ರಾಹುಲ್ ಎಡವಟ್ಟು ಮಾಡಿದ್ರೂ, ಮನಿಷ್ ಪಾಂಡೆಯಿಂದ ಔಟ್ – ವೈರಲ್ ಕಾಮಿಡಿ ರನೌಟ್ ವಿಡಿಯೋ ನೋಡಿ

Public TV
1 Min Read
run out

ಕೋಲ್ಕತ್ತಾ: ವಿಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಹಾಸ್ಯಾಸ್ಪದ ರನೌಟ್ ದಾಖಲಾಗಿದ್ದು, ಆದರೆ ಈ ವಿಡಿಯೋ ನೋಡಿದ ಅಭಿಮಾನಿಗಳು ಕೆಎಲ್ ರಾಹುಲ್‍ರನ್ನು ಟ್ರೋಲ್ ಮಾಡಿದ್ದಾರೆ.

ಕೋಲ್ಕತ್ತಾ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಟಿ20 ಪಂದ್ಯದಲ್ಲಿ ವಿಂಡೀಸ್ ಆಟಗಾರ ಹೋಪ್ ರನೌಟ್ ಗೆ ಬಲಿಯಾಗಿದ್ದರು. ಪಂದ್ಯದ 4ನೇ ಓವರ್ ಖಲೀಲ್ ಅಹಮದ್ ಬೌಲಿಂಗ್ ಮೊದಲ ಎಸೆತದ ವೇಳೆ ಘಟನೆ ನಡೆದಿತ್ತು. ಈ ವೇಳೆ ಬಾಲ್ ಎದುರಿಸಿದ ಹೋಪ್ ಲೆಗ್ ಸೈಡ್ ನಲ್ಲಿ ಚೆಂಡನ್ನು ಬಾರಿಸಿ ರನ್ ಕಾದಿಯುವ ಯತ್ನ ಮಾಡಿದರು. ಆ ವೇಳೆ ಚೆಂಡು ಕೆಎಲ್ ರಾಹುಲ್ ಕೈ ಸೇರಿತ್ತು. ಈ ಹಂತದಲ್ಲಿ ಮತ್ತೊಂದು ಬದಿಯಲ್ಲಿ ಹೆಟ್ಮೆಯರ್ ರನ್‍ಗಾಗಿ ಓಡಿ ಮತ್ತೆ ವಾಪಸ್ ಆಗಿದ್ದರು.

https://twitter.com/sukhiaatma69/status/1059093478653620230

ರಾಹುಲ್ ಎಡವಟ್ಟು: ಹೋಪ್ ರನ್ ಓಡಲು ಯತ್ನಿಸಿದ್ದನ್ನು ಗಮನಿಸಿದ ಕೆಎಲ್ ರಾಹುಲ್ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್‍ರತ್ತ ಚೆಂಡು ಎಸೆದರು. ಆದರೆ ರಾಹುಲ್ ಎಸೆದ ಚೆಂಡು ಕಾರ್ತಿಕ್ ಕೈಗೆ ಸಿಗದೆ ಹೋಗಿತ್ತು. ಆದರೆ ದಿನೇಶ್ ಹಿಂದೆಯೇ ನಿಂತಿದ್ದ ಮನೀಷ್ ಪಾಂಡೆ ಚೆಂಡನ್ನು ಹಿಡಿದು ರನೌಟ್ ಮಾಡಿದರು. ಇದರೊಂದಿಗೆ ಹೋಪ್ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು.

ಸುಲಭವಾಗಿ ಹೋಪ್ ರನೌಟ್ ಆಗುವ ಅವಕಾಶ ಇದ್ದರೂ ಕ್ಷೇತ್ರ ರಕ್ಷಣೆಯಲ್ಲಿ ರಾಹುಲ್ ಎಡವಿದ್ದರು. ದಿನೇಶ್ ಕಾರ್ತಿಕ್ ಹಿಂದೆ ಪಾಂಡೆ ಇದ್ದ ಕಾರಣ ರನೌಟ್ ಸಾಧ್ಯವಾಯಿತು. ಈ ಕುರಿತಂತೆ ನೆಟ್ಟಿಗರು ಟ್ವಿಟ್ಟರ್‍ನಲ್ಲಿ ರಾಹುಲ್ ರನ್ನು ಟ್ರೋಲ್ ಮಾಡಿ ಗರಂ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article