ಮಾಸ್ಕೋ: ನಾಪತ್ತೆಯಾಗಿದ್ದ ರಷ್ಯಾದ (Russia) Mi-8T ಹೆಲಿಕಾಪ್ಟರ್ ಕಮ್ಚಟ್ಕಾದ ಪೂರ್ವ ಪರ್ಯಾಯ ದ್ವೀಪದ ಬಳಿ ಪತ್ತೆಯಾಗಿದ್ದು, ಹೆಲಿಕಾಪ್ಟರ್‌ನಲ್ಲಿದ್ದ (Helicopter) 22 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
22 ಜನರನ್ನು ಹೊತ್ತ ರಷ್ಯಾದ Mi-8T ಹೆಲಿಕಾಪ್ಟರ್ ಶನಿವಾರ ವಚ್ಕಜೆಟ್ಸ್ ವಾಲ್ಕೆನೊ ಎಂಬಲ್ಲಿಂದ ಹೊರಟು ನಾಪತ್ತೆಯಾಗಿತ್ತು. ಇದಾದ ಒಂದು ದಿನಗಳ ಬಳಿಕ ಕಮ್ಚಟ್ಕಾದ ಪೂರ್ವ ಪರ್ಯಾಯ ದ್ವೀಪದಲ್ಲಿ ಪತನಗೊಂಡಿರುವುದು ಗೊತ್ತಾಗಿದೆ. ಅದಕ್ಕೆ ಪುರಕವಾಗಿ ಹೆಲಿಕಾಪ್ಟರ್‌ನ ಅವಶೇಷಗಳು ಸಿಕ್ಕಿವೆ. ಆದರೆ ಹೆಲಿಕಾಪ್ಟರ್‌ನಲ್ಲಿದ್ದ 22 ಮಂದಿಯೂ ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ಭಾನುವಾರ ತಿಳಿಸಿದೆ. ಇದನ್ನೂ ಓದಿ: ʻಪಬ್ಲಿಕ್ ಟಿವಿʼ ವಿದ್ಯಾಮಂದಿರ ಪಿಜಿ ಶೈಕ್ಷಣಿಕ ಮೇಳಕ್ಕೆ ಅದ್ಧೂರಿ ತೆರೆ
Advertisement
Advertisement
ಮಾಸ್ಕೋದಿಂದ (Moscow) ಸುಮಾರು 7,100 ಕಿ.ಮೀ (4,400 ಮೈಲುಗಳು) ಕಮ್ಚಟ್ಕಾದ ಪೂರ್ವ ಪರ್ಯಾಯ ದ್ವೀಪದಲ್ಲಿ ವಾರಾದ್ಯಂತದಲ್ಲಿ ಮಳೆ, ಗಾಳಿಯೊಂದಿಗೆ ಚಂಡಮಾರುತ ಹೆಚ್ಚಾಗಿತ್ತು. ಈ ಕಾರಣದಿಂದಾಗಿ ದುರಂತ ಸಂಭವಿಸಿದೆ ಅನ್ನೂದು ಪ್ರಾಥಮಿಕ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: Bengaluru | ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿ ಆಯುಕ್ತರಿಗೆ ಡಿಸಿಎಂ 15 ದಿನಗಳ ಗಡುವು
Advertisement