ಚಿಕ್ಕಬಳ್ಳಾಪುರ: ವಿವಾದಿತ ಅಂಬೇಡ್ಕರ್ ಪ್ರತಿಮೆ ತೆರವು ಖಂಡಿಸಿ ದಲಿತ ಸಂಘಟನೆಗಳು ಕರೆ ನೀಡಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಅಂದಹಾಗೆ ಚಿಂತಾಮಣಿ ನಗರದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಕಳೆದ 8 ತಿಂಗಳ ಹಿಂದೆ ಅಂಬೇಡ್ಕರ್ ಪ್ರತಿಮೆಯನ್ನ ರಾತ್ರೋರಾತ್ರಿ ಸ್ಥಾಪನೆ ಮಾಡಲಾಗಿತ್ತು. ಇದು ಚಿಂತಾಮಣಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ರಾಜಕೀಯ ಪ್ರತಿಷ್ಠೆಯಾಗಿ ವಿವಾದದ ರೂಪ ಪಡೆದುಕೊಂಡಿತ್ತು. ಇದನ್ನೂ ಓದಿ: ಸೂರ್ಯ ನಟನೆಯ ಸಿನಿಮಾದಲ್ಲಿ ವಿಜಯ್ ದೇವರಕೊಂಡ?
ಈ ಪ್ರತಿಮೆಯನ್ನ ತಾಲೂಕು ಆಡಳಿತ ನ್ಯಾಯಾಲಯದ ನಿದೇರ್ಶನದ ಮೇರೆಗೆ ತೆರವು ಮಾಡಿದ್ದು ಇದನ್ನ ಖಂಡಿಸಿ ದಲಿತ ಸಂಘಟನೆಗಳು ಚಿಂತಾಮಣಿ ಬಂದ್‌ಗೆ ಕರೆ ನೀಡಿದ್ದವು. ಬಂದ್ ಹಿನ್ನೆಲೆಯಲ್ಲಿ ದಲಿತ ಸಂಘಟನೆಗಳು ಮುಖಂಡರನ್ನ ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆಯಲಾಗಿತ್ತು. ಇದನ್ನ ಖಂಡಿಸಿ ದಲಿತ ಕಾಲೋನಿ ನಿವಾಸಿಗಳು ಪ್ರತಿಭಟನೆ ನಡೆಸಿ ಪೊಲೀಸರ ವಿರುದ್ಧ ಭಾರೀ ಆಕ್ರೋಶ ಹೊರ ಹಾಕಿದರು. ಇದನ್ನೂ ಓದಿ: ರೆಸಾರ್ಟ್‌ನಲ್ಲಿ ಅಪ್ರಾಪ್ತೆಯ ಮೇಲೆ ಗ್ಯಾಂಗ್ ರೇಪ್ – ಸಿಪಿಐ ಪುತ್ರ ಸೇರಿ ಮೂವರು ಅರೆಸ್ಟ್
ಇದೇ ವೇಳೆ ಪ್ರತಿಭಟನಕಾರರು ಹಾಗೂ ಪೊಲೀಸರ ನಡುವೆ ಭಾರೀ ವಾಗ್ವಾದವೂ ನಡೆಯಿತು. ಇದನ್ನ ಹೊರತುಪಡಿಸಿ ಬಂದ್‌ನಿಂದ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದರೆ, ಬಸ್ ವಾಹನಗಳ ಓಡಾಟ ಎಂದಿನಂತೆ ಇತ್ತು. ಹೀಗಾಗಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಇದನ್ನೂ ಓದಿ: ಸೀಲ್ ಮಾಡಿದ್ದ ಬೋಬಾ ಟೀ ಬಾಟಲ್‌ನಲ್ಲಿ ಗ್ಲಾಸ್ ಪತ್ತೆ – ಐಸ್ ಕ್ಯೂಬ್ ಎಂದು ಕುಡಿದು ಆಸ್ಪತ್ರೆ ಸೇರಿದ ಯುವತಿ!