ನವದೆಹಲಿ: 2021 ಮಹಿಳಾ ವಿಶ್ವಕಪ್ ಕ್ರಿಕೆಟ್ ಸರಣಿಯಲ್ಲಿ ಭಾಗವಹಿಸುವುದಕ್ಕೆ ಭಾರತದ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.
ಮುಂದಿನ ವಿಶ್ವಕಪ್ ಆಡುವುದರ ಬಗ್ಗೆ ಸದ್ಯ ನಾನು ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ, ಆದರೆ ಮುಂದಿನ ಮೂರು ವರ್ಷಗಳು ನಿರಂತವಾಗಿ ಕ್ರಿಕೆಟ್ ಆಡಿದರೆ ಮಾತ್ರ ನನ್ನ ವೃತ್ತಿ ಜೀವನದಲ್ಲಿ ನಾಲ್ಕನೇ ವಿಶ್ವಕಪ್ ಸರಣಿಯನ್ನು ಆಡಲು ಸಾಧ್ಯ ಎಂದು ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ 34 ವರ್ಷದ ಮಿಥಾಲಿ ರಾಜ್ ಹೇಳಿದ್ದಾರೆ.
Advertisement
Advertisement
ಕಳೆದ ಜೂನ್-ಜುಲೈನಲ್ಲಿ ನಡೆದ ವಿಶ್ವಕಪ್ ಸರಣಿಯಲ್ಲಿ ಭಾಗವಹಿಸುವ ಮುನ್ನ ತಮ್ಮ ನಿವೃತ್ತಿಯ ಕುರಿತು ಹೇಳಿಕೆ ನೀಡಿದ್ದ ಮಿಥಾಲಿ ರಾಜ್, ಇದೇ ನನ್ನ ಕೊನೆಯ ವಿಶ್ವಕಪ್ ಸರಣಿ ಎಂದು ತಿಳಿಸಿದ್ದರು.
Advertisement
ವಿಶ್ವ ಮಹಿಳಾ ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ರನ್‍ಗಳನ್ನು ಗಳಿಸಿರುವ ದಾಖಲೆಯನ್ನು ಹೊಂದಿರುವ ಅವರು, ತಮ್ಮ ಮುಂದಿನ ಕ್ರಿಕೆಟ್ ವೃತ್ತಿ ಜೀವನದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ. ಅದರಲ್ಲಿಯು ಆಟಗಾರರಿಗೆ ತಮ್ಮ ಫಾರ್ಮ್ ಕಾಪಾಡಿಕೊಳ್ಳುವುದು ಅತ್ಯಂತ ಪ್ರಮುಖವಾಗಿದ್ದು, ಈ ಕುರಿತು ಹೆಚ್ಚಿನ ಗಮನ ಹರಿಸಬೇಕಿದೆ. ಈ ಮಧ್ಯೆ 2018 ರ ಟಿ-20 ವಿಶ್ವಕಪ್ ಸೇರಿದಂತೆ ಹಲವು ಸರಣಿಗಳಲ್ಲಿ ಭಾಗವಹಿಸಬೇಕಿದೆ ಎಂದು ಹೇಳಿದರು.
Advertisement
ಪ್ರಸ್ತುತ ಭಾರತ ಮಹಿಳಾ ಕ್ರಿಕೆಟ್ ತಂಡವು ಮುಂದಿನ ಫೆಬ್ರವರಿಯವರೆಗೆ ಯಾವುದೇ ಕ್ರಿಕೆಟ್ ಸರಣಿಗಳನ್ನು ಹೊಂದಿಲ್ಲ. ಕಳೆದ ಬಾರಿಯ ವಿಶ್ವಕಪ್‍ನಲ್ಲಿ ಮಿಥಾಲಿ ರಾಜ್ ಸೇರಿದಂತೆ ಹಲವು ಆಟಗಾರ್ತಿಯರು ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದು, ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು.
