ಕಾರವಾರ: ನಾಪತ್ತೆಯಾಗಿದ್ದ ಪೊಲೀಸ್ ಅಧಿಕಾರಿಗಳು ಸೇಫ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.
ಭಾನುವಾರ ಸಂಜೆ ಪ್ರಕರಣವೊಂದರ ಮಾಹಿತಿ ಕಲೆ ಹಾಕಲೆಂದು ಡಿವೈಎಸ್ಪಿ ಶಂಕರ್ ಮಾರಿಯಾಳ್ ಹಾಗೂ ಕೆಲವು ಪೊಲೀಸ್ ಅಧಿಕಾರಿಗಳು ತೆರಳಿದ್ದರು. ಹೀಗೆ ತೆರಳಿದ್ದವರು ಕೈಗಾ ಬಾರೆ ರಸ್ತೆ ಸಮೀಪ ನಾಪತ್ತೆಯಾಗಿದ್ದರು.
ಬಳಿಕ ಅವರ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಯಿತು. ಅಧಿಕಾರಿಗಳ ತಂಡವೊಂದು ಫೋನ್ ಕಾಲ್ ಒಂದರ ಪತ್ತೆಗಾಗಿ ಕೂಂಬಿಂಗ್ ನಡೆಸಿತ್ತು. ಹೀಗಾಗಿ ಇಂದು ಬೆಳಗ್ಗೆ ಪೋನ್ ಸಂಪರ್ಕಕ್ಕೆ ಸಿಕ್ಕಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಸದ್ಯ ಪೊಲೀಸ್ ಅಧಿಕಾರಿಗಳ ತಂಡ ಶೋಧ ಕಾರ್ಯಾಚರಣೆ ಮುಂದುವರಿಸಿದೆ. ಇದನ್ನೂ ಓದಿ: ಪ್ರಕರಣದ ಮಾಹಿತಿ ಕಲೆಹಾಕಲು ಹೋಗಿದ್ದ ಕಾರವಾರದ ಡಿವೈಎಸ್‍ಪಿ ನಾಪತ್ತೆ