– ಯುವತಿ 2 ವರ್ಷ ದೊಡ್ಡವಳಾಗಿದ್ದರೂ ಮದ್ವೆಗೆ ನಿರ್ಧಾರ; ಅಷ್ಟರಲ್ಲೇ ಮೂಡಿತ್ತು ಅನುಮಾನ
ಹಾಸನ: ಪ್ರಿಯಕರನ (Lover) ಕಿರುಕುಳಕ್ಕೆ ಬೇಸತ್ತು ಪ್ರೇಯಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಘಟನೆ ನಡೆದು ವಾರ ಕಳೆದರೂ ಆರೋಪಿಯನ್ನ ಪೊಲೀಸರು ಬಂಧಿಸಿಲ್ಲ ಎಂದು ಹೆತ್ತವರ ಕಣ್ಣೀರಿಡುತ್ತಿರುವ ಘಟನೆ ಹಾಸನ (Hassan) ತಾಲ್ಲೂಕಿನ, ಜಾಗರವಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಜಯರಾಮ್‌ನಾಯ್ಕ್ ಹಾಗೂ ಶೋಭಾ ದಂಪತಿ ಪುತ್ರಿ ಪ್ರೀಯಾಂಕಾ (21) ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಕೆಲಸ ಮಾಡುತ್ತಿದ್ದು ನಾಗಸಂದ್ರದ ಶಿವಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಪ್ರಿಯಾಂಕಾಗೆ ಆಲೂರು ತಾಲ್ಲೂಕು ಮೂಲದ ಸುಮಂತ್ ಪರಿಚಯವಾಗಿ ಕಳೆದ ಮೂರು ತಿಂಗಳಿನಿಂದ ಪರಸ್ಪರ ಪ್ರೀತಿಸುತ್ತಿದ್ದರು. ತಾನು ಪ್ರೀತಿಸುತ್ತಿದ್ದ ಯುವತಿ ವಯಸ್ಸಿನಲ್ಲಿ ತನಗಿಂತ ಎರಡು ವರ್ಷ ದೊಡ್ಡವಳಾಗಿದ್ದರೂ ಮದುವೆಯಾಗಲು ನಿಶ್ವಯಿಸಿದ್ದರು. ಇದನ್ನೂ ಓದಿ: ಸಕ್ಕರೆ ದರ ಏರಿಕೆಗೆ ಕೇಂದ್ರದ ಮೇಲೆ ಒತ್ತಡ ತರಬೇಕು – ಸಕ್ಕರೆ ಕಾರ್ಖಾನೆ ಮಾಲೀಕರ ಆಗ್ರಹ!
ಆದ್ರೆ ಯುವಕ ತನ್ನ ಪ್ರೇಯಸಿ ಮೇಲೆ ಅನುಮಾನಗೊಂಡು ಕಿರುಕುಳ ನೀಡುತ್ತಿದ್ದ. ನೀನು ನನಗೆ ಬೇಡ ಆತ್ಮಹತ್ಯೆ ಮಾಡಿಕೋ ಎಂದು ಪದೇ ಪದೇ ಮಾನಸಿಕ ಹಿಂಸೆ ನೀಡುತ್ತಿದ್ದ. ಇದರಿಂದ ಬೇಸತ್ತ ಪ್ರಿಯಾಂಕಾ ತಾನು ವಾಸವಿದ್ದ ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಳು. ಆತ್ಮಹತ್ಯೆ ಮಾಡಿಕೊಳ್ಳುವ ಕೊನೇ ಕ್ಷಣದಲ್ಲಿ ಸುಮಂತ್ ಒತ್ತಡ ಹಾಕಿರುವ ಬಗ್ಗೆ ತನ್ನ ಮೊಬೈಲ್‌ನಲ್ಲಿ ಆಡಿಯೋ ರೆಕಾರ್ಡ್ ಮಾಡಿದ್ದು ಮೊಬೈಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಬೆಂಗಳೂರು | ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಮೋಹನ್ ಭಾಗವತ್ ಭೇಟಿ – ಪೂಜೆ, ಪ್ರಾರ್ಥನೆ ಸಲ್ಲಿಕೆ
ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳಲು ಸುಮಂತ್ ಕಿರುಕುಳ ಹಾಗೂ ಪ್ರಚೋದನೆಯೇ ಕಾರಣವಾಗಿದ್ದು ಆತನ ವಿರುದ್ಧ ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಸ್ ದಾಖಲಾಗಿದ್ದೂ ಆರೋಪಿಯನ್ನ ಪೊಲೀಸರು ಬಂಧಿಸಿಲ್ಲ. ಹೀಗಾಗಿ ಕೂಡಲೇ ಆರೋಪಿಯನ್ನ ಬಂಧಿಸದಿದ್ದರೆ ಠಾಣೆ ಎದುರೇ ಅನಿರ್ಧಿಷ್ಟಾವಧಿ ಧರಣಿ ನಡೆಸುವುದಾಗಿ ಪ್ರಿಯಾಂಕಾ ಪೋಷಕರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಕಾವ್ಯಗೋಸ್ಕರ ನಾಮಿನೇಟ್ ಆಗಿ ತ್ಯಾಗಮಯಿ ಎನಿಸಿಕೊಂಡ ಗಿಲ್ಲಿ




