ವಾಷಿಂಗ್ಟನ್: ಟಿಕ್‍ಟಾಕ್ ನಲ್ಲಿ ರಕ್ಷಣೆಗಾಗಿ ಬಳಸುತ್ತಿದ್ದ ಕೈ ಸನ್ನೆಯನ್ನು ಬಳಸಿ ಬಾಲಕಿ ತನ್ನ ಜೀವವನ್ನು ಉಳಿಸಿಕೊಂಡ ಘಟನೆ ಫ್ರಾಂಕ್‍ಫರ್ಟ್‍ನ ಕೆಂಟುಕಿನಲ್ಲಿ ನಡೆದಿದೆ.
ಗುರುವಾರ ಕೆಂಟುಕಿಯಲ್ಲಿ 16 ವರ್ಷದ ಬಾಲಕಿಯು ಹಿರಿಯ ವ್ಯಕ್ತಿಯ ಜೊತೆ ಕಾರಿನಲ್ಲಿ ಹೋಗುತ್ತಿದ್ದು, ಟಿಕ್‍ಟಾಕ್‍ನಲ್ಲಿ ಕಲಿತ ಕೈ ಸನ್ನೆಯನ್ನು ಬಳಸಿಕೊಂಡು ಸಹಾಯಕ್ಕಾಗಿ ಸೂಚಿಸಿದ್ದಳು. ಅದನ್ನು ಗಮನಿಸಿದ ಯುವಕನೊಬ್ಬ ಆಕೆಯನ್ನು ಕಾಪಾಡಿದ್ದಾನೆ. ಇದನ್ನೂ ಓದಿ: ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ 10 ಕೋಟಿ ಅನುದಾನ ಬಿಡುಗಡೆ
Advertisement
ಈ ಕುರಿತು ಮಾತನಾಡಿದ ಅಧಿಕಾರಿಗಳು, ಯುವಕನಿಗೆ ಬಾಲಕಿಯ ಸಿಗ್ನಲ್ ಅರ್ಥವಾದ ತಕ್ಷಣ, ಅವರು 911ಗೆ ಕರೆ ಮಾಡಿದ್ದಾರೆ. ಈ ಹಿನ್ನೆಲೆ ಪೊಲೀಸರು ಬಾಲಕಿಯನ್ನು ಅಪಹರಿಸುತ್ತಿದ್ದ 61 ವರ್ಷದ ಜೇಮ್ಸ್ ಹರ್ಬರ್ಟ್ ಬ್ರಿಕ್ ನನ್ನು ಕೆಂಟುಕಿಯಲ್ಲಿ ಬಂಧಿಸಿದ್ದಾರೆ ಎಂದು ತಿಳಿಸಿದರು. ಬಾಲಕಿ ಪೋಷಕರು ಉತ್ತರ ಕೆರೊಲಿನಾದಲ್ಲಿ ತನ್ನ ಮಗಳು ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದರು.
Advertisement
Advertisement
ಬಾಲಕಿ ಚಾಲಕ ಜೇಮ್ಸ್ ನ ಪರಿಚಯವಾದ ಆರಂಭದಲ್ಲಿ ಸ್ವ-ಇಚ್ಛೆಯಿಂದಲ್ಲೇ ಆತನ ಜೊತೆ ಹೋಗಿದ್ದಾಳೆ. ಆದರೆ ಕೆಲವು ಸಮಯದ ನಂತರ ಆತನ ಉದ್ದೇಶ ಸರಿ ಇಲ್ಲ ಎಂದು ಅರಿತ ಆಕೆ ಭಯಗೊಂಡಿದ್ದು, ಅಲ್ಲಿಂದ ಓಡಲು ಯತ್ನಿಸಿದ್ದಾಳೆ. ಆದರೆ ಅದು ಸಾಧ್ಯವಾಗಿಲ್ಲ. ಜೇಮ್ಸ್ ಬಾಲಕಿಯನ್ನು ಉತ್ತರ ಕೆರೊಲಿನಾ, ಟೆನ್ನೆಸ್ಸೀ, ಕೆಂಟುಕಿ ಮತ್ತು ಓಹಿಯೋಗಳಲ್ಲಿ ಸುತ್ತಾಡಿಸಿದ್ದು, ಇಬ್ಬರು ಅಲ್ಲಿಂದ ಸಂಬಂಧಿಕರೊಂದಿಗೆ ಉಳಿದುಕೊಂಡಿದ್ದಾರೆ. ಆದರೆ ಮೋಸ ಮಾಡಿ ಈಕೆಯನ್ನು ಕರೆದುಕೊಂಡು ಬಂದಿದ್ದಾನೆ ಎಂದು ಸಂಬಂಧಿಕರಿಗೆ ತಿಳಿದ ತಕ್ಷಣ ಅಲ್ಲಿಂದ ಇಬ್ಬರು ಹೊರಟು ಹೋಗಿದ್ದಾರೆ. ನಂತರ ಬಾಲಕಿ ಕೆಂಟುಕಿನಲ್ಲಿ ಹ್ಯಾಂಡ್ ಸಿಗ್ನಲ್ ಬಳಸಿ ತನ್ನನ್ನು ರಕ್ಷಿಸಿಕೊಂಡಿದ್ದಾಳೆ. ಇದನ್ನೂ ಓದಿ: ಭಾರತ ಆಯೋಜಿಸಿದ್ದ ಅಫ್ಘಾನಿಸ್ತಾನದ ಸಭೆಯಿಂದ ಹೊರಗುಳಿದ ಪಾಕಿಸ್ತಾನ, ಚೀನಾ
Advertisement
It’s been a year since we launched the #SignalForHelp with @JuniperParkTBWA.
It’s gone viral on TikTok, been reimagined by talented artists, and been shared by organizations around the world.
Thank you for joining the conversation on #GBV and #COVID19: https://t.co/EaqYCB1lkP pic.twitter.com/xKYjOZ2A99
— Canadian Women’s Foundation (@cdnwomenfdn) April 15, 2021
ಈ ಹ್ಯಾಂಡ್ ಸಿಗ್ನಲ್ ಅನ್ನು ಕೆನಡಾದ ಮಹಿಳಾ ಫೌಂಡೇಶನ್ ಕಳೆದ ವರ್ಷ ಮೊದಲು ಬಾರಿಗೆ ಪರಿಚಯಿಸಿತ್ತು. ನೀವು ಬೇರೆಯವರ ಬಳಿ ಸಹಾಯ ಕೇಳಬೇಕು ಎಂದರೆ, ನಿಮ್ಮ ಕೈಯನ್ನು ಹಿಡಿದಿಟ್ಟುಕೊಳ್ಳುವ ಮೂಲಕ, ನಿಮ್ಮ ಹೆಬ್ಬೆರಳನ್ನು ನಿಮ್ಮ ಅಂಗೈಯಲ್ಲಿ ಸಿಕ್ಕಿಸಿ, ನಂತರ ನಿಮ್ಮ ಬೆರಳುಗಳನ್ನು ಮುಚ್ಚುವ ಮೂಲಕ ಸನ್ನೆ ಮಾಡಬೇಕು ಎಂದು ಹೇಳಿಕೊಟ್ಟಿತ್ತು. ಈ ಸನ್ನೆಯನ್ನು ಟಿಕ್‍ಟಾಕ್ ನಲ್ಲಿ ಹೆಚ್ಚು ಬಳಸಿದ್ದು, ಇಂದು ಬಾಲಕಿಯ ಜೀವ ಉಳಿಸಲು ಸಹಾಯವಾಗಿದೆ.