ಮಡಿಕೇರಿ: ಮುಡಾದಲ್ಲಿ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಬರೋಬ್ಬರಿ 5,000 ಕೋಟಿ ರೂ. ಅವ್ಯವಹಾರ ಆಗಿದೆ ಎಂದು ಅರಕಲಗೂಡು ಶಾಸಕ ಎ ಮಂಜು (A Manju) ಹೊಸ ಬಂಬ್ ಸಿಡಿಸಿದ್ದಾರೆ.
ಕೊಡಗಿನ ಕುಶಾಲನಗರದಲ್ಲಿ (Kushalanagara) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಡಾ ಹಗರಣ ಸರಿಯಾಗಿ ತನಿಖೆಯಾಗಿ ಎಲ್ಲವೂ ಹೊರಬರಬೇಕು ಆಗಮಾತ್ರ ನ್ಯಾಯ ಸಿಗಲು ಸಾಧ್ಯ. ಸದ್ಯಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ಅವರು ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಹಮಾಸ್ ಈ ಕೆಲಸ ಮಾಡಿದ್ರೆ ನಾಳೆಯೇ ಯುದ್ಧ ಕೊನೆಗೊಳ್ಳುತ್ತದೆ – ಇಸ್ರೇಲ್ ಪ್ರಧಾನಿ ಎಚ್ಚರಿಕೆ
ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟರು. ಬಳಿಕ ಎಫ್ಐಆರ್ ಆಯ್ತು, ಎಫ್ಐಆರ್ ಆದ ಮೇಲೆ ರಾಜೀನಾಮೆ ಕೊಡಬೇಕು ಅಲ್ವಾ? ನಾವು 14 ಸೈಟುಗಳನ್ನು ವಾಪಸ್ ಕೊಡಿ ಎಂದಿರಲಿಲ್ಲ. ಕಳ್ಳನ ಮನಸ್ಸು ಉಳ್ಳುಉಳ್ಳುಗೆ ಅಂದಹಾಗೆ. ಇವರು ಸೈಟು ವಾಪಸ್ ಕೊಟ್ಟಿದ್ದಾರೆ. ಅಂದರೆ ತಪ್ಪು ಮಾಡಿರುವುದು ಸಾಬೀತಾದಂತೆ ಅಲ್ಲವೇ? ಮರೀಗೌಡ ಮುಡಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದು ಕೂಡ ಅಪರಾಧವಾಗಿದೆ ಅಂತ ಸಾಬೀತಾದಂತೆ ಅಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
ನಾನು ಲಾಯರ್ ನಂದೂ ಒಂದು ಕಾನೂನಿದೆ ಎನ್ನುತ್ತಿದ್ದವರು ಸಿದ್ದರಾಮಯ್ಯನವರು. ಈ ಹಿಂದೆ ರಾಮಕೃಷ್ಣ ಹೆಗಡೆ, ದೇವೇಗೌಡ್ರು ಅವರ ಮೇಲೆಲ್ಲಾ ಆರೋಪ ಬಂದಿದ್ದವು. ಆಗ ಅವರೆಲ್ಲಾ ರಾಜೀನಾಮೆ ಕೊಟ್ಟಿದ್ದರು. ಸಿದ್ದರಾಮಯ್ಯನವರು ರಾಜೀನಾಮೆ ಕೊಡಲಿ, ತಪ್ಪಿಲ್ಲ ಎಂದು ಸಾಬೀತಾದರೆ ಮತ್ತೆ ಸಿಎಂ ಆಗಲಿ ಎಂದಿದ್ದಾರೆ. ಇದನ್ನೂ ಓದಿ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ, ಮುಡಾದಲ್ಲಿ 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದಿದ್ದೇ ಕಾಂಗ್ರೆಸ್‌ನವರು: ಅಶೋಕ್
ಮುಡಾದಲ್ಲಿ ಬರೋಬ್ಬರಿ 5 ಸಾವಿರ ಕೋಟಿ ಅವ್ಯವಹಾರ ಆಗಿದೆ. ಈ ಬಗ್ಗೆ ಸಮಗ್ರವಾಗಿ ತನಿಖೆ ಆಗಬೇಕು, ನನ್ನ ಹೆಸರಲ್ಲಿ ಸೈಟುಗಳಿದ್ದರೆ, ಆ ಬಗ್ಗೆಯೂ ತನಿಖೆಯಾಗಲಿ. ಯಾವುದೇ ಪಕ್ಷದವರದ್ದು ಇದ್ದರೂ ತನಿಖೆಯಾಗಲಿ. ಜನಸಾಮಾನ್ಯರ ತೆರಿಗೆ ಹಣ ನಷ್ಟವಾಗಬಾರದು ಅಷ್ಟೇ ಎಂದು ಹೇಳಿದ್ದಾರೆ.