ಬೆಳಗಾವಿ: ಅಥಣಿಯಲ್ಲಿ (Atahani) ಕಳೆದ 3 ದಿನಗಳ ಹಿಂದೆ ನಾಪತ್ತೆಯಾಗಿದ್ದ ವಕೀಲ (Lawyer) ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾರೆ.
ಅಥಣಿ ತಾಲೂಕಿನ ಯಲ್ಲಮ್ಮವಾಡಿ ಗ್ರಾಮದ ನಿವಾಸಿ ಸುಭಾಷ್ ಪಾಟಣಕರ(56) ಮೃತ ದುರ್ದೈವಿ. ಡಿಸೆಂಬರ್ 3 ರಂದು ನಾಪತ್ತೆಯಾಗಿದ್ದ ಸುಭಾಷ್ ಮೃತದೇಹ ಅಥಣಿ ತಾಲೂಕಿನ ಹಲ್ಯಾಳ- ದರೂರ ಕೃಷ್ಣಾ ನದಿಯಲ್ಲಿ ಪತ್ತೆಯಾಗಿದೆ. ಇದನ್ನೂ ಓದಿ: ಸಂಪನ್ಮೂಲ ಕ್ರೋಢೀಕರಣಕ್ಕೆ ಹೊಸ ದಾರಿ – 6,105 ಕೋಟಿ ದಂಡ ಸಂಗ್ರಹಕ್ಕೆ ಒನ್‌ಟೈಮ್ ಸೆಟಲ್ಮೆಂಟ್ ಆಫರ್!
Advertisement
Advertisement
ಎಸ್‌ಡಿಆರ್‌ಎಫ್, ಅಗ್ನಿಶಾಮಕ, ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರ ತೆಗೆದಿದ್ದಾರೆ. ಗುರುವಾರ ಸುಭಾಷ್ ಪಾಟಣಕರ ಪತ್ತೆಗಾಗಿ ಆಗ್ರಹಿಸಿ ಪೋಲಿಸರ ವಿರುದ್ಧ ವಕೀಲರು ಪ್ರತಿಭಟನೆ ನಡೆಸಿದ್ದರು.
Advertisement
ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದನ್ನು ಪತ್ತೆಹಚ್ಚಲು ತನಿಖೆ ನಡೆಸುವಂತೆ ವಕೀಲರು ಆಗ್ರಹಿಸಿದ್ದಾರೆ. ಅಥಣಿ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ಮೃತದೇಹ ಪತ್ತೆಯಾಗಿದೆ.
Advertisement