ಮುಂಬೈ: ಟೀಂ ಇಂಡಿಯಾ ಮಹಿಳಾ ತಂಡದ ಆಟಗಾರ್ತಿ ಮಿಥಾಲಿ ರಾಜ್ ಟಿ20 ಕ್ರಿಕೆಟ್ ರನ್ ಗಳಿಕೆಯಲ್ಲಿ ಟೀಂ ಇಂಡಿಯಾ ಪುರುಷ ತಂಡದ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರನ್ನು ಹಿಂದಿಕ್ಕಿ ವಿಶೇಷ ಸಾಧನೆ ನಿರ್ಮಿಸಿದ್ದಾರೆ.
ಅಂತರಾಷ್ಟ್ರೀಯ ಟಿ20 ಕ್ರಿಕೆಟ್‍ನಲ್ಲಿ ಮಿಥಾಲಿ ರಾಜ್ 85 ಪಂದ್ಯಗಳ 80 ಇನ್ನಿಂಗ್ಸ್ ಗಳಿಂದ 2,283 ರನ್ ಗಳಿಸಿದ್ದು, ಈ ಮೂಲಕ ಟೀಂ ಇಂಡಿಯಾ ಪರ ಟಿ20 ಕ್ರಿಕೆಟ್‍ನಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಈಗಾಗಲೇ ಮಹಿಳಾ ಏಕದಿನ ಕ್ರಿಕೆಟ್‍ನಲ್ಲಿ ಮಿಥಾಲಿ ರಾಜ್ 6,550 ಗಳಿಸಿದ್ದು, ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎನಿಸಿಕೊಂಡಿದ್ದಾರೆ.
Advertisement
India's record run-scorer in T20Is, @M_Raj03, was on top form again with a half-century to help her side into the @WorldT20 semi-finals!
Watch the highlights of her innings, delivered by @oppo #FlashCharge! ⚡️#WT20 #WatchThis pic.twitter.com/A4Tkj9BPJR
— ICC (@ICC) November 16, 2018
Advertisement
ಟೀಂ ಇಂಡಿಯಾ ಪುರುಷರ ತಂಡದಲ್ಲಿ ರೋಹಿತ್ ಶರ್ಮಾ 80 ಇನ್ನಿಂಗ್ಸ್ ಗಳಿಂದ 2,207 ರನ್ ಗಳಿಸಿದ್ದು, ಕೊಹ್ಲಿ 58 ಇನ್ನಿಂಗ್ಸ್ ಗಳಿಂದ 2,102 ರನ್ ಸಿಡಿಸಿದ್ದಾರೆ. ಉಳಿದಂತೆ ಪಟ್ಟಿಯಲ್ಲಿ ಟೀಂ ಇಂಡಿಯಾ ಮಹಿಳಾ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ 1,827 ರನ್, ಸುರೇಶ್ ರೈನಾ 1,605 ರನ್ ಹಾಗೂ ಎಂಎಸ್ ಧೋನಿ 1,487 ರನ್ ಗಳಿಸಿದ್ದಾರೆ.
Advertisement
ಐಸಿಸಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಮಿಥಾಲಿ ರಾಜ್ ಅವರ ಸಾಧನೆ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿದೆ. ಸದ್ಯ ಟೀಂ ಇಂಡಿಯಾ ಮಹಿಳಾ ತಂಡ ಐಸಿಸಿ ವಿಶ್ವಕಪ್‍ನಲ್ಲಿ ಭಾಗವಹಿಸಿದ್ದು, ಟೂರ್ನಿಯಲ್ಲಿ ಸತತವಾಗಿ 3ನೇ ಬಾರಿಗೆ ಸೆಮಿ ಫೈನಲ್ ಪ್ರವೇಶ ಮಾಡಿದೆ. ಗುರುವಾರ ಐರ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಮಿಥಾಲಿ ರಾಜ್ 51 ರನ್ ಸಿಡಿಸಿ ಮಿಂಚಿದ್ದರು. ಗಯಾನದಲ್ಲಿ ನಡೆದ ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಟೀಂ ಇಂಡಿಯಾ 52 ರನ್ ಜಯ ದಾಖಲಿಸಿತ್ತು.
Advertisement
Mithali Raj tops an illustrious list of India's most prolific T20I run-scorers ????????????
1️⃣ @M_Raj03
2️⃣ @ImRo45
3️⃣ @imVkohli
4️⃣ @ImHarmanpreet
5️⃣ @ImRaina
6️⃣ @msdhoni pic.twitter.com/SmQt9LjLzu
— ICC (@ICC) November 15, 2018
India qualify for the @WorldT20 semi-finals! ????????
Ireland are beaten by 52 runs – India will battle Australia for the top spot in Group B on Saturday!#INDvIRE scorecard and highlights ➡️ https://t.co/9yRD2FnjHq#WT20 #WatchThis pic.twitter.com/uIIdPCeqZT
— ICC (@ICC) November 15, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews