ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಇತಿಹಾಸದಲ್ಲೇ ದಾಖಲೆ ಬರೆದ ಆಸ್ಟ್ರೇಲಿಯಾ ತಂಡದ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ (Mitchell Starc) 2024ರ ಐಪಿಎಲ್ ಟೂರ್ನಿಯನ್ನೇ ಎದುರು ನೋಡುತ್ತಿದ್ದಾರಂತೆ. ಈ ವಿಷಯವನ್ನು ಸಂದರ್ಶನವೊಂದರಲ್ಲಿ ತಾವೇ ಖುದ್ದಾಗಿ ಹೇಳಿಕೊಂಡಿದ್ದಾರೆ. ಈ ವೇಳೆ ಆರ್‌ಸಿಬಿ ತಂಡದಲ್ಲಿದ್ದಾಗ ವಿರಾಟ್ ಕೊಹ್ಲಿ ಜೊತೆಗಿನ ನೆನಪುಗಳನ್ನ ಹಂಚಿಕೊಂಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಸ್ಟಾರ್ಕ್, ನಾನು RCB ಪ್ರವೇಶಿಸಿದಾಗ ಕೊಹ್ಲಿ (Virat Kohli) ಟೀಂ ಕ್ಯಾಪ್ಟನ್ ಆಗಿದ್ದರು. ಆಗಲೇ ನಾನು ಅವರನ್ನು ಸರಿಯಾಗಿ ತಿಳಿದುಕೊಂಡೆ. ಮೈದಾನದ ಹೊರಗೆ ಮತ್ತು ಮೈದಾನದ ಆಚೆ ವಿಭಿನ್ನ ವ್ಯಕ್ತಿತ್ವ ಅವರದ್ದು. ಈಗಲೂ ಅವರನ್ನು ಹೆಚ್ಚು ನೆನಪಿಸಿಕೊಳ್ತೇನೆ ಎಂದಿದ್ದಾರೆ. ಇದನ್ನೂ ಓದಿ: ವಿಮಾನದಲ್ಲಿ ನೀರು ಕುಡಿದು ಅಸ್ವಸ್ಥ; ಮಯಾಂಕ್ ಅಗರ್ವಾಲ್ ಆಸ್ಪತ್ರೆಗೆ ದಾಖಲು
Advertisement
Advertisement
2022ರ ಐಪಿಎಲ್ ಟೂರ್ನಿಗೆ ದುಬಾರಿ ಬೆಲೆಗೆ ಬಿಕರಿಯಾಗಿದ್ದ ಕ್ರಿಸ್‌ಮೋರಿಸ್ ತನಗಿಂತಲೂ ಹೆಚ್ಚು ಬೆಲೆಗೆ ಖರೀದಿಯಾಗಿರುವ ಬಗ್ಗೆ ಮಾತನಾಡಿದ್ದಾರೆ. ಸ್ಟಾರ್ಕ್, ತನ್ನ ಸಾಮರ್ಥ್ಯದಿಂದ ಇದನ್ನ ಸಾಧ್ಯವಾಗಿಸಿಕೊಂಡಿದ್ದಾರೆ. ಇತರ ಕ್ರೀಡೆಗಳೊಂದಿಗೆ ಕ್ರಿಕೆಟ್‌ನಲ್ಲೂ ವಿಶ್ವದ ಅತ್ಯುತ್ತಮ ಆಟಗಾರರಿಗೆ ಹೆಚ್ಚಿನ ಸಂಭಾವನೆ ನೀಡುತ್ತಿರುವುದು ಅದ್ಭುತವಾಗಿದೆ. ಇದು ಸಾಧನೆಯಾದರೂ ಹೆಚ್ಚುವರಿ ಒತ್ತಡ ತರುತ್ತದೆ. ಆದ್ರೆ ಮಿಚೆಲ್ ಸ್ಟಾರ್ಕ್ ಮತ್ತು ಕಮ್ಮಿನ್ಸ್ ಆ ಒತ್ತಡ ನಿಭಾಯಿಸಬಲ್ಲರು. ಅದಕ್ಕಾಗಿಯೇ ಅವರನ್ನು ಹೆಚ್ಚಿನ ಹಣ ನೀಡಿ ಖರೀದಿಸಲಾಗಿದೆ ಎಂದು ಮೋರಿಸ್ ತಿಳಿಸಿದ್ದಾರೆ.
Advertisement
Advertisement
ಆಸೀಸ್ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ 2015ರಲ್ಲಿ ಐಪಿಎಲ್‌ನಲ್ಲಿ ಆಡಿದ್ದರು. ಆರ್‌ಸಿಬಿ ತಂಡದಲ್ಲಿ ಮಿಂಚಿದ್ದರು. ಆ ನಂತರ ಐಪಿಎಲ್‌ನಿಂದ ದೂರ ಉಳಿದಿದ್ದರು. 2023ರಲ್ಲಿ ಆಶಸ್ ಟೂರ್ನಿಯಿಂದಾಗಿ ಐಪಿಎಲ್‌ನಿಂದ ಹೊರಗುಳಿದ್ದರು. ಇದನ್ನೂ ಓದಿ: India vs England, 1st Test: 7 ವಿಕೆಟ್ ಕಬಳಿಸಿದ ಟಾಮ್ ಹಾರ್ಟ್ಲಿ – ಭಾರತದ ವಿರುದ್ಧ ಇಂಗ್ಲೆಂಡ್‌ಗೆ 28 ರನ್‌ಗಳ ಜಯ
2024ರ ಐಪಿಎಲ್ ಟೂರ್ನಿಗೆ ಕಳೆದ ಡಿಸೆಂಬರ್ 19ರಂದು ದುಬೈನಲ್ಲಿ ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರ ಮಿಚೆಲ್ ಸ್ಟಾರ್ಕ್ ಬರೋಬ್ಬರಿ 24.75 ಕೋಟಿ ರೂ.ಗೆ ಬಿಕರಿಯಾಗಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ದುಬಾರಿ ಮೊತ್ತಕ್ಕೆ ಬಿಡ್ ಆದ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
2023ರ ಐಪಿಎಲ್ ಮಿನಿ ಹರಾಜಿನಲ್ಲಿ ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಸ್ಯಾಮ್ ಕರ್ರನ್ 18.50 ಕೋಟಿ ರೂ.ಗೆ ಮಾರಾಟವಾಗಿದ್ದು ಇತಿಹಾಸವಾಗಿತ್ತು. ಆಸೀಸ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ 20.50 ಕೋಟಿ ರೂ.ಗೆ ಮಾರಾಟವಾಗಿ ಇತಿಹಾಸ ನಿರ್ಮಿಸಲು ಸಜ್ಜಾಗಿದ್ದರು. ಆದ್ರೆ 2023ರ ಏಕದಿನ ವಿಶ್ವಕಪ್ ವಿಜೇತ ತಂಡದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಮಿಚೆಲ್ ಸ್ಟಾರ್ಕ್ 24.75 ಕೋಟಿ ರೂ.ಗೆ ಕೋಲ್ಕತ್ತಾ ನೈಟ್‌ರೈಡರ್ಸ್ (ಕೆಕೆಆರ್) ತಂಡದ ಪಾಲಾಗಿ ದಾಖಲೆ ಬರೆದರು. ಇದನ್ನೂ ಓದಿ: Australian Open: 43ನೇ ವಯಸ್ಸಿನಲ್ಲಿ ಆಸ್ಟ್ರೇಲಿಯಾ ಓಪನ್ ಗೆದ್ದ ಕನ್ನಡಿಗ ರೋಹನ್ ಬೋಪಣ್ಣ