ಬೆಳಗಾವಿ: ಇಲ್ಲಿಯೂ ನಿಮಗೆ ಬೇರೆ ದೇಶದ ನೋಟುಗಳು ಹಾಗೂ ಶಸ್ತ್ರಾಸ್ತ್ರಗಳು ಸಿಗುತ್ತವೆ ಎಂದು ಶಾಸಕ ಅಭಯ್ ಪಾಟೀಲ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕರೋಶಿಯಲ್ಲಿ ಪತ್ತೆಯಾದ ಪಾಕಿಸ್ತಾನ ನೋಟು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಪಾಟೀಲ್, ನಾನು ಸೀರಿಯಸ್ ಆಗಿ ಹೇಳುತ್ತಿದ್ದೇನೆ. ಬೆಳಗಾವಿಯಲ್ಲಿರುವ ಕೆಲವು ಪ್ರದೇಶಗಳನ್ನು ಪರಿಶೀಲಿಸಿದರೆ ಇಲ್ಲಿಯೂ ನಿಮಗೆ ಬೇರೆ ದೇಶದ ನೋಟುಗಳು ಸಿಗುತ್ತವೆ. ಶಸ್ತ್ರಾಸ್ತ್ರಗಳು ಕೂಡ ಸಿಗುತ್ತವೆ ಎಂದು ಗಂಭೀರ ಆರೋಪ ಮಾಡಿದರು.
Advertisement
Advertisement
ಬೆಳಗಾವಿಯಲ್ಲಿರುವ ಪೊಲೀಸ್ ಡಿಪಾರ್ಟ್‍ಮೆಂಟ್ ಇನ್ನೂ ಅಷ್ಟೊಂದು ಕಾರ್ಯರೂಪಕ್ಕೆ ಬಂದಿಲ್ಲ. ಮುಂದಿನ ದಿನಗಳಲ್ಲಿ ಸರಿಯಾಗಿ ದಾರಿಗೆ ತರುವಂತಹ ಪೊಲೀಸ್ ಇಲಾಖೆ ಮಾಡಬೇಕಾಗುತ್ತದೆ. ಬೆಳಗಾವಿಯಲ್ಲಿಯೂ ಸ್ಫೋಟಕ ಪರಿಸ್ಥಿತಿ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ದೇಶದ ಸಂವಿಧಾನ ಪಾಲನೆ ಮಾಡದವರಿಗೆ ಭಾರತದಲ್ಲಿ ಇರಲು ಹಕ್ಕಿಲ್ಲ: ಅಭಯ್ ಪಾಟೀಲ್
Advertisement
ಬೆಳಗಾವಿಯ ಕೆಲವು ಏರಿಯಾಗಳಲ್ಲಿ ಪೊಲೀಸರೂ ಹೋಗುವುದಿಲ್ಲ. ಅಂತಹ ವಾತಾವರಣ ಇದೆ. ಇವರೇ, ಅವರೇ ಹೋಗಬೇಕು ಎಂದೇನಿಲ್ಲ. ಎಲ್ಲೆಡೆ ಹುಡುಕಾಡಬೇಕು ಎಂದು ಪೊಲೀಸ್ ಇಲಾಖೆಗೆ ವಿನಂತಿ ಮಾಡುತ್ತೇನೆ. ಬೆಳಗಾವಿಯಲ್ಲಿ ಅದೆಷ್ಟೋ ತಲ್ವಾರ್‍ಗಳು ಅವೈದ್ಯಕೀಯವಾಗಿ ಬಂದಿವೆ. ಯಾವುದಾದರೂ ಗಲಾಟೆ ನಡೆದರೆ ಯಾರ ಕೈಯಲ್ಲಿ ತಲ್ವಾರ್ ಇರುತ್ತದೆ? ಅದು ಪೊಲೀಸರಿಗೆ ಗೊತ್ತಿಲ್ವಾ ಎಂದು ಅಭಯ್ ಪಾಟೀಲ್ ಆಕ್ರೋಶ ಹೊರಹಾಕಿದರು.
Advertisement
ನನ್ನ ವೈಯಕ್ತಿಕ ಅಭಿಪ್ರಾಯ ಪ್ರಕಾರ ಶೇ.60 ರಿಂದ 70ರಷ್ಟು ಕಂಟ್ರೋಲ್ ಇದೆ. ನಾನು ಪ್ರಶ್ನೆ ಎತ್ತಿದ ಮೇಲೆ ಸಂಬಂಧ ಪಟ್ಟ ಅಧಿಕಾರಿಗಳು ಗಂಭೀರವಾಗಿ ತಗೆದುಕೊಂಡಿದ್ದರು. ಮಟ್ಕಾ ಆಡುವವರು, ಜೂಜುಕೋರರು, ಗಾಂಜಾ ಮಾರುವವರು ಬೆಳಗಾವಿ ಬಿಟ್ಟು ಹೋಗಿದ್ದಾರೆ. ಇನ್ನೂ ಕೆಲವರು ಉಳಿದಿದ್ದಾರೆ. ಅವರ ಮೇಲೆ ಕ್ರಮ ಆಗಬೇಕು ಎಂದರು. ಇದನ್ನೂ ಓದಿ: ದೇಶದ ವೈವಿಧ್ಯತೆಯನ್ನು ಗುರುತಿಸುವುದು ಸಂಘ ಪರಿವಾರದ ಅಜೆಂಡಾವಲ್ಲ : ಪಿಣರಾಯಿ