ಚೆನ್ನೈ: ಮರೀನಾ ಬೀಚ್‍ನಲ್ಲಿ ಕರುಣಾನಿಧಿ ಅಂತ್ಯಸಂಸ್ಕಾರದ ಮನವಿಯನ್ನು ಆಡಳಿತರೂಢ ಎಐಎಡಿಎಂಕೆ ಸರ್ಕಾರ ತಿರಸ್ಕರಿಸಿದೆ.
ಎಐಎಡಿಎಂಕೆ ಪಕ್ಷದ ನಿರ್ಧಾರದಿಂದಾಗಿ, ಈಗ ಯಾವ ಜಾಗದಲ್ಲಿ ಕರಣಾನಿಧಿ ಅಂತ್ಯಸಂಸ್ಕಾರ ಮಾಡಲಾಗುತ್ತದೆ, ಎನ್ನುವ ಬಗ್ಗೆ ಸ್ವಲ್ಪ ಗೊಂದಲ ಏರ್ಪಟ್ಟಿದೆ.
Advertisement
ಚೆನ್ನೈ ಮರೀನಾ ಬೀಚ್ ಪ್ರದೇಶ ಸೂಕ್ಷ್ಮ ವಲಯದಲ್ಲಿದೆ. ಹೀಗಾಗಿ ಈ ಜಾಗದಲ್ಲಿ ರಾಜಕೀಯ ನಾಯಕರ ಅಂತ್ಯ ಸಂಸ್ಕಾರಕ್ಕೆ ಅನುಮತಿ ನೀಡಬಾರದು ಎಂದು ಕೋರ್ಟ್ ನಲ್ಲಿ ಎರಡು ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣದ ಅರ್ಜಿ ಇತ್ಯರ್ಥವಾಗದ ಕಾರಣ ತಮಿಳುನಾಡು ಸರ್ಕಾರ ಅನುಮತಿ ನೀಡಿಲ್ಲ. ಪ್ರಕರಣ ಕೋರ್ಟ್ ನಲ್ಲಿ ಇರುವ ಮರೀನಾ ಬೀಚ್ ಬದಲಾಗಿ ಗಿಂಡಿ ಪ್ರದೇಶದ ಗಾಂಧಿ ಮಂಟಪದ ಬಳಿ ಅಂತ್ಯಸಂಸ್ಕಾರಕ್ಕೆ ಸ್ಥಳವಕಾಶ ಮಾಡಿಕೊಡುವುದಾಗಿ ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿ ತಿಳಿಸಿದ್ದಾರೆ.
Advertisement
Advertisement
ಸರ್ಕಾರ ಅನುಮತಿ ನೀಡದ ಕಾರಣ ಡಿಎಂಕೆ ಕಾರ್ಯಕರ್ತರು ಆಕ್ರೋಶಗೊಂಡಿದ್ದು, ಮರೀನಾ ಬೀಚ್ ನಲ್ಲೇ ಅಂತ್ಯಸಂಸ್ಕಾರ ನಡೆಸಬೇಕೆಂದು ಪಟ್ಟುಹಿಡಿದಿದ್ದಾರೆ.
Advertisement
ಏನು ಮಾಡಬೇಕೆಂದು ತಿಳಿಯದ ತಮಿಳುನಾಡು ಸರ್ಕಾರ ಈಗ ಕೇಂದ್ರದ ಮೊರೆ ಹೋಗಿದೆ. ಈ ಮಧ್ಯೆ ಡಿಎಂಕೆ ಪಕ್ಷ ಮರೀನಾ ಬೀಚ್ ಬಳಿ ಇರುವ ಜಾಗದಲ್ಲಿ ಅಂತ್ಯಸಂಸ್ಕಾರ ನಡೆಸಲು ಅನುಮತಿ ನೀಡುವಂತೆ ಹೈಕೋರ್ಟ್ ನಲ್ಲಿ ತುರ್ತು ಅರ್ಜಿ ಸಲ್ಲಿಸಿದೆ.
ಮರೀನಾ ಬೀಚ್‍ನಲ್ಲಿಯೇ ಎಐಎಡಿಎಂಕೆ ಸಂಸ್ಥಾಪಕ ಎಂ.ಜಿ.ರಾಮಚಂದ್ರನ್, ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಮತ್ತು ಡಿಎಂಕೆ ಸ್ಥಾಪಕ ಅಣ್ಣಾದೊರೈ ಅವರನ್ನು ಅಂತ್ಯಸಂಸ್ಕಾರ ಮಾಡಲಾಗಿದ್ದು ಅವರ ಸ್ಮಾರಕವನ್ನು ನಿರ್ಮಿಸಲಾಗಿದೆ.