ಮಡಿಕೇರಿ: ಪರಿಹಾರ ಕೇಂದ್ರಗಳಲ್ಲಿ ಆಹಾರ ಹಾಗೂ ಇತರೆ ಪದಾರ್ಥಗಳು ದುರಪಯೋಗವಾಗುತ್ತಿರುವುದು ಸತ್ಯವೆಂದು ಜಿಲ್ಲಾ ಉಸ್ತುವಾರಿ ಹಾಗೂ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹೇಳಿಕೆ ನೀಡಿದ್ದಾರೆ.
ರಾಜ್ಯದ ಜನತೆ ಸಂತ್ರಸ್ತರಿಗಾಗಿ ಕಳುಹಿಸಿದ್ದ ಅಪಾರ ಪ್ರಮಾಣದ ವಸ್ತುಗಳನ್ನು ದುರುಪಯೋಗವಾಗುತ್ತಿರುವ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಬೇಕಾದವರಿಗೆ ಪದಾರ್ಥಗಳನ್ನು ಹಂಚುತ್ತಿದ್ದಾರೆ. ಪರಿಹಾರ ಕೇಂದ್ರಗಳಲ್ಲಿ ಆಹಾರ ಪದಾರ್ಥ ಹಾಗೂ ಇತರೆ ವಸ್ತುಗಳು ದುರಪಯೋಗವಾಗುತ್ತಿರುವುದು ಸತ್ಯವೆಂದು ಮಾಹಿತಿ ನೀಡಿದ್ದಾರೆ.
Advertisement
Advertisement
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಜೊತೆ ಈಗಾಗಲೇ ಚರ್ಚಿಸಿದ್ದು, ಸಂತ್ರಸ್ತರಿಗೆ ತಲುಪಬೇಕಾದ ಯಾವುದೇ ವಸ್ತುಗಳು ದುರಪಯೋಗವಾಗದಂತೆ ನೋಡಿಕೊಳ್ಳಬೇಕೆಂದು ಸೂಚಿಸಿದ್ದೇನೆ. ಅಲ್ಲದೇ ಈ ಬಗ್ಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಹೇಳಿದ್ದೇನೆ. ರಾಜ್ಯದ ಜನತೆ ತಮ್ಮ ಸಹಾಯಹಸ್ತ ಚಾಚಿ ಸಂತ್ರಸ್ತರಿಗೆ ಕಳುಹಿಸಿರುವ ಪರಿಹಾರ ಸಾಮಗ್ರಿಗಳು ಉಳ್ಳವರ ಪಾಲಾಗದಂತೆ ಎಚ್ಚರವಹಿಸುತ್ತೇನೆಂದು ಭರವಸೆ ನೀಡಿದ್ದಾರೆ.
Advertisement
ಪ್ರವಾಹದಿಂದಾಗಿ ಜಿಲ್ಲೆ ಸಂಪೂರ್ಣವಾಗಿ ನಾಶಹೊಂದಿದ್ದು, ಕೊಡಗನ್ನು ಪುನಃ ಸಹಜ ಸ್ಥಿತಿಗೆ ಮರಳಿಸಲು ಯತ್ನಿಸುತ್ತೇವೆ. ಇದಕ್ಕಾಗಿ ಸುಮಾರು 2 ಸಾವಿರ ಕೋಟಿ ರೂಪಾಯಿ ಖರ್ಚಾದರೂ ತೊಂದರೆಯಿಲ್ಲ. ನಾನು ಸಹ ನನ್ನ ಒಂದು ತಿಂಗಳ ಸಂಬಳವನ್ನು ಮಡಿಕೇರಿ ನಿರಾಶ್ರಿರಿಗಾಗಿ ನೀಡಿದ್ದೇನೆಂದು ತಿಳಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv