ ಕರೆ ಸ್ವೀಕರಿಸಲಿಲ್ಲ. ಅದ್ರೂ ಬಿಡದೆ ನಿರಂತರವಾಗಿ ಸಿಬ್ಬಂದಿ ಕರೆ ಮಾಡಿದ್ರು. ಹೀಗಾಗಿ ಐದನೇ ಬಾರಿ ಕರೆ ಸ್ವೀಕರಿಸಿದ ಅಂಬಿ, ತನ್ನ ಸ್ಟೈಲ್ ನಲ್ಲಿಯೇ ಡೈಲಾಗ್ ಹೊಡೆದಿದ್ದಾರೆ. ಈಗ ಸ್ನಾನಕ್ಕೆ ಹೊರಟಿದ್ದೇನೆ ಇರ್ಲಾ ಅಂತ ಹೇಳಿದ್ದಾರೆ.
Advertisement
ಸಂಜೆ 4 ಗಂಟೆಯವರೆಗೆ ಟೈಮ್ ಅಯ್ತೆ ಅಂತ ಹೇಳುವ ಮೂಲಕ ಕರೆ ಮಾಡಿದ ಕೆಪಿಸಿಸಿ ಸಿಬ್ಬಂದಿಯನ್ನು ನಯವಾಗೇ ಗದರಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
Advertisement
ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ 4 ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದ್ದು, ವಿಧಾನಸೌಧದ ಮೊದಲನೇ ಮಹಡಿಯ ಸಮಿತಿ ಕೊಠಡಿಯಲ್ಲಿ ಬೆಳಗ್ಗೆ 9 ರಿಂದ ಸಂಜೆ 4ರ ತನಕ ಮತದಾನ ನಡೆಯಲಿದೆ. ಸಂಜೆ ನಾಲ್ಕರ ನಂತರ ಮತ ಎಣಿಕೆ ನಡೆಯಲಿದ್ದು, ಸಂಜೆ 6 ಗಂಟೆಯೊಳಗೆ ಫಲಿತಾಂಶ ಹೊರಬೀಳಲಿದೆ. ಮೂರು ಪಕ್ಷಗಳಿಂದ ಐವರು ಅಖಾಡದಲ್ಲಿದ್ದಾರೆ. ಕಾಂಗ್ರೆಸ್‍ನಿಂದ ಹನುಮಂತಯ್ಯ, ನಸೀರ್ ಹುಸೇನ್, ಜಿ.ಸಿ. ಚಂದ್ರಶೇಖರ್. ಬಿಜೆಪಿಯಿಂದ ರಾಜೀವ್ ಚಂದ್ರಶೇಖರ್ ಹಾಗೂ ಜೆಡಿಎಸ್‍ನಿಂದ ಬಿ.ಎಂ. ಫಾರೂಕ್ ಕಣದಲ್ಲಿದ್ದಾರೆ.