ನರೇಂದ್ರ ಮೋದಿಯಿಂದ ದೇಶದ ಜನತೆ ಭಯದಲ್ಲಿದ್ದಾರೆ: ಎಸ್‍ಡಿಪಿಐ

Public TV
2 Min Read
MK Faizy

ತಂಜಾವೂರು: ನರೇಂದ್ರ ಮೋದಿಯಿಂದಾಗಿ ದೇಶದ ಜನತೆ ಭಯಪಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಎಸ್‍ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ ಹೇಳಿದ್ದಾರೆ.

ಪಕ್ಷದ ತಮಿಳುನಾಡು ರಾಜ್ಯ ಪ್ರತಿನಿಧಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೋದಿ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆಂದು ಕೇಳಿದರೆ ಜನರು ಭಯಭೀತರಾಗಿ ತಮ್ಮ, ತಮ್ಮ ದೇವರನ್ನು ಕರೆದು ಮುಂಬರುವ ಅನಾಹುತಗಳಿಂದ ರಕ್ಷಿಸುವಂತೆ ಪ್ರಾರ್ಥಿಸುತ್ತಾರೆ. ಜಗತ್ತಿನಲ್ಲಿ ಎಲ್ಲಿಯೂ ಇಂತಹ ಪರಿಸ್ಥಿತಿಯಿಲ್ಲ. ದೇಶದ ಸಾರ್ವಜನಿಕ ಕ್ಷೇತ್ರಗಳನ್ನು ಒಂದೊಂದಾಗಿ ಮಾರಾಟ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

MK Faizy

ಈ ಹಿಂದೆ ಸಂಘ ಪರಿವಾರ ಮುಸ್ಲಿಮರನ್ನು ಮಾತ್ರ ಹೆದರಿಸುತ್ತಿದ್ದರೆ, ಇಂದು ಪರಿಸ್ಥಿತಿ ಬದಲಾಗಿದೆ. ಕ್ರೈಸ್ತರು, ದಲಿತರು, ಮಹಿಳೆಯರು ಮತ್ತು ರೈತರು ಎಲ್ಲರೂ ಇಂದು ಭಯದಲ್ಲಿದ್ದಾರೆ. ದೇಶದ ಒಕ್ಕೂಟ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬಲಹೀನ ಗೊಳಿಸಿದ್ದಾರೆ. ರಾಜ್ಯಗಳು ಯಾವುದೇ ಅಧಿಕಾರವನ್ನು ಹೊಂದಿರದ ರೀತಿಯಲ್ಲಿ ಪ್ರತಿಯೊಂದು ಶಾಸನ ನಿಯಮಗಳನ್ನು ರೂಪಿಸಲಾಗುತ್ತಿದೆ. ಇಡೀ ದೇಶವನ್ನು ತಮ್ಮ ಪೊಲೀಸ್ ಪಡೆಗಳ ಅಧೀನಕ್ಕೆ ತರಲು ಪ್ರಯತ್ನಿಸುತ್ತಿದೆ. ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಮತ್ತು ಬಂಗಾಳ ಮುಖ್ಯಮಂತ್ರಿ ಮಮತಾ ಮುಂತಾದವರಿಗೆ ಸಮಸ್ಯೆ ಸೃಷ್ಟಿಸಲು ಬಿಎಸ್‍ಎಫ್‍ಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಅದೆಷ್ಟೋ ಏಜೆನ್ಸಿಗಳು ಜನರನ್ನು ಹೆದರಿಸಲಿಕ್ಕಾಗಿಯೇ ಮುಂದೆ ಬರುತ್ತಿದೆ.

