Dakshina KannadaKarnatakaLatestMain Post

ವೀಡಿಯೋ: ರಸ್ತೆಗಾಗಿ ಬೇಡಿಕೆ ಇಟ್ಟ ಮಹಿಳೆಗೆ ಮೂಡಬಿದ್ರೆ ಶಾಸಕ ಅಭಯ್‍ಚಂದ್ರ ಜೈನ್ ನಿಂದನೆ

– ಕಾಂಗ್ರೆಸ್ ಶಾಸಕನ ಧಮ್ಕಿ ಈಗ ಫುಲ್ ವೈರಲ್

ಮಂಗಳೂರು: ರಸ್ತೆ ನಿರ್ಮಾಣದ ಬಗ್ಗೆ ಮನವಿ ಮಾಡಿದ ಮಹಿಳೆಯೋರ್ವರನ್ನು ಮೂಡಬಿದ್ರೆ ಶಾಸಕ ಅಭಯಚಂದ್ರ ಜೈನ್ ಏಕವಚನದಲ್ಲಿ ನಿಂದಿಸಿ ಅವಮಾನಿಸಿದ ಘಟನೆ ನಡೆದಿದ್ದು, ಇದರ ವೀಡಿಯೋ ಈಗ ವೈರಲ್ ಆಗಿದೆ.

ಮೂಡಬಿದ್ರೆಯ ಧರೆಗುಡ್ಡೆ ಗ್ರಾಮಪಂಚಾಯತ್ ವ್ಯಾಪ್ತಿಯ ಪಣಪಿಲ ಎಂಬಲ್ಲಿ ರಸ್ತೆ ನಿರ್ಮಾಣದ ಬಗ್ಗೆ ಪರಿಶೀಲನೆಗೆ ಬಂದಿದ್ದ ಶಾಸಕ ಅಭಯ್‍ಚಂದ್ರ ಜೈನ್ ಅವರಲ್ಲಿ ಸ್ಥಳೀಯ ನಿವಾಸಿ ವಸಂತಿ ಪೂಜಾರ್ತಿ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಇಲ್ಲಿನ ಶಾಲೆಯೊಂದಕ್ಕೆ ಹೋಗುವ ರಸ್ತೆಗೆ ಇಂದಿಗೂ ಡಾಂಬರೀಕರಣ ಆಗಿಲ್ಲ. ಆ ರಸ್ತೆಯನ್ನು ಪರಿಶೀಲಿಸಿ ಎಂದಿದ್ದೇ ತಡ ಶಾಸಕ ಜೈನ್ ಸಿಡಿಮಿಡಿಗೊಂಡು ಮಹಿಳೆಗೆ ತುಳು ಭಾಷೆಯಲ್ಲಿ ಏಕವಚನದಲ್ಲಿ ಬೈದಿದ್ದಾರೆ.

`ನಮ್ಮಲ್ಲಿ ಶಾಲೆಗೆ ಹೋಗುವ ಮಕ್ಕಳಿದ್ದಾರೆ. ನಮಗೆ ಶಾಲೆ ಮುಖ್ಯ. ಹೀಗಾಗಿ ರಸ್ತೆಗೆ ಡಾಂಬರೀಕರಣ ಮಾಡಿಕೊಡಿ ಎಂದು ಮಹಿಳೆ ಕೇಳಿಕೊಂಡಾಗ ಅಭಯ್ ಚಂದ್ರ ಜೈನ್, `ಮಾಡಿ ಕೊಡಲ್ಲ ಅಂದ್ರೆ ಮಾಡಿಕೊಡಲ್ಲ ಏನ್ ಮಾಡ್ತಿ ನೀನು’ ಅಂತಾ ಕಿಡಿಕಾರಿದ್ದಾರೆ. ಈ ವೇಳೆ ಜೈನ್ ಮಾತಿಗೆ ಜೊತೆಯಿದ್ದವರೂ ದನಿಗೂಡಿಸಿದ್ದಾರೆ.

ಇದನ್ನು ಅಲ್ಲೇ ಇದ್ದ ವ್ಯಕ್ತಿಯೋರ್ವರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಮೊಬೈಲ್ ಚಿತ್ರೀಕರಣ ಆಗುತ್ತದೆ ಎಂದು ಗಮನಿಸಿದ ಧರೆಗುಡ್ಡೆ ಪಂಚಾಯತ್ ಸದಸ್ಯ ಸುಭಾಶ್ಚಂದ್ರ ಜೈನ್ ತಕ್ಷಣ ಮೊಬೈಲ್‍ಗೆ `ಕೈ’ ಅಡ್ಡ ಇಟ್ಟಿದ್ದಾರೆ. ಇದೀಗ ಈ ದೃಶ್ಯ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು ಶಾಸಕರ ವರ್ತನೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

https://www.youtube.com/watch?v=8tZC4zCUQ7s&feature=youtu.be

Related Articles

Leave a Reply

Your email address will not be published. Required fields are marked *