ಮೈಸೂರು: ಮತದಾರರು ಸಾರ್ವಜನಿಕವಾಗಿ ಶಾಸಕರನ್ನು ಪ್ರಶ್ನಿಸುವುದೇ ತಪ್ಪಾ? ಒಂದು ವೇಳೆ ಪ್ರಶ್ನಿಸಿದರೆ ಪ್ರಶ್ನೆ ಮಾಡಿದವರ ಕುಟುಂಬಸ್ಥರನ್ನು ಉದಾಹರಣೆಗೆ ತೆಗೆದುಕೊಂಡು ಏಕವಚನದಲ್ಲೆ ಗದರುವುದು ಶಾಸಕರ ಸುಸಂಸ್ಕೃತ ವರ್ತನೆಯಾ? ಇಂತಹ ಪ್ರಶ್ನೆ ಮೂಡಿಸುವಂತಹ ವೀಡಿಯೋ ಈಗ ವೈರಲ್ ಆಗಿದೆ.
Advertisement
ಮೈಸೂರು ಜಿಲ್ಲೆಯ ಹುಣಸೂರು ಕ್ಷೇತ್ರದ ಶಾಸಕ ಎಚ್.ಪಿ. ಮಂಜುನಾಥ್ ಸರ್ಕಾರದ ಸಾರ್ವಜನಿಕ ಸಭೆಯಲ್ಲೆ ತಮ್ಮನ್ನು ಬಹಿರಂಗವಾಗಿ ಪ್ರಶ್ನಿಸಿದ ವ್ಯಕ್ತಿಗಳಿಗೆ ಹೀನಾಮಾನವಾಗಿ ಗದರಿಸಿದ್ದಾರೆ. ತಾಲೂಕಿನ ಬಿಳಿಗೆರೆ ಗ್ರಾಮದಲ್ಲಿ ನಡೆದ ಸ್ವಚ್ಛತಾ ಸಂಭ್ರಮ ಕಾರ್ಯಕ್ರಮದಲ್ಲಿ ಶಾಸಕರು ಇಂತಹ ವರ್ತನೆ ಪ್ರದರ್ಶಿಸಿದ್ದಾರೆ.
Advertisement
Advertisement
ಶಾಸಕರು ಭಾಷಣ ಮಾಡುವಾಗ ಮಧ್ಯ ವ್ಯಕ್ತಿಯೊಬ್ಬ ಶೌಚಾಲಯ ಕಟ್ಟುವ ವಿಚಾರದಲ್ಲಿ ಅಧಿಕಾರಿಯೊಬ್ಬರ ನಡೆ ಬಗ್ಗೆ ಪ್ರಶ್ನಿಸಿದ್ದಾರೆ. ಆಗ ಕೋಪಗೊಂಡ ಶಾಸಕರು, ಬರೋ ನೀನೇ ಮೈಕ್ ಮುಂದೆ ಮಾತಾಡು. ನಿನ್ನ ಹೆಂಡತಿ ಬೆಳಗ್ಗೆ ನಾಲ್ಕು ಗಂಟೆಗೆ ಬಯಲು ಪ್ರದೇಶದಲ್ಲಿ ಶೌಚಾಲಯಕ್ಕೆ ಕೂತಾಗ ಆಕೆಯನ್ನು ಅಲ್ಲಿಂದ್ದ ಎದ್ದೇಳಿಸಲು ಆ ಅಧಿಕಾರಿ ಬಂದು ವಿಷಲ್ ಊದಬೇಕಿತ್ತೇನೋ. ನೀನು ದೊಡ್ಡ ಸ್ವಾಭಿಮಾನಿ, ಸುಮ್ನೆ ನಿಂತುಕೋ ಎಂದು ದರ್ಪದಿಂದ ಮಾತಾಡಿದ್ದಾರೆ.
Advertisement
ಸಭೆಯಲ್ಲಿ ನಂತರ ನಡೆದ ಕೆಲ ಗದ್ದಲದ ವೇಳೆಯೂ ತಮ್ಮನ್ನು ಪ್ರಶ್ನಿಸಿದವರ ಮೇಲೆ ಏಕ ವಚನದಲ್ಲೇ ಶಾಸಕರು ಹರಿಹಾಯ್ದಿದ್ದಾರೆ.
https://www.youtube.com/watch?v=WErgp2oF7vA&feature=youtu.be