ಐಜ್ವಾಲ್: ಮಿಜೋರಾಂ ಮುಖ್ಯಮಂತ್ರಿಯ ಪುತ್ರಿ ಏಕಾಏಕಿ ವೈದ್ಯರೊಬ್ಬರ ಮೇಲೆ ಹಲ್ಲೆ ನಡೆಸಿದ ವೀಡಿಯೋ ವೈರಲ್ ಆಗಿದೆ. ಈ ಹಿನ್ನೆಲೆ ಆಕೆಯ ತಂದೆ, ಮಿಜೋರಾಂನ ಸಿಎಂ ಝೋರಂತಂಗ ಅವರು ಖುದ್ದಾಗಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ.
ಸಿಎಂ ಪುತ್ರಿ ಮಿಲಾರಿ ಚಾಂಗ್ಟೆ ರಾಜ್ಯದ ರಾಜಧಾನಿ ಐಜ್ವಾಲ್‌ನಲ್ಲಿ ಚರ್ಮರೋಗ ತಜ್ಞನನ್ನು ಭೇಟಿಯಾಗಲು ಬಯಸಿದ್ದರು. ಆದರೆ ಭೇಟಿಗೂ ಮೊದಲು ಅಪಾಯಿಂಟ್‌ಮೆಂಟ್ ತೆಗೆದುಕೊಂಡು ಬರುವಂತೆ ಸೂಚಿಸಲಾಗಿತ್ತು. ಇದರಿಂದ ಕೋಪಗೊಂಡ ಚಾಂಗ್ಟೆ ವೈದ್ಯನ ಮೇಲೆ ಹಲ್ಲೆ ನಡೆಸಿದ್ದಾರೆ.
Advertisement
Advertisement
ಘಟನೆ ಬುಧವಾರ ನಡೆದಿರುವುದಾಗಿ ತಿಳಿದುಬಂದಿದ್ದು, ಹಲ್ಲೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವೀಡಿಯೋದಲ್ಲಿ ಮುಖ್ಯಮಂತ್ರಿಗಳ ಮಗಳು ವೈದ್ಯರ ಬಳಿ ಹೋಗುವುದು ಹಾಗೂ ವೈದ್ಯನಿಗೆ ಹೊಡೆದಿರುವುದು ಕಂಡುಬಂದಿದೆ. ಈ ವೀಡಿಯೋ ಕಳೆದ 2 ದಿನಗಳಿಂದ ವೈರಲ್ ಆಗುತ್ತಿದ್ದು, ಬಳಿಕ ಮುಖ್ಯಮಂತ್ರಿ ಹಾಗೂ ಅವರ ಕುಟುಂಬದ ಸದಸ್ಯರು ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ಜೀವ ಬೆದರಿಕೆ- ತನಿಖೆ ಮಾಡಿಸ್ತೀವಿ ಎಂದ ಸಿಎಂ
Advertisement
ಈ ಘಟನೆಯ ವಿರುದ್ಧ ಭಾರತೀಯ ವೈದ್ಯಕೀಯ ಸಂಘದ(ಐಎಂಎ) ಮಿಜೋರಾಂ ಘಟಕ ಪ್ರತಿಭಟನೆ ಆರಂಭಿಸಿದ್ದು, ವೈದ್ಯರು ಕಪ್ಪು ಬ್ಯಾಡ್ಜ್ ಧರಿಸಿ ಕೆಲಸ ಮಾಡಿರುವುದಾಗಿ ವರದಿಯಾಗಿದೆ.
Advertisement
ಅಂತಿಮವಾಗಿ ಮಿಜೋರಾಂ ಸಿಎಂ ಇನ್‌ಸ್ಟಾಗ್ರಾಮ್‌ನ ಅಧಿಕೃತ ಖಾತೆ ಮೂಲಕ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಐಜ್ವಾಲ್ ಮೂಲದ ಚರ್ಮರೋಗ ವೈದ್ಯರೊಂದಿಗೆ ತಮ್ಮ ಮಗಳು ತೋರಿದ ದುರ್ವರ್ತನೆಗೆ ನಾನು ಕ್ಷಮೆ ಯಾಚಿಸುತ್ತೇನೆ. ನಾನು ಯಾವುದೇ ರೀತಿಯಲ್ಲೂ ಆಕೆಯ ನಡವಳಿಕೆಯನ್ನು ಸಮರ್ಥಿಸುವುದಿಲ್ಲ ಎಂದು ಬರೆದಿದ್ದಾರೆ. ಇದನ್ನೂ ಓದಿ: ಕೇಜ್ರಿವಾಲ್ ಅವರೇ ದೆಹಲಿ ಮದ್ಯ ಅಕ್ರಮದ ಕಿಂಗ್‌ಪಿನ್, ಬಂಧನ ಹತ್ತಿರದಲ್ಲೇ ಇದೆ: ಬಿಜೆಪಿ