ಚೆನ್ನೈ: ಪೊಂಗಲ್ ಹಬ್ಬದ (Pongal Festival) ಪ್ರಯುಕ್ತ ರಾಜ್ಯದ 2.22 ಕೋಟಿ ಪಡಿತರ ಚೀಟಿದಾರರಿಗೆ ಮತ್ತು ಶ್ರೀಲಂಕಾದ ತಮಿಳರ ಪುನರ್ವಸತಿ ಶಿಬಿರಗಳಲ್ಲಿ ವಾಸಿಸುತ್ತಿರುವ ಎಲ್ಲಾ ಕುಟುಂಬಗಳಿಗೆ ತಲಾ 3,000 ರೂ. ನಗದು ಉಡುಗೊರೆ ನೀಡುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (MK Stalin) ಘೋಷಿಸಿದ್ದಾರೆ.
ஒவ்வொரு இல்லத்திலும் மகிழ்ச்சி பொங்கும் தைப் பொங்கல்!
உள்ளத்தில் பொங்கும் மகிழ்ச்சி இல்லத்தில் கொண்டாட்டமாக நிறைய, தமிழ்நாட்டிலுள்ள 2 கோடியே 22 லட்சத்து 91 ஆயிரத்து 710 அரிசி பெறும் குடும்ப அட்டைதாரர்களுக்கும் பொங்கல் பரிசுத்தொகுப்புடன் ரூ.3000 வழங்குகிறது நமது #DravidianModel… pic.twitter.com/hg6YCtVrHo
— M.K.Stalin – தமிழ்நாட்டை தலைகுனிய விடமாட்டேன் (@mkstalin) January 4, 2026
2026ರ ತಮಿಳುನಾಡು ವಿಧಾನಸಭೆ ಚುನಾವಣೆ (TamilNadu Assembly Election) ಗಮನದಲ್ಲಿಟ್ಟುಕೊಂಡು ಸ್ಟಾಲಿನ್ ತಮ್ಮ ಜನರಿಗೆ ಈ ಉಡುಗೊರೆ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: IPL ನಿಂದ ಮುಸ್ತಾಫಿಜುರ್ ಔಟ್ – ವಿಶ್ವಕಪ್ ಆಡಲು ಭಾರತಕ್ಕೆ ಬರಲ್ಲ; ಪಾಕ್ ರೀತಿ ಕ್ಯಾತೆ ತೆಗೆದ ಬಾಂಗ್ಲಾ
ತಮಿಳುನಾಡಿನ ಪ್ರಮುಖ ಹಬ್ಬವಾಗಿರುವ ʻಪೊಂಗಲ್ʼ 3 ದಿನ ಆಚರಿಸಲಾಗುತ್ತದೆ. ಹೀಗಾಗಿ ಜನವರಿ 15 ರಂದು ಬರುವ ಹಬ್ಬದ ದಿನ 2 ಕೋಟಿಗೂ ಅಧಿಕ ಅಕ್ಕಿ ಪಡಿತರ ಚೀಟಿದಾರರಿಗೆ (Ration Card Holder) 3,000 ರೂಪಾಯಿಗಳ ನಗದು ಉಡುಗೊರೆ ನೀಡುವುದಾಗಿ ಘೋಷಿಸಿದ್ದಾರೆ. ಇದನ್ನೂ ಓದಿ: ನೆಟ್‌ವರ್ಕ್ ಸಿಗ್ತಿಲ್ಲ ಅಂತ ಬಿಲ್ಡಿಂಗ್ ಮೇಲೇರಿದ್ದ ವ್ಯಕ್ತಿ 17ನೇ ಮಹಡಿಯಿಂದ ಬಿದ್ದು ಸಾವು
ಆದಾಯ ತೆರಿಗೆ ಪಾವತಿದಾರರು ಹಾಗೂ ಕೇಂದ್ರ ಮತ್ತು ಸರ್ಕಾರಿ ನೌಕರರು, ಸಾರ್ವಜನಿಕ ಉದ್ಯೋಗಿಗಳನ್ನು ಹೊರತುಪಡಿಸಿ ಇನ್ನುಳಿದ 2.22 ಕೋಟಿ ಪಡಿತ ಚೀಟಿದಾರರಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ‘ಪೊಂಗಲ್ ಉಡುಗೊರೆ’ಯಾಗಿ 3,000 ಹಣ ನೀಡುವುದಾಗಿ ತಿಳಿಸಿದ್ದಾರೆ.
6,900 ಕೋಟಿ ರೂ. ಹೊರೆ
ಜೊತೆಗೆ ಕಬ್ಬು, ತಲಾ ಒಂದು ಕೆ.ಜಿ ಅಕ್ಕಿ, ತುಪ್ಪ ಹಾಗೂ ಸಕ್ಕರೆ ಒಳಗೊಂಡಿರುವ ಪೊಂಗಲ್ ಗಿಫ್ಟ್ ಹ್ಯಾಂಪರ್ ನೀಡಲಾಗುತ್ತದೆ. ಇದರ ಜೊತೆಗೆ ಪಡಿತರರಿಗೆ ಉಚಿತ ಪಂಚೆ ಮತ್ತು ಸೀರೆಯು ನೀಡಲಾಗುತ್ತದೆ. ಈ ಬೃಹತ್ ಯೋಜನೆಯಿಂದಾಗಿ ತಮಿಳುನಾಡು ರಾಜ್ಯದ ಬೊಕ್ಕಸಕ್ಕೆ 6,900 ಕೋಟಿ ರೂಪಾಯಿಗೂ ಅಧಿಕ ಹೊರೆ ಬೀಳಲಿದೆ ಎಂದು ಎಂ.ಕೆ ಸ್ಟಾಲಿನ್ ಅವರು ಹೇಳಿಕೊಂಡಿದ್ದಾರೆ.
ಈಗಾಗಲೇ ದ್ರಾವಿಡ ಮುನ್ನೇಟ್ರ ಕಳಗಂ (ಡಿಎಂಕೆ) ನೇತೃತ್ವದ ಸರ್ಕಾರ 1 ಕೋಟಿಗೂ ಹೆಚ್ಚು ಮಹಿಳೆಯರಿಗೆ ಮಾಸಿಕ 1,000 ರೂ. ಧನ ಸಹಾಯ ನೀಡುತ್ತಿದೆ. ಸರ್ಕಾರಿ ಶಾಲೆಗಳಿಂದ ಉತ್ತೀರ್ಣರಾಗಿ ಕಾಲೇಜು ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೂ ಧನ ಸಹಾಯ ನೀಡುತ್ತಿದೆ. ಇದನ್ನೂ ಓದಿ: ಬಂಗಾಳ ಚುನಾವಣೆಗೂ ಮುನ್ನವೇ ʻಕೈʼ ಹಿಡಿದ ಟಿಎಂಸಿ ರಾಜ್ಯಸಭಾ ಸಂಸದೆ ಮೌಸಮ್ ನೂರ್



