ಐಜಾಲ್: ತಾನು ಸೈಕಲ್ ಹತ್ತಿಸಿದ ಕೋಳಿಮರಿಯ ಜೀವ ಉಳಿಸಿಕೊಡಿ ಎಂದು ಆಸ್ಪತ್ರೆಗೆ ಓಡಿ ಬಂದಿದ್ದ ಪುಟ್ಟ ಬಾಲಕನೊಬ್ಬನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಈ 6ರ ಪೋರನ ಪ್ರಾಣಿ ಕಾಳಜಿ ಮೆಚ್ಚಿ ಪೇಟಾ(ಪ್ರಾಣಿ ದಯಾ ಸಂಘ) ಕಾಂಪಸಿನೇಟ್ ಕಿಡ್ ಎಂದು ಬಿರುದು ನೀಡಿದೆ.
Advertisement
ಮಿಜೋರಾಂ ರಾಜ್ಯದ ಡೆರೆಕ್ ಸಿ ಲಾಲ್ ಚಹನಿಮಾ(6) ತನ್ನ ಮುಗ್ಧತೆಯಿಂದ ಎಲ್ಲರ ಮನ ಗೆದ್ದಿದ್ದಾನೆ. ಈತ ಆಟವಾಡುತ್ತಿದ್ದಾಗ ಪಕ್ಕದ ಮನೆಯ ಕೋಳಿ ಮರಿಯ ಮೇಲೆ ಆಕಸ್ಮಾತ್ತಾಗಿ ಸೈಕಲ್ ಹತ್ತಿಸಿದ್ದನು. ಪರಿಣಾಮ ಕೋಳಿ ಮರಿ ಬಿದ್ದಿದ್ದು, ಇದರಿಂದ ಗಾಬರಿಗೊಂಡ ಬಾಲಕ ತನ್ನಲ್ಲಿದ್ದ 10 ರೂ. ಹಣವನ್ನು ಹಿಡಿದುಕೊಂಡು ಆಸ್ಪತ್ರೆಗೆ ಓಡಿದ್ದಾನೆ. ಅಲ್ಲದೆ ಅಲ್ಲಿ ತನ್ನ ಕೈಯಲ್ಲಿದ್ದ ಹಣ ನೀಡಿ ಕೋಳಿ ಮರಿಯನ್ನು ಬದುಕಿಸಿಕೊಡುವಂತೆ ಗೋಗರೆದಿದ್ದಾನೆ. ಇದನ್ನು ಆಸ್ಪತ್ರೆಯಲ್ಲಿದ್ದವರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದರು. ಬಳಿಕ ಬಾಲಕನ ಮುಗ್ಧತೆಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಲ್ಲದೆ ಈ ಫೋಟೋ ಸಾಕಷ್ಟು ನೆಟ್ಟಿಗರ ಮನ ಗೆದ್ದಿತ್ತು.
Advertisement
Advertisement
ಈ ಬಾಲಕ ಒಂದು ಕೈಯಲ್ಲಿ ಹತ್ತು ರೂ. ಹಾಗೂ ಇನ್ನೊಂದು ಕೈಯಲ್ಲಿ ಕೋಳಿ ಮರಿ ಹಿಡಿದುಕೊಂಡು ಇರುವ ಫೋಟೋವನ್ನು ಸಂಗ ಸೇಸ್ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಈ ಮುಗ್ಧ ಫೋಟೋಗೆ 1 ಲಕ್ಷಕ್ಕೂ ಅಧಿಕ ಲೈಕ್ಸ್ ಹಾಗೂ 90 ಸಾವಿರಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದಾರೆ.
Advertisement
ಇದನ್ನು ಗಮನಿಸಿದ ಭಾರತೀಯ ಪ್ರಾಣಿ ದಯಾ ಸಂಘವು ಈ ಬಾಲಕನ ಮುಗ್ಧತೆಗೆ ಕಾಂಪಸಿನೇಟ್ ಕಿಡ್ ಬಿರುದು ನೀಡಿ, ಈತನಿಗೆ ಪ್ರಾಣಿಗಳ ಮೇಲಿರುವ ಪ್ರೀತಿ, ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಇದಕ್ಕೂ ಮೊದಲು ಬಾಲಕನ ಶಾಲೆ ಕೂಡ ಆತನ ಕಾರ್ಯವನ್ನು ಮೆಚ್ಚಿ ಸನ್ಮಾನಿಸಿದೆ.
https://www.facebook.com/sanga.says/posts/2544025018945443:0