ಚೆನ್ನೈ: ಉಕ್ರೇನ್‍ನ ಖಾರ್ಕಿವ್‍ನಲ್ಲಿ ಭಾರತೀಯ ವೈದ್ಯಕೀಯ ವಿದ್ಯಾರ್ಥಿಯೊಬ್ಬನ ಸಾವಿನ ಬಗ್ಗೆ ಕೆಲವು ಬಿಜೆಪಿ ನಾಯಕರು ಅರ್ಥವಿಲ್ಲದ ಕಾಮೆಂಟ್‍ಗಳನ್ನು ಮಾಡಿದ್ದಾರೆ ಎಂದು ಆರೋಪಿಸಿ ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ವಾಗ್ದಾಳಿ ನಡೆಸಿದರು.
Advertisement
ಉಕ್ರೇನ್‍ನಂತಹ ಸಣ್ಣ ದೇಶಗಳಿಗೆ ವೈದ್ಯಕೀಯ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ಏಕೆ ಹೋಗುತ್ತಾರೆ ಎಂದು ಕೇಳಲು ಬಿಜೆಪಿಗೆ ಇದು ಸರಿಯಾದ ಸಮಯವಲ್ಲ. ಖಾರ್ಕಿವ್ ಶೆಲ್ ದಾಳಿಗೆ ಬಲಿಯಾದ ಕರ್ನಾಟಕದ ವಿದ್ಯಾರ್ಥಿ ನವೀನ್ ವಿಚಾರವಾಗಿ ಮಾತನಾಡಿದ ಅವರು, ನವೀನ್ ಶೇಕಡಾ 97 ರಷ್ಟು ಅಂಕಗಳನ್ನು ಗಳಿಸಿದ್ದು, ನಂತರ ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸಾಧ್ಯವಾಗದೇ ಒತ್ತಾಯದಿಂದ ಉಕ್ರೇನ್‍ನಲ್ಲಿ ಓದಲು ಹೋದ ವಿಚಾರ ನನಗೆ ಬೇಸರ ತಂದಿದೆ ಎಂದಿದ್ದಾರೆ. ಇದನ್ನೂ ಓದಿ: ರಷ್ಯಾದ ಯುದ್ಧನೌಕೆಗಳು ಕ್ರೈಮಿಯಾವನ್ನು ಬಿಟ್ಟು ಒಡೆಸ್ಸಾದತ್ತ ಹೋಗುತ್ತಿವೆ: ಅಮೇರಿಕ
Advertisement
Advertisement
ಜೀವ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ವಿದ್ಯಾರ್ಥಿಗಳ ಬಗ್ಗೆ ಸರ್ಕಾರದ ಹೇಳಿಕೆಗಳು, ಕೆಲವು ಕೇಂದ್ರ ಸಚಿವರ ಸಂದರ್ಶನಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರವನ್ನು ಬೆಂಬಲಿಸುವ ಪೋಸ್ಟ್‌ಗಳು ಗಾಯದ ಮೇಲೆ ಬರೆ ಎಳೆದಿದಂತಿದೆ. ಪ್ರಧಾನಿ ಮೋದಿ ಅವರು ಈ ವಿಚಾರವಾಗಿ ಕಟ್ಟುನಿಟ್ಟಿನ ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿದರು. ಹಾಗೆಯೇ ಎಲ್ಲರಿಗೂ ಎಚ್ಚರಿಕೆ ನೀಡಬೇಕು ಎಂದು ಹೇಳಿದ್ದಾರೆ.
Advertisement
ನೀಟ್ ವಿದ್ಯಾರ್ಥಿಗಳಿಗೆ ಅಡ್ಡಿಯಾಗಿರುವುದು ಮತ್ತು ಬಡತನದ ಹಿನ್ನೆಲೆ ವೈದ್ಯಕೀಯ ಆಕಾಂಕ್ಷೆಗಳನ್ನು ಕಸಿದುಕೊಳ್ಳುತ್ತಿರುವುದೇ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗಲು ಕಾರಣ. ಇದಕ್ಕೆ ಡಿಎಂಕೆ ವಿರೋಧ ವ್ಯಕ್ತಪಡಿಸುತ್ತಿದ್ದು, ನೀಟ್ ರದ್ದುಪಡಿಸಲು ಆದ್ಯತೆ ನೀಡಬೇಕು ಎಂದಿದ್ದಾರೆ. ಇದನ್ನೂ ಓದಿ: 25 ವರ್ಷಗಳಿಂದ ನಾವೇ ಆಹಾರ ನೀಡಿದ ಹಾವು, ಈಗ ನಮ್ಮನ್ನೇ ಕುಕ್ಕುತ್ತಿದೆ: ಉದ್ಧವ್ ಠಾಕ್ರೆ