ಬೆಳಗಾವಿ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ (Ayodhya) ರಾಮಲಲ್ಲಾ ಪ್ರಾಣಪ್ರತಿಷ್ಠೆ ನೆರವೇರಲು ಇನ್ನು 7 ದಿನಗಳು ಬಾಕಿಯಿವೆ. ಈ ಐತಿಹಾಸಿಕ ಕ್ಷಣಕ್ಕಾಗಿ ದೇಶ, ವಿದೇಶಗಳಲ್ಲಿ ನೆಲೆಸಿರುವ ರಾಮನ ಭಕ್ತರು ಉತ್ಸುಕರಾಗಿ ಕಾಯುತ್ತಿದ್ದಾರೆ. ಅಲ್ಲದೇ ಶ್ರೀರಾಮನ ಭಕ್ತಿಯನ್ನು ನಾಡಿನಾದ್ಯಂತ ಪಸರಿಸಲು ಹಲವು ರೀತಿಯ ಸೇವಾ ಕಾರ್ಯಗಳನ್ನು ಭಕ್ತರು ಹಮ್ಮಿಕೊಂಡಿದ್ದಾರೆ.
Advertisement
ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯ ದಿನದಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ್ (Abhay Patil), ತಮ್ಮ ಕ್ಷೇತ್ರದ 1 ಲಕ್ಷ ಮನೆಗಳಿಗೆ 5 ಲಕ್ಷ ಮೋತಿಚೂರು ಲಾಡು ವಿತರಣೆ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ಇದನ್ನೂ ಓದಿ: ರಾಮಮಂದಿರಕ್ಕಾಗಿ 44 ವರ್ಷಗಳಿಂದ ಊಟ ತ್ಯಾಗ, ಮೌನ ವ್ರತ – ಪ್ರಾಣಪ್ರತಿಷ್ಠೆಗೆ ಆಹ್ವಾನ ಸಿಗದೇ ಮೌನಿ ಬಾಬಾ ನಿರಾಸೆ
Advertisement
Advertisement
ಅಂದು ದಕ್ಷಿಣ ಕ್ಷೇತ್ರದಲ್ಲಿ 1 ಲಕ್ಷ ಮನೆಗಳಿಗೆ ಲಾಡು ವಿತರಿಸಲಿದ್ದಾರೆ. 300 ಗ್ರಾಮದ ಪ್ರತಿ ಮನೆಗಳಿಗೆ 5 ಲಾಡುಗಳನ್ನೊಳಗೊಂಡ ಬಾಕ್ಸ್ ವಿತರಿಸಲಿದ್ದಾರೆ. ಅದರತೆ 1 ಲಕ್ಷ ಮನೆಗಳಿಗೆ 5 ಲಕ್ಷ ಲಾಡು ಆಗಲಿದೆ. ಇದನ್ನೂ ಓದಿ: ರಾಮಮಂದಿರ ಪ್ರಾಣಪ್ರತಿಷ್ಠೆಗೆ 55 ರಾಷ್ಟ್ರಗಳ 100ಕ್ಕೂ ಹೆಚ್ಚು ಗಣ್ಯರಿಗೆ ಆಹ್ವಾನ – ಯಾವ್ಯಾವ ದೇಶಕ್ಕೆ ಆಮಂತ್ರಣ?
Advertisement
ಈಗಾಗಲೇ ಲಾಡು ತಯಾರಿಸುವ ಕಾರ್ಯ ಆರಂಭಗೊಂಡಿದೆ. ಅದಕ್ಕಾಗಿ ರಾಜಸ್ಥಾನದಿಂದ 50 ಮಂದಿ ನುರಿತರು ಬೆಳಗಾವಿಗೆ ಬಂದಿದ್ದಾರೆ. ಸ್ಥಳೀಯ 250 ಮಹಿಳೆಯರು ಮೋತಿಚೂರು ಲಾಡು ತಯಾರಿಕೆ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಕಾರ್ಯಕರ್ತರು ಮನೆ ಮನೆಗೆ ತೆರಳಿ ಲಾಡು ವಿತರಿಸುವ ಕಾರ್ಯಕ್ಕೆ ಸಜ್ಜಾಗುತ್ತಿದ್ದಾರೆ. ಸ್ವಾತಂತ್ರ‍್ಯ ಅಮೃತಮಹೋತ್ಸವ ಸಮಯದಲ್ಲಿ ಪ್ರತಿ ಮನೆಗೆ ಜಿಲೇಬಿ ವಿತರಿಸಿದ್ದ ಶಾಸಕ ಅಭಯ್ ಪಾಟೀಲ್ ರಾಮಮಂದಿರ ಉದ್ಘಾಟನೆಗೆ ಲಾಡು ವಿತರಿಸಲಿದ್ದಾರೆ.
ಅಲ್ಲದೇ 10 ಸಾವಿರ ರಾಮಭಕ್ತರ ಕೈಮೇಲೆ ಶ್ರೀರಾಮನ ಟ್ಯಾಟೂ ಹಾಕಿಸಲಿದ್ದಾರೆ. ಇದನ್ನೂ ಓದಿ: Ayodhya Ram Mandir: ಕಾಶಿ ಯಜ್ಞಶಾಲೆಯಲ್ಲಿ 40 ದಿನ ವಿಶೇಷ ಪೂಜೆ – ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