MK Faizy

ದೇಶವು ಅತ್ಯಂತ ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಹಾಗೂ ಇತರ ಪಕ್ಷಗಳ ನಿಲುವು ಶೋಚನೀಯವಾಗಿದೆ. ಎಲ್ಲರೂ ಬಿಜೆಪಿ ಹೇಳುವುದರ ಜೊತೆಗೆ ನಿಲ್ಲುತ್ತಿದ್ದಾರೆ. ಬಿಜೆಪಿಯು ಅತೀ ದೊಡ್ಡ ಶ್ರೀರಾಮನ ಪ್ರತಿಮೆಯನ್ನು ನಿರ್ಮಿಸಲು ಮುಂದಾಗುತ್ತಿದ್ದರೆ, ಅಖಿಲೇಶ್ ಪರಶುರಾಮನ ಅತಿ ದೊಡ್ಡ ಪ್ರತಿಮೆಯನ್ನು ನಿರ್ಮಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಯಾರೂ ಸಾರ್ವಜನಿಕ ಆಸ್ಪತ್ರೆಗಳು ಅಥವಾ ವಿಶ್ವವಿದ್ಯಾಲಯಗಳನ್ನು ನಿರ್ಮಿಸಲು ಪ್ರಯತ್ನಿಸುತ್ತಿಲ್ಲ. ದೇಶದ ನಿರ್ಣಾಯಕರಾದ ಮುಸ್ಲಿಮರು, ಆದಿವಾಸಿಗಳು ಅಥವಾ ದಲಿತರನ್ನು ಯಾವ ಪಕ್ಷಗಳು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 14 ವರ್ಷದ ಬಳಿಕ ಬೆಂಕಿಪೊಟ್ಟಣದ ಬೆಲೆ ಏರಿಕೆ

akhilesh yadav

ಇಂದು ದೇಶದಲ್ಲಿ ಬಿಜೆಪಿಯನ್ನು ನೇರವಾಗಿ ಎದುರಿಸುತ್ತಿರುವ ಏಕೈಕ ರಾಜಕೀಯ ಪಕ್ಷ ಎಸ್‍ಡಿಪಿಐ ಮಾತ್ರವಾಗಿದೆ. ದೇಶದ ಸುರಕ್ಷತೆಯನ್ನು ಬಯಸುವವರಿಗೆ ಎಸ್‍ಡಿಪಿಐ ಜೊತೆಗೆ ನಿಲ್ಲುವುದನ್ನು ಬಿಟ್ಟು ಬೇರೆ ದಾರಿಯೇ ಇಲ್ಲ ಎಂಬ ವಾತಾವರಣ ನಿರ್ಮಾಣವಾಗಿದೆ. ದೇಶದಲ್ಲಿ ಧಾರ್ಮಿಕ ಮುಖಂಡರು ಸೇರಿದಂತೆ ಅನೇಕರು ಮೌನವಾಗಿದ್ದಾರೆ. ಯಾಕೆಂದರೆ ಅವರು ಮೋದಿ, ಅಮಿತ್ ಶಾ, ಯೋಗಿಗೆ ಹೆದರಿದ್ದು, ಈ ಪರಿಸ್ಥಿತಿ ಬದಲಾಗಲಿದ್ದು, ನಿರ್ಭೀತಿಯ ಪರಿಸ್ಥಿತಿ ನಿರ್ಮಾಣವಾಗಲಿದೆ. ಇದಕ್ಕಾಗಿಯೇ ಎಸ್.ಡಿ.ಪಿ.ಐ ಕೆಲಸ ಮಾಡುತ್ತಿದೆ ಎಂದರು. ಇದನ್ನೂ ಓದಿ: ಕುಮಾರಸ್ವಾಮಿ ಬ್ರದರ್, ಬ್ರದರ್‌ ಅಂತ ಕತ್ತು ಕೊಯ್ಯೋದು: ಜಮೀರ್ ಅಹ್ಮದ್

modi

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯಾಧ್ಯಕ್ಷ ನೆಲ್ಲಯ್ ಮುಬಾರಕ್ ವಹಿಸಿದ್ದರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಮೈಸೂರು, ರಾಷ್ಟ್ರೀಯ ಉಪಾಧ್ಯಕ್ಷ ದಹ್ಲಾನ್ ಬಾಖವಿ, ರಾಷ್ಟ್ರೀಯ ಕಾರ್ಯದರ್ಶಿ ಮಂಡಳಿ ಸದಸ್ಯ ಅಬ್ದುಲ್ ಮಜೀದ್ ಫೈಝಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಇದನ್ನೂ ಓದಿ: ಠಾಣೆ ಮೆಟ್ಟಿಲೇರಿದ ಕಸ ಫೈಟ್ – ಪ್ರೊಡ್ಯೂಸರ್ ಪುತ್ರ, ಪತ್ನಿ ವಿರುದ್ಧ FIR

Share This Article
Leave a Comment

Leave a Reply

Your email address will not be published. Required fields are marked *