– ಕಾಣೆಯಾದ ಗಂಡು ಮಗು ಮೂರು ದಿನಗಳ ಹಿಂದೆ ಜನಿಸಿತ್ತು
ರಾಯಚೂರು: ನಗರದ ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ನವಜಾತ ಶಿಶು ಕಾಣೆಯಾಗಿದ್ದು, ಇದೀಗ ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮಾರ್ಚ್ 26 ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಜನಿಸಿದ್ದ ಗಂಡು ಶಿಶು ನಾಪತ್ತೆಯಾಗಿದೆ. ದೇವದುರ್ಗ ತಾಲೂಕಿನ ಮಲ್ಲಾಪುರ ಗ್ರಾಮದ ಯಲ್ಲಮ್ಮ ತಿಮ್ಮಣ್ಣ ದಂಪತಿಗಳ ಮಗು ಕಾಣೆಯಾಗಿರುವುದು ಇಡೀ ಆಸ್ಪತ್ರೆಯನ್ನೇ ಬೆಚ್ಚಿಬೀಳಿಸಿದೆ.
Advertisement
ಆಸ್ಪತ್ರೆಯ ನವಜಾತ ಶಿಶು ಸೂಕ್ಷ್ಮ ನಿಗಾ ಘಟಕದಲ್ಲಿದ್ದು, ಬೆಳಿಗ್ಗೆ 6 ಗಂಟೆಗೆ ತಾಯಿಗೆ ನೀಡಲಾಗಿತ್ತು. ಹಾಲುಣಿಸಿದ ಬಳಿಕ ತಾಯಿ ಯಲ್ಲಮ್ಮ ಎನ್‍ಐಸಿಯುಗೆ ಮಗುವನ್ನ ನೀಡಿದ್ದಾರೆ. ಇದಾದ ಬಳಿಕವೇ ಮಗು ನಾಪತ್ತೆಯಾಗಿದೆ. ಆಸ್ಪತ್ರೆಯ ರಿಜಿಸ್ಟರ್ ಪುಸ್ತಕದಲ್ಲಿ ಬೆಳಿಗ್ಗೆ 8:40 ರ ಸುಮಾರಿಗೆ ಮಗುವನ್ನ ಪುನಃ ಪೋಷಕರಿಗೆ ನೀಡಲಾಗಿದೆ. ಆದ್ರೆ ಶಿಶುವಿನ ತಾಯಿ ನನಗೆ ಮಗುವನ್ನು ನೀಡಿಲ್ಲ ಅಂತಿದ್ದಾರೆ. ಹಾಗಾದ್ರೆ ಮಗು ಎಲ್ಲಿ ಹೋಯ್ತು ಅನ್ನೋದು ತಿಳಿದು ಬಂದಿಲ್ಲ.
Advertisement
ಈ ಹಿನ್ನೆಲೆ ಆಸ್ಪತ್ರೆ ವೈದ್ಯರು ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಗೆ ಮೌಖಿಕ ದೂರನ್ನು ನೀಡಿದ್ದಾರೆ. ಆಸ್ಪತ್ರೆ ಪರಿಶೀಲನೆ ನಡೆಸಿರುವ ಪೊಲೀಸರಿಗೆ ಹೊಸದಾಗಿ ಅಳವಡಿಸಿರುವ ಸಿಸಿ ಕ್ಯಾಮೆರಾದಿಂದಲೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆಸ್ಪತ್ರೆಯ ಆಡಳಿತ ವ್ಯವಸ್ಥೆ ಹಾಗೂ ಸಿಬ್ಬಂದಿಗಳ ಬೇಜವಾಬ್ದಾರಿತನವೇ ಘಟನೆಗೆ ಕಾರಣ ಅಂತ ಆರೋಪಿಸಿಲಾಗಿದೆ. ಸದ್ಯ ಮಗುವನ್ನ ಕಳೆದುಕೊಂಡಿರುವ ತಾಯಿ ಕಂಗಾಲಾಗಿದ್ದಾರೆ.
Advertisement