Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸಾಲು ಸಾಲು ಚಿತ್ರಗಳಲ್ಲಿ ಸಂಹಿತಾ ವಿನ್ಯಾ ಬ್ಯುಸಿ – ‘ಮಿಕ್ಸಿಂಗ್ ಪ್ರೀತಿ’ ಫೆ.20 ರಂದು ತೆರೆಗೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Crime | ಸಾಲು ಸಾಲು ಚಿತ್ರಗಳಲ್ಲಿ ಸಂಹಿತಾ ವಿನ್ಯಾ ಬ್ಯುಸಿ – ‘ಮಿಕ್ಸಿಂಗ್ ಪ್ರೀತಿ’ ಫೆ.20 ರಂದು ತೆರೆಗೆ

Crime

ಸಾಲು ಸಾಲು ಚಿತ್ರಗಳಲ್ಲಿ ಸಂಹಿತಾ ವಿನ್ಯಾ ಬ್ಯುಸಿ – ‘ಮಿಕ್ಸಿಂಗ್ ಪ್ರೀತಿ’ ಫೆ.20 ರಂದು ತೆರೆಗೆ

Public TV
Last updated: February 16, 2026 2:40 pm
Public TV
Share
2 Min Read
Samhita Vinya
SHARE

ಪೊಲ್ಲಾಚಿ ಮಹಾಲಿಂಗಂ ಅವರ ನಿರ್ದೇಶನದ ರೊಮ್ಯಾಂಟಿಕ್ ಕಾಮಿಡಿ, ಹಾರರ್, ಥ್ರಿಲ್ಲರ್ ಜಾನರ್ ಚಲನಚಿತ್ರ ‘ಮಿಕ್ಸಿಂಗ್ ಪ್ರೀತಿ’ (Mixing Preethi) ಫೆ.20 ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಸ್ಯಾಂಡಲ್ವುಡ್ ನಟಿ ಮತ್ತು ಸೂಪರ್ ಮಾಡೆಲ್ ಸಂಹಿತಾ ವಿನ್ಯಾ (Samhita Vinya) ನಾಯಕಿಯಾಗಿ ನಟಿಸಿದ್ದಾರೆ.

ಒಂದು ರೆಸಾರ್ಟ್ ನಲ್ಲಿ ನಡೆಯುವ ಹಾರರ್ ಕಥೆ ಇದಾಗಿದ್ದು, 3 ಜನ ಫ್ರೆಂಡ್ಸ್ ಆ ರೆಸಾರ್ಟ್ ಗೆ ಹೋದಾಗ ಅವರು ಎದುರಿಸುವ ದೆವ್ವದ ಕಾಟ, ಅಲ್ಲಿಂದ ಅವರೆಲ್ಲ ಹೇಗೆ ಹೊರಬಂದರು ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಈ ನಡುವೆ ಒಂದು ಲವ್ ಸ್ಟೋರಿ ಕೂಡ ಸಾಗುತ್ತದೆ.

Samhita Vinya 3

ಕೇರಳ, ಚೆನ್ನೈ ಹಾಗೂ ಬೆಂಗಳೂರಲ್ಲಿ ಚಿತ್ರೀಕರಣ ನಡೆಸಲಾಗಿದೆ. ರೆಸಾರ್ಟ್ ನಲ್ಲಿ ರಾತ್ರಿ ವೇಳೆ ಶೂಟ್ ಮಾಡುವಾಗ ನಿಜವಾದ ಹಾರರ್ ಫೀಲ್ ಆಯ್ತು ಎಂದು ನಾಯಕಿ ಸಂಹಿತಾ ಚಿತ್ರೀಕರಣದ ಅನುಭವ ಹಂಚಿಕೊಂಡರು.