ಅಭಿಮಾನಿಗಳಿಂದ ಬಂದ ಪ್ರಶಂಸೆಯ ಕುರಿತು ಹರ್ಷವನ್ನು ವ್ಯಕ್ತಪಡಿಸಿದ ಅವರು ಪುರುಷ ಕ್ರಿಕೆಟರ್‍ಗಳೊಂದಿಗೆ ಹೊಲಿಕೆ ಮಾಡುತ್ತಿದ್ದಾರೆ. ಆದರೆ ಮಹಿಳಾ ಕ್ರಿಕೆಟರ್‍ಗಳಿಗೆ ಹೆಚ್ಚಿನ ತರಬೇತಿ ನೀಡುವುದು ಮುಖ್ಯವಾಗುತ್ತದೆ. ಜನರು ಹೆಚ್ಚು ಮಹಿಳಾ ಕ್ರಿಕೆಟ್ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಈ ಮಧ್ಯೆ ಡಿಸೆಂಬರ್‍ನಲ್ಲಿ ನಡೆಯುವ ಐಸಿಸಿ ಚಾಂಪಿಯನ್ ಶಿಪ್‍ಗೆ ತಂಡವು ಸಿದ್ಧವಾಗಬೇಕಾಗಿದ್ದು, ಈ ಸರಣಿಯಲ್ಲಿ ಮೊದಲ ಪಂದ್ಯವನ್ನು ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದ್ದು, ನಂತರ ಫೆಬ್ರವರಿ 5 ರಿಂದ 10 ರವರೆಗೆ ಮೂರು ಪಂದ್ಯಗಳ ಸರಣಿಯನ್ನು ಇದೇ ತಂಡದ ವಿರುದ್ಧ ಆಡಲಿದ್ದಾರೆ.
ಮಿಥಾಲಿ ರಾಜ್ ಬಿಸಿಸಿಐನ ಮಹಿಳಾ ಕ್ರಿಕೆಟ್ ನ ವಿಶೇಷ ಸಮಿತಿ ಸದಸ್ಯರು ಆಗಿದ್ದು. ಕೆಲ ದಿನಗಳ ಹಿಂದೆ ದೇಶೀಯ ಕ್ರಿಕೆಟ್‍ನಲ್ಲಿ ಹಲವು ಬದಲಾವಣೆಯನ್ನು ಮಾಡಿದ್ದರು. ಯುವ ಆಟಗಾರ್ತಿಯರಿಗೆ ಹೆಚ್ಚಿನ ಬೆಂಬಲ ಹಾಗು ತರಬೇತಿಯನ್ನು ನೀಡುವುದರಿಂದ ರಾಷ್ಟ್ರೀಯ ತಂಡದಲ್ಲಿ ಆಡಲು ಅವಕಾಶವನ್ನು ಕಲ್ಪಿಸಬಹುದು. ಅಲ್ಲದೇ 20-25 ಮಹಿಳಾ ಕ್ರಿಕೆಟರ್ ಗಳಿಗೆ ಭಾರತದ `ಎ’ ತಂಡದಲ್ಲಿ ಆಡಲು ಅವಕಾಶವನ್ನು ನೀಡಬೇಕು. ಇದರಿಂದಾಗಿ ಆರೋಗ್ಯಕರ ಸ್ಪರ್ಧೆ ಸೃಷ್ಟಿಯಾಗಿ ಮುಂದಿನ ವಿಶ್ವಕಪ್‍ಗೆ ಸಿದ್ಧತೆಯನ್ನು ನಡೆಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು.
Captain @M_Raj03 speaks about the importance of having an 'A' tour for the Women's team pic.twitter.com/jNVr1Hmk89
— BCCI Women (@BCCIWomen) October 9, 2017
https://www.instagram.com/p/BZb8o6LAW8e/?
https://www.instagram.com/p/BZT7V5tAGij/?
https://www.instagram.com/p/BYfVZhjA2G0/?
https://www.instagram.com/p/BXk5TjUAKIi/?