ಮಡಿಕೇರಿ: ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಮತ್ತು ಪೌರತ್ವ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಶೂಟೌಟ್‍ಗೆ ಕೊಡಗಿನಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಮಂಗಳೂರಿನಲ್ಲಿ ನಡೆದ ಇಬ್ಬರ ಗೋಲಿಬಾರ್ ಗೆ ಇಂದು ಕೂಡ ಮಡಿಕೇರಿಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಲಾಗಿದೆ. ಮಡಿಕೇರಿಯ ಮಾರುಕಟ್ಟೆ, ಇಂದಿರಾಗಾಂಧಿ ವೃತ್ತ ಮತ್ತು ಮಹದೇವ್ ಪೇಟೆ ಸೇರಿದಂತೆ ವಿವಿಧೆಡೆ ಅಂಗಡಿಮುಂಗಟ್ಟುಗಳನ್ನು ಮುಚ್ಚಿ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.
Advertisement
Advertisement
ಇಂದು ಬೆಳಗ್ಗೆ ಆರು ಗಂಟೆಯಿಂದಲೇ ಅಂಗಡಿಗಳನ್ನು ತೆರೆಯದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಜೆ ಆರು ಗಂಟೆಯವರೆಗೆ ಅಂಗಡಿಗಳನ್ನು ಮುಚ್ಚಲಿದ್ದು, ಪರಿಣಾಮ ಮಡಿಕೇರಿಯ ರಸ್ತೆಗಳಲ್ಲಿ ಜನಗಳ ಓಡಾಟ ಕಡಿಮೆಯಾಗಿದೆ.
Advertisement
ಮುಸ್ಲಿಂ ಸಮುದಾಯದ ವ್ಯಾಪಾರಸ್ಥರು ಮಾತ್ರ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದು, ಉಳಿದಂತೆ ಬೇರೆ ಸಮುದಾಯದ ವ್ಯಾಪಾರಸ್ಥರು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಹೀಗಾಗಿ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.