ದೇಶ-ವಿದೇಶಗಳ 75 ಕ್ಕೂ ಹೆಚ್ಚು ಫ್ಯಾಷನ್ ಷೋಗಳಲ್ಲಿ ಶೋಸ್ಟಾಪರ್ ಆಗಿ ಭಾಗವಹಿಸಿ, ಸೂಪರ್ ಮಾಡೆಲ್ ಎನಿಸಿಕೊಂಡಿರುವ ಸಂಹಿತಾ ವಿನ್ಯಾ ಕನ್ನಡ ಹಾಗೂ ತಮಿಳು ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದು, ಇದೇ ಮೊದಲ ಬಾರಿಗೆ ಅವರು ಹಾರರ್, ಥ್ರಿಲ್ಲರ್ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸಂಹಿತಾ ವಿನ್ಯಾ ನಾಯಕಿಯಾಗಿ ನಟಿಸಿರುವ ಮೆಜೆಸ್ಟಿಕ್ -2′, ಆಯುಧ, ಸ್ವಾಭಿಮಾನಿ, ಯಾಕೋ ಬೇಜಾರು, ವಿದೂಷಕ ಚಿತ್ರಗಳು ಸದ್ಯದಲ್ಲೇ ಬಿಡುಗಡೆಗೆ ಸಿದ್ದವಾಗಿವೆ. ಅಮೃತಘಳಿಗೆ, ಜಿಎಸ್‌ಟಿ, ಲಂಗೋಟಿ ಮ್ಯಾನ್ ಅಲ್ಲದೇ ತೆಲುಗಿನ ಯುಆರ್‌ಮೈ ಹೀರೋ ಚಿತ್ರದಲ್ಲೂ ಸಂಹಿತಾ ವಿನ್ಯಾ ಅವರು ನಟಿಸಿದ್ದಾರೆ.

Samhita Vinya 2

ಹಾಲು ತುಪ್ಪ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಸಂಹಿತಾ ವಿನ್ಯಾ, ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು, ಅಮೃತ ಘಳಿಗೆ, ವಿಷ್ಣು ಸರ್ಕಲ್, ನಸಾಬ್, ಮಿಕ್ಸಿಂಗ್ ಪ್ರೀತಿ, ಸ್ವಾಭಿಮಾನಿ ಅಲ್ಲದೆ ತೆಲುಗು, ತಮಿಳು ಸೇರಿದಂತೆ 18ಕ್ಕೂ ಹೆಚ್ಚು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇದಲ್ಲದೆ ತಮಿಳಲ್ಲಿ ಜತಿನ್ ರಮೇಶ್ ಅಭಿನಯದ ಸಿನಿಮಾ, ಅಲ್ಲದೆ ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿರುವ ಹಿಡನ್ ಕ್ಯಾಮೆರಾ ಚಿತ್ರದಲ್ಲಿ ಸಂಹಿತಾ ನಾಯಕಿಯಾಗಿ ನಟಿಸುತ್ತಿದ್ದು, ಆ ಚಿತ್ರದ ಕೆಲಸ ಕೇರಳದಲ್ಲಿ ನಡೆಯುತ್ತಿದೆ.
ಮಿಕ್ಸಿಂಗ್ ಪ್ರೀತಿ ಚಿತ್ರದಲ್ಲಿ ಹೆಸರಾಂತ ಮಲಯಾಳಂ ನಟ ಸಿಂಟೊ ಜಾಕೋಬ್ ನಾಯಕನಾಗಿ ನಟಿಸಿದ್ದಾರೆ. ಉಳಿದಂತೆ ಪ್ರಿಯಾ ಪವನ್, ದಿವ್ಯ ಜಸ್ಮಿತಾ ನಟಿಸಿದ್ದಾರೆ. ಈ ಚಿತ್ರಕ್ಕೆ ರಾಜೇಶ್ ಮೋಹನ್ ಮತ್ತು ಗಣೇಶ್ವರನ್ ಅವರ ಸಂಗೀತ, ಸಾಧಿಕ್ ಕಬೀರ್ ಅವರ ಛಾಯಾಗ್ರಹಣವಿದೆ. ಇದೇ ಚಿತ್ರವು ತಮಿಳಲ್ಲಿ ಮಿಕ್ಸಿಂಗ್ ಕಾದಲ್ ಎಂಬ ಹೆಸರಲ್ಲಿ ಬಿಡುಗಡೆಯಾಗುತ್ತಿದೆ.

