ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವಾರಾಂತ್ಯ ಬಂದರೇ ಸಾಕು ಒಂದಿಲ್ಲೊಂದು ಮನರಂಜನಾ ಕಾರ್ಯಕ್ರಮಗಳ ಆಯೋಜನೆ ಮಾಡುವ ಮೂಲಕ ನೋಡುಗರನ್ನು ರಂಜಿಸುವ ಕಾರ್ಯ ನಡೆಯುತ್ತಲೇ ಇರುತ್ತದೆ.
ಈ ಬಾರಿಯ ವೀಕೆಂಡ್‍ನಲ್ಲಿ ನಗರದ ಪ್ರತಿಷ್ಠಿತ ಹೊಟೇಲೊಂದರಲ್ಲಿ ಆಯೋಜಿಸಿದ್ದ ಮಿಸ್ಟರ್ ಆ್ಯಂಡ್ ಮಿಸೆಸ್ ಐಕಾನ್ ಇಂಡಿಯಾ ಫ್ಯಾಷನ್ ಶೋ ಎಲ್ಲರ ಗಮನ ಸೆಳೆಯಿತು.
ಜಗಮಗಿಸುವ ಲೈಟ್‍ಗಳ ನಡುವೆ ಮಾದಕ ಕಣ್ಣೋಟದ ಸುಂದರಿಯರು ರಾಕಿಂಗ್ ಮ್ಯೂಸಿಕ್ ಗೆ ಕ್ಯಾಟ್ ವಾಕ್ ಮಾಡುವ ಮೂಲಕ ಎಲ್ಲರನ್ನೂ ಒಂದು ಕ್ಷಣ ಮಾಯಾ ಪ್ರಪಂಚಕ್ಕೆ ಕರೆದುಕೊಂಡು ಹೋದರು. ಇಂಥದೊಂದು ಮನಮೋಹಕ ಫ್ಯಾಶನ್ ಶೋ ಅನಾವರಣಗೊಂಡಿದ್ದು ಬೆಂಗಳೂರಿನ `ದಿ ಕ್ಯಾಪಿಟಲ್ ಹೋಟೆಲ್’ ನಲ್ಲಿ.
ಖಾಸಗಿ ಸಂಸ್ಥೆಯೊಂದು ಆಯೋಜನೆ ಮಾಡಿದ್ದ ಫ್ಯಾಷನ್ ಶೋವನ್ನು ಖ್ಯಾತ ನೃತ್ಯ ನಿರ್ದೇಶಕ ಡ್ಯಾನಿ ಹಾಗೂ ಸಟಿ ಸನಿಹಾ ಯಾದವ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಉದ್ಘಾಟನೆ ಮಾಡಿದರು. ಇನ್ನು ಈ ಫ್ಯಾಷನ್ ಶೋ ಕಾರ್ಯಕ್ರಮದಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಕೇರಳ ಮೂಲದ ನೂರಕ್ಕೂ ಹೆಚ್ಚು ಮಾಡೆಲ್ ಗಳು ಭಾಗವಹಿಸಿ, ತಮ್ಮ ಪ್ರತಿಭೆಯನ್ನು ರ್ಯಾಪ್ ವಾಕ್ ಮಾಡುವ ಮೂಲಕ ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರೇಕ್ಷಕರನ್ನು ಹುರಿದುಂಬಿಸುವ ಸಲುವಾಗಿ ಬೆಲ್ಲಿ ಡ್ಯಾನ್ಸ್ ಏರ್ಪಡಿಸಲಾಗಿದ್ದು ಮತ್ತೊಂದು ವಿಶೇಷ. ಬೆಲ್ಲಿ ಡ್ಯಾನ್ಸ್ ಕಂಡ ಫ್ಯಾಷನ್ ಪ್ರಿಯರು ಮಾಗಿ ಚಳಿಯಲ್ಲೂ ಮೈ ಬಿಸಿಯಾದಂತೆ ಭಾಸವಾದ್ರು. ಇಷ್ಟೇ ಅಲ್ಲದೇ ಕೋರಿಯೊಗ್ರಾಫರ್ ಡ್ಯಾನಿ ಮಾಡಲ್ ಗಳ ಜೊತೆ ಹಿಂದಿ ಹಾಡುಗಳಿಗೆ ಡ್ಯಾನ್ಸ್ ಮಾಡುವ ಮೂಲಕ ಪ್ರೇಕ್ಷಕರನ್ನು ಮತ್ತಷ್ಟು ಮನಸೂರೆಗೊಳಿಸಿದರು. ಒಟ್ಟಿನಲ್ಲಿ ವೀಕೆಂಡ್ ಮಸ್ತಿಯಲ್ಲಿದ್ದ ಬೆಂಗಳೂರಿನ ಜನರಿಗೆ ಕಲರ್ ಫುಲ್ ರ್ಯಾಪ್ ವಾಕ್ ವಿಶೇಷ ಮನರಂಜನೆಯನ್ನು ನೀಡಿತು.