ಕಾಣೆಯಾಗಿದ್ದ ವ್ಯಕ್ತಿ ಅಸ್ಥಿಪಂಜರವಾಗಿ ಪತ್ತೆ – ನಿನ್ನೆ ರುಂಡ ಇಂದು ಮುಂಡ ಪತ್ತೆ

Public TV
1 Min Read
Skeleton Raichur

ರಾಯಚೂರು: ಕಾಣೆಯಾಗಿದ್ದ ವ್ಯಕ್ತಿಯ ಅಸ್ಥಿಪಂಜರವಾಗಿ (Skeleton) ಪತ್ತೆಯಾಗಿರುವ ಘಟನೆ ತಾಲೂಕಿನ ಕೊರ್ತಕುಂದಾ ಗ್ರಾಮದಲ್ಲಿ ನಡೆದಿದೆ.

ರಸೂಲ್ ಸಾಬ್ (45) ಅಸ್ಥಿಪಂಜರವಾಗಿ ಪತ್ತೆಯಾದ ವ್ಯಕ್ತಿ. ರಸೂಲ್ ಅವರು ಜನವರಿ 4 ರಂದು ನಾಪತ್ತೆಯಾಗಿದ್ದರು. ಈ ಹಿನ್ನೆಲೆ ಅವರ ಕುಟುಂಬಸ್ಥರು ಎಲ್ಲೆಡೆ ಹುಡುಕಾಟ ನಡೆಸಿದ್ದರೂ ಅವರು ಮಾತ್ರ ಪತ್ತೆಯಾಗಿರಲಿಲ್ಲ. ಇದನ್ನೂ ಓದಿ: ಹೋರಿ ತಿವಿದು ಯುವಕ ಸಾವು

ಸೋಮವಾರ ಗ್ರಾಮದ ಹೊರವಲಯದಲ್ಲಿರುವ ದರ್ಗಾ ಬಳಿ ಅವರ ರುಂಡ (Head)  ಪತ್ತೆಯಾಗಿದ್ದು, ಇಂದು ದರ್ಗಾದಿಂದ 1 ಕಿ.ಮೀ ದೂರದಲ್ಲಿರುವ ಬೆಟ್ಟದಲ್ಲಿ ಮುಂಡ (Body)  ಪತ್ತೆಯಾಗಿದೆ. ಮೃತ ದೇಹದ ಮೇಲಿದ್ದ ಬಟ್ಟೆಗಳ ಆಧಾರದ ಮೇಲೆ ರಸೂಲ್ ಅವರು ಎಂದು ಗುರುತಿಸಿ ಪತ್ತೆಮಾಡಲಾಗಿದೆ. ಇದನ್ನೂ ಓದಿ:  ಕೈ ಮುಖಂಡನ ಹೆಸರು ಬರೆದಿಟ್ಟು ವೈದ್ಯ ಆತ್ಮಹತ್ಯೆ

ಸಾಬ್ ಅವರನ್ನು ಯಾರೋ ಕೊಲೆ ಮಾಡಿ ಎಸೆದಿದ್ದಾರೆ ಎಂದು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಯಾಪಲದಿನ್ನಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ನಿಖಿಲ್ ಮಂಡ್ಯ ಕಣದಿಂದ ಹಿಂದೆ ಸರಿದಿದ್ದೇಕೆ?

 

Share This Article