TAGGED:horrorkannada actressMixing PreethiSamhita Vinyasandalwoodಕನ್ನಡ ಸಿನಿಮಾಮಿಕ್ಸಿಂಗ್‌ ಪ್ರೀತಿಸಂಹಿತಾ ವಿನ್ಯಾ
Share This Article
Facebook Whatsapp Whatsapp Telegram

Cinema news

vijay devarakonda rashmika
ವೈರಲ್ ಆಯ್ತು ವಿಜಯ್ ದೇವರಕೊಂಡ – ರಶ್ಮಿಕಾ ವೆಡ್ಡಿಂಗ್ ಕಾರ್ಡ್; ಮದ್ವೆ ಎಲ್ಲಿ – ಯಾವಾಗ?
Cinema Latest Sandalwood South cinema
World Of Nagabandham
`ನಾಗಬಂಧಂ’ ಟೀಸರ್ ರಿಲೀಸ್ ಮಾಡಿದ ಸೂಪರ್‌ ಸ್ಟಾರ್‌ ಮಹೇಶ್ ಬಾಬು
Cinema Latest South cinema
Trisha Nainar Nagenthran
ಈ ರೀತಿಯ ಅಸಹ್ಯ ಹೇಳಿಕೆಯನ್ನು ನಿರೀಕ್ಷಿಸಿರಲಿಲ್ಲ: ನೈನಾರ್ ನಾಗೇಂದ್ರನ್‌ಗೆ ತ್ರಿಶಾ ತಿರುಗೇಟು
Cinema Latest Main Post South cinema
fans flock to rr nagars house for darshans birthday celebration
ದರ್ಶನ್‌ ಬರ್ತ್‌ಡೇ ಸೆಲೆಬ್ರೇಶನ್‌ಗೆ ಮುಗಿಬಿದ್ದ ಫ್ಯಾನ್ಸ್ – ಹೈಡ್ರಾಮಾ ಮಾಡಿದವನಿಗೆ ಪೊಲೀಸರಿಂದ ಕಪಾಳಮೋಕ್ಷ!
Cinema Latest Main Post Sandalwood

You Might Also Like

mahadevappa
Bengaluru City

ಬಾಲವೇ ನಾಯಿಯನ್ನು ಅಲ್ಲಾಡಿಸಿದ್ರೆ? – ನಾಯಕತ್ವ ಚರ್ಚೆಯನ್ನು ನಾಯಿಗೆ ಹೋಲಿಸಿದ ಮಹದೇವಪ್ಪ

Public TV
By Public TV
26 minutes ago
SUBBAREDDY
Bengaluru City

ಬಾಗೇಪಲ್ಲಿ `ಕೈ’ ಶಾಸಕ ಸುಬ್ಬಾರೆಡ್ಡಿ ಶಾಸಕ ಸ್ಥಾನ ಅಸಿಂಧು: ಹೈಕೋರ್ಟ್‌ ಆದೇಶ

Public TV
By Public TV
40 minutes ago
M.K. Faizy
Court

PFI ಅಕ್ರಮ ಹಣ ವರ್ಗಾವಣೆ ಕೇಸ್ – ದೆಹಲಿ ಹೈಕೋರ್ಟ್‌ನಿಂದ ಎಸ್‌ಡಿಪಿಐ ಅಧ್ಯಕ್ಷ ಫೈಜಿಗೆ ಜಾಮೀನು

Public TV
By Public TV
55 minutes ago
davanagere channagiri Mullu Gadduge utsava ramalingeshwara swamiji karnika
Davanagere

ಕಾರ್ಮೋಡ ಕವಿದಿತು, ಅಂತರಂಗದ ಪಕ್ಷಿ ಹಾರಿತು, ಕೆರೆ ಕಟ್ಟೆ ತುಂಬಿ ಹರಿದಾವು ಪರಾಕ್ – ಮುಳ್ಳುಗದ್ದುಗೆ ಮೇಲೆ ಕುಣಿದು ಕಾರ್ಣಿಕ!

Public TV
By Public TV
1 hour ago
Assam Bhupen borah
Latest

ಅಸ್ಸಾಂ ವಿಧಾನಸಭಾ ಚುನಾವಣೆಗೂ ಮುನ್ನ `ಕೈʼಗೆ ಹಿನ್ನಡೆ – ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಪ್ರಮುಖರ ರಾಜೀನಾಮೆ!

Public TV
By Public TV
2 hours ago
Road Accident 2
Bengaluru City

ಬೆಂಗಳೂರಲ್ಲಿ ರಸ್ತೆ ಕಾಮಗಾರಿಗೆ ಪುಟ್ಟ ಕಂದಮ್ಮ ಬಲಿ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?