ಬೆಂಗಳೂರು: ಕಾಂಗ್ರೆಸ್ (Congress) ನಾಯಕ ದಿನೇಶ್ ಗುಂಡೂರಾವ್ (Dinesh Gundu Rao) ಮನೆಯಿಂದ ನಾಪತ್ತೆಯಾಗಿದ್ದ ಕೆಲಸಗಾರ ಪತ್ತೆಯಾಗಿದ್ದಾನೆ.
Advertisement
ಕಳೆದ ಮೂರು ವರ್ಷಗಳಿಂದ ದಿನೇಶ್ ಗುಂಡೂರಾವ್ ಮನೆಯಲ್ಲಿ ಪಶ್ಚಿಮ ಬಂಗಾಳ ಮೂಲದ ಸಂಜು ಶರ್ಮಾ (41) ಕೆಲಸ ಮಾಡಿಕೊಂಡಿದ್ದ. ಸೆಪ್ಟೆಂಬರ್ 2 ರಂದು ಬೆಳಗ್ಗೆ ಮನೆಯಿಂದ ಹೊರ ಹೋದಾತ ವಾಪಸ್ ಬಂದಿರಲಿಲ್ಲ ಎಂದು ದಿನೇಶ್ ಗುಂಡೂರಾವ್ ಆಪ್ತ ಸಹಾಯಕರಿಂದ ಸಂಜಯನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದನ್ನೂ ಓದಿ: ದಿನೇಶ್ ಗುಂಡೂರಾವ್ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿ ನಾಪತ್ತೆ – ಪ್ರಕರಣ ದಾಖಲು
Advertisement
Advertisement
ಇದೀಗ ನಾಪತ್ತೆಯಾಗಿದ್ದ ಸಂಜು ಶರ್ಮಾ ಪತ್ತೆಯಾಗಿದ್ದಾನೆ. ಸಂಜಯನಗರ ಪೊಲೀಸರು ದೂರು ದಾಖಲಾದ ಬಳಿಕ ಸಂಜು ಶರ್ಮಾ ಪತ್ತೆಗಾಗಿ ಹುಡುಕಾಟ ಆರಂಭಿಸಿದ್ದರು. ಇದೀಗ ಸಂಜು ಶರ್ಮಾ ಪತ್ತೆಯಾಗಿದ್ದು, ಆತನನ್ನು ಗುಂಡೂರಾವ್ ಮನೆಗೆ ಪೊಲೀಸರು ಒಪ್ಪಿಸಿದ್ದಾರೆ. ಇದನ್ನೂ ಓದಿ: ಸಾವಿತ್ರಿಬಾಯಿ ಫುಲೆ ಪಠ್ಯ ಕೈ ಬಿಟ್ಟಿಲ್ಲ – ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು ಕಾಂಗ್ರೆಸ್ಸಿಗರ ದಿನಚರಿಯಾಗಿದೆ: ಬಿ.ಸಿ ನಾಗೇಶ್