ರಾಯಚೂರು: ನಗರದಿಂದ ಕಾಣೆಯಾಗಿದ್ದ ನಾಲ್ವರು ಪಿಯುಸಿ ವಿದ್ಯಾರ್ಥಿನಿಯರು ಕೊನೆಗೂ ಪತ್ತೆಯಾಗಿದ್ದಾರೆ.
ಹುಬ್ಬಳ್ಳಿಯಲ್ಲಿ ಪತ್ತೆಯಾಗಿರುವ ಇಬ್ಬರು ವಿದ್ಯಾರ್ಥಿನಿಯರು ಈಗಾಗಲೇ ರಾಯಚೂರಿಗೆ ಬಂದಿದ್ದಾರೆ, ಇನ್ನಿಬ್ಬರು ವಿದ್ಯಾರ್ಥಿನಿಯರನ್ನು ಪೊಲೀಸರು ಕರೆತರುತ್ತಿದ್ದಾರೆ. ಇದರಿಂದ ಆತಂಕದಲ್ಲಿದ್ದ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ: ಸ್ವಾತಂತ್ರ್ಯ ಸಿಕ್ಕಾಗಿನಿಂದಲೂ RSS ಕಚೇರಿ ಮೇಲೆಯೇ ಭಾರತದ ಬಾವುಟ ಹಾರಿಸಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್
Advertisement
Advertisement
ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ ಎನ್ನುವ ಹಾಗೇ ಹೇಳದೇ ಕೇಳದೆ ಮನೆ ಬಿಟ್ಟು ಹೋಗಿದ್ದ ರಾಯಚೂರಿನ ನಾಲ್ವರು ಅಪ್ರಾಪ್ತೆಯರು ಕೊನೆಗೂ ಪತ್ತೆಯಾಗಿದ್ದಾರೆ. ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ರಾಯಚೂರು ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ನಾಲ್ಕು ವಿದ್ಯಾರ್ಥಿನಿಯರು ಹುಬ್ಬಳ್ಳಿಯಲ್ಲಿ ಪತ್ತೆಯಾಗಿದ್ದಾರೆ. ಇದನ್ನೂ ಓದಿ: ನಿರ್ಗಮಿತ ರಾಷ್ಟ್ರಪತಿಗೆ ಮುಫ್ತಿ ಅಪಮಾನ- ಖರ್ಗೆಗೆ ಆಸನ ನಿಗದಿಯಲ್ಲಿ ಶಿಷ್ಟಾಚಾರ ಉಲ್ಲಂಘನೆ
Advertisement
ಜುಲೈ 23 ರಂದು ತಮ್ಮ ಮನೆಗಳಿಂದ ಹೊರಟ ವಿದ್ಯಾರ್ಥಿನಿಯರು ಅತ್ತ ಕಾಲೇಜಿಗೂ ಹೋಗದೇ, ಇತ್ತ ಮನೆಗೂ ವಾಪಸ್ ಆಗದೆ ಕಾಣೆಯಾಗಿದ್ದರು. ವಿಜ್ಞಾನ ವಿಭಾಗದ ಮೂವರು ಹಾಗೂ ವಾಣಿಜ್ಯ ವಿಭಾಗದ ಓರ್ವ ವಿದ್ಯಾರ್ಥಿನಿ ಮನೆಬಿಟ್ಟು ಹೋಗಿದ್ದರು. ಇದರಲ್ಲಿ ಇಬ್ಬರು ಶಕ್ತಿನಗರ ಮತ್ತು ಇನ್ನಿಬ್ಬರು ರಾಯಚೂರು ನಗರದ ವಿದ್ಯಾರ್ಥಿನಿಯರೇ ಆಗಿದ್ದರು.
Advertisement
ವಿದ್ಯಾರ್ಥಿನಿಯರ ಪತ್ತೆ ಕಾರ್ಯಕ್ಕೆ ಎರಡು ವಿಶೇಷ ಪೊಲೀಸ್ ತನಿಖಾ ತಂಡ ರಚಿಸಲಾಗಿತ್ತು. ಕಾಲೇಜಿನಲ್ಲೂ ವಿದ್ಯಾರ್ಥಿಗಳ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದರು. ಈ ವೇಳೆ ಕಳೆದ ನಾಲ್ಕು ದಿನಗಳಿಂದ ಗೈರಾಗಿದ್ದಾರೆ ಎಂದು ಪ್ರಾಂಶುಪಾಲ ಚಂದ್ರಶೇಖರ ತಿಳಿಸಿದ್ದರು. ಇದನ್ನೂ ಓದಿ: ನನ್ನ ಕೋಚ್‌ನಿಂದಲೇ ನಿರಂತರ ಕಿರುಕುಳ – ಒಲಿಂಪಿಕ್ಸ್ ಪದಕ ವಿಜೇತೆ ಲೊವ್ಲಿನಾ ಗಂಭೀರ ಆರೋಪ
ನಾಲ್ವರಲ್ಲಿ ಓರ್ವ ವಿದ್ಯಾರ್ಥಿನಿ ಮಾತ್ರ ಮೊಬೈಲ್ ಫೋನ್ ತೆಗೆದುಕೊಂಡು ಹೋಗಿದ್ದಳು. ಕೊನೆಗೂ ಪೊಲೀಸರು ವಿದ್ಯಾರ್ಥಿನಿಯರನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿಯಿಂದ ರಾಯಚೂರಿಗೆ ಇಬ್ಬರು ಬಸ್ ಹತ್ತಿ ಬರುವಾಗ ಪತ್ತೆಯಾಗಿದ್ದು ಆ ಇಬ್ಬರು ವಿದ್ಯಾರ್ಥಿನಿಯರನ್ನ ಕರೆತರಲಾಗಿದೆ. ಇನ್ನಿಬ್ಬರು ಹುಬ್ಬಳ್ಳಿಯಲ್ಲೇ ಉಳಿದಿದ್ದು ಅವರನ್ನ ಪೊಲೀಸರು ಪತ್ತೆಹಚ್ಚಿ ತಮ್ಮ ವಶದಲ್ಲಿರಿಸಿಕೊಂಡಿದ್ದಾರೆ. ವಿಚಾರಿಸಿ ರಾಯಚೂರಿಗೆ ಕಳುಹಿಸಿಕೊಡಲಿದ್ದಾರೆ. ವಿದ್ಯಾರ್ಥಿನಿಯರ ಜೊತೆ ಇಬ್ಬರು ಯುವಕರು ಇದ್ದು ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.
ಈ ಘಟನೆಯಿಂದ ಉಳಿದ ವಿದ್ಯಾರ್ಥಿಗಳ ಪೋಷಕರು ಸಹ ಆತಂಕಕ್ಕೆ ಒಳಗಾಗಿದ್ದರು. ಸದ್ಯ ಪ್ರಕರಣ ಸುಖಾಂತ್ಯವಾಗಿದೆ. ಆದ್ರೆ ವಿದ್ಯಾರ್ಥಿನಿಯರು ಯಾಕೆ ಹುಬ್ಬಳ್ಳಿಗೆ ಹೋಗಿದ್ದರು? ಅಲ್ಲಿ ಏನ್ ಮಾಡಿದ್ದರು? ಇನ್ನಿಬ್ಬರು ಯಾಕೆ ಅಲ್ಲೇ ಉಳಿದುಕೊಂಡಿದ್ದರು ಅನ್ನೋ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ, ವಿಚಾರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.